ಕರಾವಳಿ

ತಬ್ಲಿಘಿಗಳಿಂದ ಕೊರೊನಾ ಹರಡಲು ವ್ಯವಸ್ಥಿತ ಷಡ್ಯಂತ್ರ; ಉನ್ನತ ತನಿಖೆಗೆ ಸಂಸದೆ ಶೋಭಾ ಆಗ್ರಹ

Pinterest LinkedIn Tumblr

ಉಡುಪಿ: ತಬ್ಲಿಘಿಗಳಿಂದ ಕೊರೊನಾ ವೈರಸ್‌ ಸೋಂಕು ವ್ಯವಸ್ಥಿತವಾಗಿ ಹರಡುವ ಷಡ್ಯಂತ್ರ ನಡೆದಿದ್ದು ರಾಜ್ಯ, ಕೇಂದ್ರ ಸರಕಾರ ಉನ್ನತ ತನಿಖೆ ನಡೆಸಬೇಕು ಎಂದು ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದ ಅನ್ನ ತಿಂದು, ನೀರು ಕುಡಿದು ಭಾರತದ ವಿರುದ್ಧವೇ ಸಮರ ಸಾರಿದ್ದು ಇವರಿಗೆ ಕುಮ್ಮಕ್ಕು ನೀಡುವ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಿದ್ದಿಕ್ ಲೇಔಟ್ ನಲ್ಲಿ ಆಶಾ ಕಾರ್ಯಕರ್ತರಿಗೆ ಹಲ್ಲೆ ಮಾಡುವ ಮುನ್ನ ಅಲ್ಲಿನ ಮಸೀದಿಯಲ್ಲಿ ಪ್ರಾರ್ಥನೆ ಮಾಡುತಿದ್ದರು ತದನಂತರ ಅರ್ಥವಾಗದ ಭಾಷೆಯಲ್ಲಿ ಅವರು ಮಾತನಾಡಿಕೊಂಡು ತಕ್ಷಣವೇ ಸ್ಥಳದಲ್ಲಿ ಜನ ಜಮಾವಣೆಗೊಂಡು ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಹಿಂದೆ ಒಂದು ದುರುದ್ದೇಶ ಇದೆ ಎಂದು ಸಂಸದೆ ಶೋಭಾ ಆರೋಪಿಸಿದ್ದಾರೆ.

Comments are closed.