ಕುಂದಾಪುರ: ಆಶಾ ಕಾರ್ಯಕರ್ತೆಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದಿಸಿ, ಜೀವ ಬೆದರಿಕೆ ಹಾಕಿದ ಬಗ್ಗೆ ಕುಂದಾಪುರ ಪೊಲೀಸ್ ಠಾನೆಯಲ್ಲಿ ದೂರು ದಾಖಲಾಗಿದೆ.
ಬೀಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವೈದ್ಯರಬೆಟ್ಟು ನಿವಾಸಿ ಸರೋಜ ಎಂಬುವರು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದು ಗುರುವಾರ ಬೆಳಿಗ್ಗೆ 11.30 ಗಂಟೆಗೆ ಗ್ರಾಮದ ಕೋವಿಡ್ ಸೇವೆಯಲ್ಲಿ ಕರ್ತವ್ಯದಲ್ಲಿರುವಾಗ ಅಪಾದಿತ ಅನಂತ ಕಾಮತ್ ಮತ್ತು ಅವರ ಪತ್ನಿ ಗೀತಾ ಯಾನೆ ಅನ್ನಪೂರ್ಣ ಕಾಮತ್ ಎಂಬುವರು ದೂರು ದಾರನ್ನು ಅಡ್ಡಗಟ್ಟಿ ಪದೇ ಪದೇ ನಮ್ಮ ಕಡೆ ಯಾಕೆ ಬರುತ್ತೀಯಾ ಎಂದು ಅವಶ್ಯ ಶಬ್ದಗಳಿಂದ ನಿಂದಿಸಿ ಆಶಾ ಕಾರ್ಯಕರ್ತೆಯ ಬಳಿ ಇದ್ದ ದಾಖಲೆಗಳನ್ನು ಬಲವಂತವಾಗಿ ಎಳೆದು ಮುಖಕ್ಕೆ ಬೀಸಾಡಿ ಮಾನಕ್ಕೆ ದಕ್ಕೆ ಬರುವ ಹಾಗೇ ವರ್ತಿಸಿದ್ದಾರೆ. ಇನ್ನೂಮ್ಮೆ ಈ ಕಡೆ ಬಂದರೇ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಕೊರೊನಾ ಸೊಂಕು ಅಪಾಯಕಾರಿಯಾಗಿದ್ದು ಅಪಾದಿತರು ಯಾವುದೇ ಮುಂಜಾಗೃತ ಕ್ರಮವನ್ನು ಹಾಗೂ ಸುರಕ್ಷತೆಯನ್ನು ವಹಿಸಿದೆ ನಿರ್ಲಕ್ಷ ವಹಿಸಿ ಜಿಲ್ಲಾಧಿಕಾರಿಯವರ ಅದೇಶವನ್ನು ಉಲ್ಲಂಘಿಸಿದ್ದಾರೆ ಎಂದು ದೂರಲಾಗಿದೆ.
ಈ ಕುರಿತು ಕುಂದಾಪುರ ಠಾಣೆಯಲ್ಲಿ 341, 504, 353, 354 , 506, 188, 269, 34ಐಪಿಸಿ ಸೆಕ್ಷನ್ ನಂತೆ ಪ್ರಕರಣ ದಾಖಲಾಗಿದೆ.
Comments are closed.