ಮಂಗಳೂರು,ಮೇ. 17: ನಗರದ ಜಪ್ಪಿನ ಮೊಗರು ನಿವಾಸಿ, 31 ವರ್ಷದ ಯುವಕ ಹಾಗೂ ಯೆಯ್ಯಾಡಿ ಮೂಲದ ಮಹಿಳೆಯೊಬ್ಬರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋವಿಡ್-19 ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮತ್ತೆ ಇಬ್ಬರು ಒಳಗಾಗಿದ್ದಾರೆ. ಒಬ್ಬರು ಮುಂಬೈನಿಂದ ಬಂದವರಾಗಿದ್ದರೆ, ಮತ್ತೊಬ್ಬರ ಸೋಂಕು ಮೂಲ ಇನ್ನೂ ನಿಗೂಢ.
ಜಿಲ್ಲೆಯ 31 ವರ್ಷದ ಯುವಕನೋರ್ವನಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದ್ದು, ಈತನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಮತ್ತೋರ್ವ ಸೋಂಕಿತೆ 35 ವರ್ಷದ ಮಹಿಳೆಯಾಗಿದ್ದು, ಈಕೆ ಮಹಾರಾಷ್ಟ್ರದಿಂದ ಬಂದಿದ್ದರು ಎನ್ನಲಾಗಿದೆ. ಇಬ್ಬರಿಗೂ ಮಂಗಳೂರಿನ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಶನಿವಾರ ಸಂಜೆಯ ನಂತರ 54 ಸೋಂಕು ಪ್ರಕರಣಗಳು ದಾಖಲಾಗಿದೆ. ಇದಿರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ.
ಇವರಿಗೆ ಮಂಗಳೂರಿನ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಶನಿವಾರ ಸಂಜೆಯ ನಂತರ 54 ಸೋಂಕು ಪ್ರಕರಣಗಳು ದಾಖಲಾಗಿದೆ. ಇದಿರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆಯಾಗಿದೆ.
ಮುಖ್ಯಂಶಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಕೊರೋನಾ ಪಾಸಿಟಿವ್
ಮಂಗಳೂರಿನ ಜಪ್ಪಿನಮೊಗರು ನಿವಾಸಿ, 31 ವರ್ಷದ ಯುವಕನಿಗೆ ಪಾಸಿಟಿವ್
ಅನುಮಾನ ಬಂದು ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದ ಯುವಕ
ಕೋವಿಡ್ ಆಸ್ಪತ್ರೆಗೆ ಬಂದು ಸ್ವಯಂ ಪರೀಕ್ಷೆಗೆ ಒಳಗಾಗಿದ್ದ ವ್ಯಕ್ತಿ
ಇನ್ನೋರ್ವ ಮಹಿಳೆಗೂ ಕೊರೋನಾ ಪಾಸಿಟಿವ್
ಮಂಗಳೂರಿನ ಯೆಯ್ಯಾಡಿ ಮೂಲದ 35 ವರ್ಷದ ಮಹಿಳೆಗೆ ಪಾಸಿಟಿವ್
ಮಹಿಳೆ, ಆಕೆಯ ಪತಿ ಮತ್ತು ಮಗು ಕ್ವಾರಂಟೈನ್ ನಲ್ಲಿದ್ದರು
ಮೇ 14 ರಂದು ಮುಂಬೈ ನಿಂದ ಮಂಗಳೂರಿಗೆ ಬಂದಿದ್ದ ಕುಟುಂಬ
Comments are closed.