ಉಡುಪಿ: ಕೋವಿಡ್ ಕೊರೋನಾ ಪ್ರಕರಣದಲ್ಲಿ ಹಸಿರು ಝೋನ್ ಗೆ ಬಂದಿದ್ದ ಉಡುಪಿ ಜಿಲ್ಲೆಯನ್ನೇ ಆತಂಕಕ್ಕೊಳಪಡಿಸಿದ್ದ ಮಂಡ್ಯದ ಕೊರೋನಾ ಪಾಸಿಟಿವ್ ವ್ಯಕ್ತಿಯ ತಂಗಿದ್ದ ತೆಕ್ಕಟ್ಟೆ ಪೆಟ್ರೋಲ್ ಪಂಪ್ ಹಾಗೂ ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿಗಳು ಸೇರಿ ೧೮ ಮಂದಿಯ ಕೊರೋನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು ತೆಕ್ಕಟ್ಟೆ ಸೇರಿದಂತೆ ಸ್ಥಳೀಯ ಪರಿಸದ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮುಂಬೈನಿಂದ ಖರ್ಜೂರ ತುಂಬಿದ ಲಾರಿಯಲ್ಲಿ ಮಂಡ್ಯ ಮೂಲದ ವ್ಯಕ್ತಿ ಬೈಂದೂರು ಮಾರ್ಗವಾಗಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಮೂಲಕ ಆಗಮಿಸಿ ಎ.21 ಸಂಜೆ ತೆಕ್ಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ವಿಶ್ರಾಂತಿ ಪಡೆಯಲು ನಿಂತಿದ್ದು, ತೆಕ್ಕಟ್ಟೆ ಪೆಟ್ರೋಲ್ ಪಂಪ್ ಬಳಿ ಸ್ನಾನ ಮಾಡಿ ಊಟ ಮಾಡಿ ಎ.22 ಮುಂಜಾನೆ 3.30ಕ್ಕೆ ಹೋಗಿದ್ದರು. ಬಳಿಕ ಇಲ್ಲಿನ ಸಾಸ್ತಾನ ಟೋಲ್ ಗೇಟ್ ನಲ್ಲಿ ಕೆಲ ಹೊತ್ತು ನಿಂತು ತೆರಳಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರೋನಾ ಪಾಸಿಟಿವ್ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಅಧ್ಯಯನ ಮಾಡಿದ ಅಧಿಕಾರಿಗಳು ತೆಕ್ಕಟ್ಟೆ ಪೆಟ್ರೋಲ್ ಬಂಕ್ ಮಾಲಿಕ ಸೇರಿ 11 ಮಂದಿ ಸಿಬ್ಬಂದಿಗಳು, ಸಾಸ್ಥಾನ ಟೋಲ್ ಗೇಟಿನ ೭ ಮಂದಿ ಸಿಬ್ಬಂದಿಗಳನ್ನು ಕ್ವಾರೆಂಟೈನ್ ಮಾಡಲಾಗಿತ್ತು. ಕ್ವಾರೆಂಟೈನ್ ನಲ್ಲಿರುವ ಎಲ್ಲರ ವೈದ್ಯಕೀಯ ಪರೀಕ್ಷಾ ವರದಿ ಶುಕ್ರವಾರ ಬಂದಿದ್ದು ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ‘ಕನ್ನಡಿಗ ವರ್ಲ್ಡ್’ ಜೊತೆ ಮಾತನಾಡಿದ ಅವರು, ಪ್ರಕರಣ ನಡೆದ ದಿನದಿಂದ 12 ದಿನಗಳ ಕಾಲ ಅಂದರೆ ಇನ್ನು ನಾಲ್ಕು ದಿನ ಎಲ್ಲರೂ ಕ್ವಾರೆಂಟೈನ್ ನಲ್ಲಿ ಇರಲಿದ್ದಾರೆ. ಬಳಿಕ ಇನ್ನೊಂದು ಪರೀಕ್ಷೆ ನಡೆಸಿ ಅದರ ಮಾದರಿಯ ವರದಿ ಬಂದ ಬಳಿಕ ಅವರನ್ನು ಹೋಂ ಕ್ವಾರೆಂಟೈನ್ ಮಾಡಲಾಗುತ್ತದೆ. ಸದ್ಯ ಪೆಟ್ರೋಲ್ ಪಂಪ್ ಸೀಲ್ ಡೌನ್ ಮಾಡಲಾಗಿದೆ. ಆ ಭಾಗದ ಜನರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ ಎಂದಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
ಇದನ್ನು ಓದಿರಿ-
Big Breaking: ತ್ರಾಸಿಯಲ್ಲ….ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್, ಹಲವರು ಕ್ವಾರೆಂಟೈನ್‌ಗೆ
ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್’ಗೆ ಕ್ರಮ- ಬ್ಯಾರಿಕೇಡ್ ಅಳವಡಿಕೆ, ಕ್ರಿಮಿನಾಶಕ ಸಿಂಪಡಣೆ (Video)
ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್; 19 ಮಂದಿ ಕ್ವಾರೆಂಟೈನ್‌ಗೆ- ಅನಗತ್ಯ ಗೊಂದಲ ಬೇಡ, ನಾಳೆ ವರದಿ ಸಾಧ್ಯತೆ
Comments are closed.