ಮಂಗಳೂರು : ಮಂಗಳೂರಿನಲ್ಲಿ ಸೆಂಟ್ರಲ್ ಮಾರುಕಟ್ಟೆಯ ಒಳಗಡೆ ಹಲವು ಸಣ್ಣ ತರಕಾರಿ ಅಂಗಡಿ ಮಾಲೀಕರಿಗೆ ಈಗಾಗಲೇ ಅವರಿಗೆ 4 ತಿಂಗಳ ನಂತರ ವ್ಯವಸ್ಥಿತವಾದ ರೀತಿಯಲ್ಲಿ ಮಾರುಕಟ್ಟೆ ಮಾಡಿಕೊಡುವಂತಹ ನಿಟ್ಟಿನಲ್ಲಿ ಈಗಾಗಲೇ 5.25 ಕೋಟಿ ಕಾಮಗಾರಿ ಪ್ರಾರಂಭವಾಗಿದೆ.
ಅಲ್ಲಿಯ ತನಕ ತಾತ್ಕಾಲಿಕವಾಗಿ ಶೆಡ್ ಮಾಡಿಕೊಡುತ್ತೇನೆ ಎಂದು ಈ ಕ್ಷೇತ್ರದ ಶಾಸಕನಾಗಿ ಆಶ್ವಾಸನೆಯನ್ನು ಕೊಟ್ಟಿದ್ದೆ,ಅದರ ಕಾಮಗಾರಿಗಳನ್ನು ಈಗಾಗಲೇ ಮಹಾನಗರ ಪಾಲಿಕೆ ವತಿಯಿಂದ ಲೇಡಿಗೋಶನ್ ನಿಂದ ಕಲ್ಪನಾ ಸ್ವೀಟ್ಸ್ ವರೆಗೆ, ಟೌನ್ ಹಾಲ್ ಕಡೆಯಿಂದ ಸ್ಟೇಟ್ ಬ್ಯಾಂಕ್ ತನಕ ಮತ್ತು ಉಳಿದಂತ ಮಾರುಕಟ್ಟೆ ಗಳಿಗೆ ಹಳೆ ಬಸ್ ಸ್ಟ್ಯಾಂಡ್ ನಲ್ಲಿ ಶೆಡ್ ಗಳನ್ನು ಹಾಕಿ 3-4 ತಿಂಗಳುಗಳ ಮಟ್ಟಿಗೆ ಅಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು. ಅದರ ನಂತರ ಸ್ಮಾರ್ಟ್ ಸಿಟಿ ತಾತ್ಕಾಲಿಕ ಮಾರುಕಟ್ಟೆಗೆ ಎಲ್ಲರಿಗೂ ಸ್ಥಳಾಂತರ ಮಾಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಆ ಪರಿಸರದಲ್ಲಿ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಕೂಡ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಪತ್ರಿಕಾ ಪ್ರಕಟನೆ ಕೊಡಲಿದ್ದೇನೆ. ಈ ಬಗ್ಗೆ ಯಾರಾದರೂ ಗೊಂದಲ ಸೃಷ್ಟಿಸಿ ತಮ್ಮಲ್ಲಿ ಆತಂಕ ಉಂಟುಮಾಡುವ ಪ್ರಯತ್ನ ಮಾಡಿದ್ದಲ್ಲಿ ನೇರವಾಗಿ ಶಾಸಕನಾದ ನನಗೆ ಅಥವಾ ಪಾಲಿಕೆ ಮೇಯರ್ ಅವರಿಗೆ ಸಮಪರ್ಕ ಮಾಡಬಹುದು. ಪ್ರತಿಯೊಬ್ಬರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸುವ ದ್ರಷ್ಟಿಯಲ್ಲಿ ಶಾಸಕನಾಗಿ ನಾನು ಬದ್ಧನಿದ್ದೇನೆ ಎಂದು ಶಾಸಕರು ಹೇಳಿದ್ದಾರೆ.
ಈ ಸಂಧರ್ಭದಲ್ಲಿ ಮೇಯರ್ ಶ್ರೀದಿವಾಕರ್, ಶ್ರೀಮತಿ ಪೂರ್ಣಿಮಾ, ಮನಪಾ ಕಮಿಶನರ್ ಅಜಿತ್ ಕುಮಾರ್ ಶಾನಡಿ,ಮನಪಾ ಜಂಟಿ ಕಮಿಶನರ್ ಸಂತೋಷ್, ಎಇಇ ರವಿಶಂಕರ್ ಉಪಸ್ಥಿತರಿದ್ದರು.
Comments are closed.