ಮಂಗಳೂರು : 2020ನೇ ಸಾಲಿನ ಫೆಬ್ರವರಿ 27 ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋರಿಕ್ಷಾ ಪ್ರಯಾಣಿಕರ ವಾಹನಗಳ ಬೇಡಿಕೆ ದರವು ರೂ. 25 ರಿಂದ 30 ರವರೆಗೆ ಏರಿಸಿದ್ದು, ಹಾಗೂ ನಂತರದ ಪ್ರತೀ ಕಿಲೋ ಮೀಟರ್‍ಗೆ ರೂ. 15 ಏರಿಕೆ ಆಗಿದ್ದು, ಲಾಕ್ ಡೌನ್ ನಿಮಿತ್ತ ಈ ಬಾಡಿಗೆ ಏರಿಕೆ ಆಗಿರಲಿಲ್ಲ.
ಆಟೋರಿಕ್ಷಾ ವಾಹನಗಳ ಬಾಡಿಗೆ ಮೀಟರ್ ಮಾಪನಾಂಕ ನಿರ್ಣಯ (Caliberation) ಆಗದೇ ಇರುವುದರಿಂದ ಅದಕ್ಕೆ ತಕ್ಕ ತಾಂತ್ರಿಕ ಡೀಲರುಗಳು ಲಭ್ಯವಿಲ್ಲದಕಾರಣ ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಅಂಗೀಕರಿಸಿದ ಬಾಡಿಗೆ ಪ್ರಕಾರ ಪಟ್ಟಿ (Manual List) ಪ್ರಕಾರ ಪ್ರಯಾಣದ ದರ ನೀಡಿ ಸಹಕರಿಸಬೇಕಾಗಿ ಮಂಗಳೂರು ಆರ್.ಟಿ.ಓ. ಪ್ರಕಟಣೆ ತಿಳಿಸಿದೆ.
Comments are closed.