ಮಂಗಳೂರು: ವಾದ್ಯಕಲಾವಿದರು, ದೇವಾಸ್ಥಾನಗಳಲ್ಲಿ ಶುಚಿತ್ವ ಮಾದುವ ಮತ್ತು ಬಾಣಸಿಗ ದೇವಾಡಿಗರಿಗೆ ಸರ್ಕಾರ ಅರ್ಥಿಕ ನೆರವು ನೀಡಬೇಕು ಎಂದು ಬೆಂಗಳೂರು ಹಾಗೂ ಮಂಗಳೂರಿನ ರಾಜ್ಯ ದೇವಾಡಿಗರ ಸಂಘದ ವತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಮಂಗಳೂರಿನಲ್ಲಿ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷರಾದ ಡಾ.ಕೆ. ದೇವರಾಜ್ ಅವರು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ನಳೀನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮಾತ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಶಿವನಂದ ಮೊಯ್ಲಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ಕುಸುಮ ಉಪಸ್ಥಿತರಿದ್ದರು.
ಬೆಂಗಳೂರು ಸಂಘದಿಂದ ಸಿಎಂಗೆ ಮನವಿ:
ವಾದ್ಯಕಲಾವಿದರು, ದೇವಾಸ್ಥಾನಗಳಲ್ಲಿ ಶುಚಿತ್ವ ಮಾದುವ ಮತ್ತು ಬಾಣಸಿಗ ದೇವಾಡಿಗರಿಗೆ ಸರ್ಕಾರ ಅರ್ಥಿಕ ನೆರವು ನೀಡಬೇಕು ಎಂದು ದೇವಾಡಿಗರ ಸಂಘ, ಬೆಂಗಳೂರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ್. ದೇವಾಡಿಗರು ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾದ್ಯ ಕಲಾವಿದರಾಗಿದ್ದು ತಮ್ಮ ಜೀವನೋಪಾಯಕ್ಕಾಗಿ ದೇವಸ್ಥಾನ ಮತ್ತು ಸಮಾರಂಭಗಳಲ್ಲೂ ಕೆಲಸ ನಿರ್ವಹಿಸುತ್ತಾರೆ, ಆದರೆ ಕಳೆದ ಮೂರು ತಿಂಗಳುಗಳಿಂದ ಯಾವುದೇ ಸಂಪಾದನೆ ಇಲ್ಲದೆ ಅವರು ಸಂಕಷ್ಟದಲ್ಲಿ ಬದುಕು ಕಳೆಯುತ್ತಿದ್ದಾರೆ ಎಂದಿದ್ದಾರೆ.
ಆ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಲ್ಪಟ್ಟ ಅನುದಾನವನ್ನು ಈ ಸಮುದಾಯಕ್ಕೂ ನೀಡಬೇಕು ಎಂದು ದೇವಾಡಿಗ ಸಂಘದ ಪರವಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Comments are closed.