ಕರಾವಳಿ

ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿ ಮಹಿಳೆಗೆ ಪ್ರವೇಶ ನಿರಾಕರಣೆ : ಶಿವಭಾಗ್‌ನ ಖಾಸಗಿ ಅಪಾರ್ಟ್ ಮೆಂಟ್ ಗೆ ನೋಟೀಸ್ ಜ್ಯಾರಿ

Pinterest LinkedIn Tumblr

ಮಂಗಳೂರು, ಮೇ 29 : ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿ ಮಹಿಳೆಗೆ ಸೂಕ್ತ ಚಿಕಿತ್ಸೆ ಲಭಿಸದೆ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಗರ್ಭಿಣಿ ಮಹಿಳೆಗೆ ಪ್ರವೇಶ ನಿರಾಕರಿಸಿದ ನಗರದ ಶಿವಭಾಗ್ ನಲ್ಲಿರುವ ಅಪಾರ್ಟ್ ಮೆಂಟ್ ಒಂದಕ್ಕೆ ಮಹಾನಗರ ಪಾಲಿಕೆ ನೋಟಿಸ್ ಜಾರಿಗೊಳಿಸಿದೆ.

ದುಬೈನಿಂದ ಪತಿಯೊಂದಿಗಿದ್ದ ಮಂಗಳೂರಿಗೆ ಬಂದ ಈ ಗರ್ಭಿಣಿ ಮಹಿಳೆ ನಗರದಲ್ಲಿ ಹೊಟೇಲ್‌ ಕ್ವಾರಂಟೈನ್‌ನಲ್ಲಿದ್ದು ಬಳಿಕ ಅವರ ಕೊರೊನಾ ವರದಿ ನೆಗೆಟಿವ್‌ ಬಂದಿತ್ತು. ಆ ಬಳಿಕ ಜಿಲ್ಲಾಡಳಿತದ ಪತ್ರದೊಂದಿಗೆ ಫ್ಲ್ಯಾಟ್‌ಗೆ ಅವರು ತೆರಳಿದ್ದು, ಈ ವೇಳೆ ಪ್ಲಾಟ್ ನಲ್ಲಿ ಈ ಮಹಿಳೆಗೆ ಪ್ರವೇಶ ನಿರಾಕರಿಸಿದ್ದಾರೆ ಎಂದು ದೂರಲಾಗಿತ್ತು. ಇದರಿಂದಾಗಿ ಗರ್ಭಿಣಿಯಾದ ಆಕೆಗೆ ಸೂಕ್ತವಾದ ಚಿಕಿತ್ಸೆ ಲಭಿಸದ ಕಾರಣ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ಅವರ ಕುಟುಂಬದವರು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಶಿವಭಾಗ್ ನ ಶಿವದೀಪ್ ಅಪಾರ್ಟ್ ಮೆಂಟ್ ಗೆ ನೋಟೀಸ್ ಜಾರಿಗೊಳಿಸಿದೆ. ಈ ಬಗ್ಗೆ ಮೂರು ದಿನಗಳ ಒಳಗೆ ಸೂಕ್ತ ಸಮಜಾಯಿಷಿ ನೀಡಲು ಸೂಚನೆ ನೀಡಲಾಗಿದೆ. ತಕ್ಷಣ ಮಹಿಳೆಗೆ ಅಪಾರ್ಟ್ ಮೆಂಟ್ ಪ್ರವೇಶಕ್ಕೆ ಅವಕಾಶ ನೀಡಲು ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಅಪಾರ್ಟ್ ಮೆಂಟ್ ಅಸೋಸಿಯೇಷನ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಘಟನೆ ವಿವರ :

ದುಬೈನಿಂದ ಪತಿಯೊಂದಿಗಿದ್ದ ಮಂಗಳೂರಿಗೆ ಬಂದ ಮಹಿಳೆ ಕ್ವಾರಂಟೈನ್‌ನಲ್ಲಿದ್ದು ಗರ್ಭಿಣಿಯಾದ ಆಕೆಗೆ ಸೂಕ್ತವಾದ ಚಿಕಿತ್ಸೆ ಲಭಿಸದ ಕಾರಣ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ಅವರ ಕುಟುಂಬದವರು ಆರೋಪಿಸಿದ್ದರು.

