ಕರಾವಳಿ

ಅಟೋ ರಿಕ್ಷಾ ಚಾಲಕರಿಗೆ ಉಚಿತ ವೈದ್ಯಕೀಯ ಮಾಹಿತಿ ಶಿಬಿರ :ಉಚಿತ ಹೋಮಿಯೋಪಥಿ ಔಷಧಿ ವಿತರಣೆ

Pinterest LinkedIn Tumblr

ಮಂಗಳೂರು ಮೇ 27 : ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ, ಭಾರತೀಯ ಹೋಮಿಯೋಪತಿ ವೈದ್ಯರ ಸಂಘ ಮಂಗಳೂರು ಮತ್ತು ರಿಕ್ಷಾ ಚಾಲಕರ ಸಂಘ ಮಂಗಳೂರು ರವರ ಜಂಟಿ ಆಶ್ರಯದಲ್ಲಿ ಮಂಗಳೂರು ನಗರದ ಜೆಪ್ಪು ಪ್ರದೇಶದ ಅಟೋ ರಿಕ್ಷಾ ಚಾಲಕರಿಗೆ ಉಚಿತ ವೈದ್ಯಕೀಯ ಮಾಹಿತಿ ಶಿಬಿರ ಮತ್ತು ಕೋವಿಡ್-19 ತಿಳುವಳಿಕೆ ಶಿಬಿರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಜಿಲ್ಲಾ ಪೌರರಕ್ಷಣಾ ಪಡೆಯ ಚೀಫ್ ವಾರ್ಡನ್ ಡಾ|| ಮುರಳೀ ಮೋಹನ ಚೂಂತಾರು ವಹಿಸಿದ್ದರು. ದ.ಕ. ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಡಿಯನ್ ಹೋಮಿಯೋಪತಿ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷ ಡಾ|| ಪ್ರವೀಣ್ ರೈ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೌರರಕ್ಷಣಾ ತಂಡದ ಅಜಯ್, ದಿವಾಕರ್, ಲಿಂಗಪ್ಪ, ಮಹೇಶ್, ಸಂತೋಷ್ ಉಪಸ್ಥಿತರಿದ್ದರು. ಅಟೋ ಚಾಲಕರ ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಕುಲಾಲ್ ಮತ್ತಿತರರು ಉಪಸ್ಥಿತರಿದರು.

Comments are closed.