ಮಂಗಳೂರು, ಮೇ 22 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಮುಂಬಾಯಿಯಿಂದ ಬಂದ 29 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.ಈ ಮೂಲಕ ದಕ್ಷಿಣ ಕನ್ನಡದಲ್ಲಿ ಸೋಂಕು ಪೀಡಿತರ ಸಂಖ್ಯೆ 62ಕ್ಕೇರಿದೆ.
ದಿನಾಂಕ 18ರಂದು ದೊಂಬಿವಲಿ, ಥಾಣೆ, ಮುಂಬಾಯಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿಗೆ ಆಗಮಿಸಿದ ಸುಮಾರು 29 ವರ್ಷದ ಮಹಿಳೆಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಯಲ್ಲಿ ಇವರಿಗೆ ಸೋಂಕು ಇರುವುದು ದೃಢಪಟ್ಟಿರುತ್ತದೆ ಎಂದು ಅರೋಗ್ಯ ಇಲಾಖೆ ಇಂದು ಮಧ್ಯಾಹ್ನ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ ಈ ಬಗ್ಗೆ ಖಚಿತಪಡಿಸಿದೆ.
ಇವರನ್ನು ಬೆಳ್ತಂಗಡಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಸ್ಥಾಪಿಸಲಾದ ಕ್ವಾರೈಂಟೈನ್ ಕೇಂದ್ರದಲ್ಲಿರಿಸಲಾಗಿರುತ್ತದೆ, ಹಾಗೂ ಇವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಪ್ರಮುಖ ಅಂಶಗಳು :
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೊಂದು ಕೊರೋನಾ ಪಾಸಿಟಿವ್
ಬೆಳ್ತಂಗಡಿಯ ಆರಂಬೋಡಿಯ 23 ವರ್ಷದ ಯುವತಿಗೆ ಕೊರೋನಾ ಪಾಸಿಟಿವ್
ಯುವತಿ ಸೇರಿದಂತೆ 9 ಮಂದಿ ಮುಂಬೈನಿಂದ ನಾಲ್ಕು ದಿನಗಳ ಹಿಂದೆ ಬಂದಿದ್ದರು
ಎಲ್ಲರೂ ನಾಲ್ಕು ದಿನದಿಂದ ಕ್ವಾರಂಟೈನ್ ನಲ್ಲಿ ಇದ್ದರು
ಪಾಸಿಟಿವ್ ಪತ್ತೆಯಾದ ಯುವತಿ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲು
ದಕ್ಷಿಣ ಕನ್ನಡದಲ್ಲಿ 62ಕ್ಕೇರಿದ ಕೊರೋನಾ ಪಾಸಿಟಿವ್
Comments are closed.