ಈ ಮಹಿಳೆ ತನ್ನ ಹೆರಿಗೆಗಾಗಿ ಮಂಗಳೂರಿಗೆ ದುಬೈನಿಂದ ವಾಪಾಸ್‌ ಆಗಬೇಕಿತ್ತು. ಅರ್ಜಿ ಸಲ್ಲಿಸಿದ ಬಳಿಕ ಪ್ರಥಮ ವಿಮಾನದಲ್ಲೇ ಅವಕಾಶ ಲಭಿಸಿದ್ದು ಮೇ 12 ರಂದು ಮಂಗಳೂರಿಗೆ ತಲುಪಿದ್ದರು. ಹೊಟೇಲ್‌ ಕ್ವಾರಂಟೈನ್‌ನಲ್ಲಿದ್ದ ಅವರ ಕೊರೊನಾ ವರದಿ ನೆಗೆಟಿವ್‌ ಬಂದಿತ್ತು. ಆ ಬಳಿಕ ಜಿಲ್ಲಾಡಳಿತದ ಪತ್ರದೊಂದಿಗೆ ಫ್ಲ್ಯಾಟ್‌ಗೆ ತೆರಳಿದ್ದು ಅಲ್ಲಿ ಇವರಿಗೆ ಪ್ರವೇಶ ನಿರಾಕರಿಸಿದ್ದಾರೆ ಎಂದು ದೂರಲಾಗಿತ್ತು.

ಮೈ ಮುಟ್ಟಿ ಚಿಕಿತ್ಸೆ ನೀಡಲು ಮನಸ್ಸಿಲ್ಲದ ವೈದ್ಯರು ಬಿಪಿ ಚೆಕ್‌ಅಪ್‌ ಕಿಟ್‌ ಮರೆತಿರುವುದಾಗಿ ನೆಪ ಹೇಳುತ್ತಿದ್ದರು. ವರದಿ ನೆಗೆಟಿವ್‌ ಬಂದಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದ ವೈದ್ಯರೂ 14 ದಿನ ಕ್ವಾರಂಟೈನ್‌ ಮುಗಿದ ಮೇಲೆಯೇ ಚಿಕಿತ್ಸೆ ಎಂದು ಹೇಳಿದ್ದಾರೆ. ಇನ್ನು 2 ನೇ ತಪಾಸಣೆ ನೆಗೆಟಿವ್‌ ಬಂದ ಕೂಡಲೇ ಆಸ್ಪತ್ರೆಗೆ ಬಂದಾಗ ಮಗು ಮೃತಪಟ್ಟಿದೆ. ತಾಯಿಯ ಜೀವ ಉಳಿಸಬೇಕಾದ್ದಲ್ಲಿ ಬಲವಂತದ ಹೆರಿಗೆ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ ಎಂದು ಗರ್ಭಿಣಿಯ ಸೋದರ ಮಾವ ಅಝೀಜ್‌ ಬಸ್ತಿಕರ್‌ ಮಾಧ್ಯಮವೊಂದಕ್ಕೆ ತಿಳಿಸಿದ್ದರು.

ಈ ಬಗ್ಗೆ ತನಿಖೆ ಮಾಡುತ್ತೇನೆ : ಜಿಲ್ಲಾಧಿಕಾರಿ ಪ್ರತಿಕ್ರಿಯೆ

ಇದೇ ವೇಳೆ ಗರ್ಭಿಣಿಯ ಪ್ರಥಮ ಕೊರೊನಾ ತಪಾಸಣಾ ವರದಿ ನೆಗೆಟಿವ್‌ ಬಂದ ತಕ್ಷಣ ಅವರನ್ನು ಮನೆಗೆ ಕಳುಹಿಸಿದ್ದೇವೆ. ಮಹಿಳೆಗೆ ಅನ್ಯಾಯವಾಗಿದ್ದಲ್ಲಿ ದೂರು ಕೊಡಲಿ. ಆಕೆಯನ್ನು ಯಾಕೆ ಪ್ಲ್ಯಾಟ್‌ನಲ್ಲಿ ಸೇರಿಸಿಕೊಳ್ಳಲ್ಲಿಲ್ಲ ಹಾಗೂ ಹಾಗೂ ಯಾವ ವೈದ್ಯರು, ಆಸ್ಪತ್ರೆಯವರು ಚಿಕಿತ್ಸೆ ಕೊಟ್ಟಿಲ್ಲ ಎಂಬ ಬಗ್ಗೆ ತನಿಖೆಗೆ ಮಾಡಿ ತಿಳಿಸುತ್ತೇನೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್‌ ತಿಳಿಸಿದ್ದರು.

Comments are closed.