ಮಂಗಳೂರು :ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು” ಕೊರೋನಾ ” ಕುರಿತಂತೆ ಬಹುಭಾಷಾ ಕವನಗಳನ್ನು ಆಹ್ವಾನಿಸಿದೆ. ದೇಶದಲ್ಲಿ ‘ ಜನತಾ ಕರ್ಫ್ಯೂ’ ನಿಂದ ಆರಂಭಗೊಂಡು ‘ ಲಾಕ್ ಡೌನ್ ‘ ವರೆಗೆ ಅನುಭವಿಸಿದ ಭಾವನಾತ್ಮಕ ಸಂಗತಿಗಳು, ಬದುಕಿದ ರೀತಿ, ಸರಕಾರದ ನಿರ್ವಹಣೆ, ಆರೋಗ್ಯ ಸೇನಾನಿಗಳು ಸ್ಪಂದಿಸಿದ ರೀತಿ, ಹೀಗೆ ಹತ್ತು ಹಲವು ಬಗೆಯ ಅನುಭವಗಳಿಗೆ ‘ಕವನ’ ದ ರೂಪವನ್ನು ನೀಡಿ ಕಳುಹಿಸಿಕೊಡುವಂತೆ ಕೋರಲಾಗಿದೆ.
ಕನ್ನಡ,ತುಳು,ಕೊಂಕಣಿ,ಬ್ಯಾರಿ,ಇಂಗ್ಲೀಷ್ ಭಾಷೆಗಳಲ್ಲಿ ರಚಿಸಿದ ಕವನ ಗಳನ್ನು – ಅಧ್ಯಕ್ಷರು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು- 575003, ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿಕೊಡಬೇಕೆಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.