ಕರಾವಳಿ

ವೋಕಲ್‌ ಫಾರ್ ಲೋಕಲ್‌ ಅಭಿಯಾನಕ್ಕೆ ಧುಮುಕಿದ ಶಾಸಕ ವೇದವ್ಯಾಸ್ ಕಾಮತ್

Pinterest LinkedIn Tumblr

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ವೋಕಲ್‌ ಫಾರ್ ಲೋಕಲ್‌ ಅಭಿಯಾನಕ್ಕೆ ಶಾಸಕ ವೇದವ್ಯಾಸ್‌ ಕಾಮತ್‌ ಬೆಂಬಲ ನೀಡಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಕ್ಕೆ ಕರೆ ನೀಡಿದ್ದಾರೆ. ದೇಶಿಯ ಉತ್ಪಾದನೆಗಳಿಗೆ ಬೆಂಬಲ ನೀಡಿ ದೇಶದ ಆರ್ಥಿಕತೆಯನ್ನು ಉತ್ತುಂಗಕ್ಕೇರಿಸುವ ದೃಷ್ಟಿಯಲ್ಲಿ ವೋಕಲ್‌ ಫಾರ್‌ ಲೋಕಲ್‌ ಅಭಿಯಾನ ಮಹತ್ವ ಪಡೆದಿದೆ.

ಕೊರೊನಾ ಹೊಡೆತಕ್ಕೆ ತತ್ತರಿಸಿರುವ ಭಾರತದ ಆರ್ಥಿಕತೆಗೆ ಪುನಶ್ಚೇತನ ನೀಡವಲ್ಲಿ ಈ ಅಭಿಯಾನ ಮಹತ್ವ ಪಡೆದುಕೊಳ್ಳಲಿದೆ. ಈ ಅಭಿಯಾನಕ್ಕೆ ಮಂಗಳೂರು ದಕ್ಷಿಣ ಶಾಸಕ ಬೆಂಬಲ ನೀಡಿದ್ದು, ಜಿಲ್ಲೆಯಲ್ಲಿ ತಯಾರಾಗುವ ಕೃಷಿ ಉತ್ಪನ್ನಗಳು, ಗೃಹ ಉತ್ಪನ್ನಗಳನ್ನು ಬಳಸುವಂತೆ ಕರೆ ನೀಡಿದ್ದಾರೆ.

ಅಲ್ಲದೆ ಅವರ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸ್ಥಳೀಯ ಆಹಾರ ಉತ್ಪನ್ನಗಳು, ದಿನಬಳಕೆಯ ವಸ್ತುಗಳು, ಗೃಹ ಉತ್ಪನ್ನಗಳು, ಬ್ರಾಂಡ್‌ಗಳ ಮಾಹಿತಿಯನ್ನು ಪೋಸ್ಟ್‌ ಮಾಡಲಿದ್ದಾರೆ.

ಈ ಅಭಿಯಾಯನಕ್ಕೆ ಜಿಲ್ಲೆಯ ಜನರೂ ಬೆಂಬಲ ನೀಡಬೇಕೆಂದು ಕರೆ ನೀಡಿರುವ ಶಾಸಕ ವೇದವ್ಯಾಸ್‌ ಕಾಮತ್‌, ಸ್ಥಳೀಯ ಉತ್ಪನ್ನಗಳ ಮಾಹಿತಿಯನ್ನು ನನಗೆ ಕಳುಹಿಸಿ. ಪೋಸ್ಟ್‌ಗಳನ್ನು ಶೇರ್ ಮಾಡಿ ಎಂದು ಕರೆ ನೀಡಿದ್ದಾರೆ.

Comments are closed.