ಕರಾವಳಿ

ಪಿಲಿಕುಳದಲ್ಲಿ ಪರಿಸರ ಸ್ನೇಹಿ ಬ್ಯಾಟರಿಚಾಲಿತ ವಾಹನ : ಕರಾವಳಿ ಅಭಿವೃದ್ಧಿಅಧ್ಯಕ್ಷರಿಂದ ಪರಿಶೀಲನೆ

Pinterest LinkedIn Tumblr

ಮಂಗಳೂರು ಜೂನ್ 07 : ಡಾ|| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದಕೈಗೊಂಡ ಕಾಮಗಾರಿಗಳ ಪರಿಶೀಲನೆಯನ್ನು ಪ್ರಾಧಿಕಾರದ ಅಧ್ಯಕ್ಷ ಮಟ್ಟಾರುರತ್ನಾಕರ ಹೆಗ್ಡೆ ಶನಿವಾರ ನಡೆಸಿದರು.

ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಪ್ರವಾಸಿಗರ ಸೌಕರ್ಯಕ್ಕಾಗಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದಅನುದಾನದಿಂದ ಖರೀದಿಸಿದ ಪರಿಸರಸ್ನೇಹಿ ಬ್ಯಾಟರಿಚಾಲಿತ ವಾಹನಗಳ ವಿವರಣೆಯನ್ನುಕಾರ್ಯನಿರ್ವಾಹಕ ನಿರ್ದೇಶಕರು ನೀಡಿದರು ಹಾಗೂ ನಿಸರ್ಗಧಾಮದಲ್ಲಿಇನ್ನುಆಗಬೇಕಾದ ಕಾಮಗಾರಿಗಳ ಪಟ್ಟಿಯನ್ನು ನೀಡಿಅನುದಾನ ಮಂಜೂರು ಮಾಡಲುಕೋರಿದರು.ಈ ಬಗ್ಗೆ ಪ್ರಾಧಿಕಾರದಅಧ್ಯಕ್ಷ ಸಕರಾತ್ಮಕವಾಗಿ ಸ್ಪಂದಿಸಿ ಮುಂದಿನ ದಿನಗಳಲ್ಲಿ ಸದರಿ ಕಾಮಗಾರಿಗಳನ್ನು ನಡೆಸುವ ಬಗ್ಗೆ ಸಮ್ಮತಿಯನ್ನು ಸೂಚಿಸಿದರು.

ಪರಿಶೀಲನೆ ವೇಳೆ ಹಾಜರಿದ್ದಜೈವಿಕಉದ್ಯಾನದ ನಿರ್ದೇಶಕರು ಪಿಲಿಕುಳವು ನಡೆದು ಬಂದದಾರಿ ಹಾಗೂ ಈವರೆಗೆಕೇಂದ್ರ, ರಾಜ್ಯ, ಬ್ಯಾಂಕ್ ಸಂಘ ಸಂಸ್ಥೆಗಳು ಮತ್ತು ಪ್ರವೇಶ ಶುಲ್ಕದಿಂದ ನಡೆಸಿರುವ ಅಭಿವೃದ್ಧಿಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಪ್ರಾಧಿಕಾರದಅಧ್ಯಕ್ಷರುಪಿಲಿಕುಳದ ಲೇಕ್‍ಗಾರ್ಡನ್, ಸಂಸ್ಕøತಿಗ್ರಾಮ, ಗುತ್ತುಮನೆ, ಔಷಧೀಯ ವನ ಮುಂತಾದುವುಗಳಿಗೆ ಭೇಟಿ ನೀಡಿ ಪ್ರಸಕ್ತ ಬೆಳವಣಿಕೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಪರಿಶೀಲನೆ ವೇಳೆ ದ.ಕಜಿಲ್ಲಾ ಪಂಚಾಯತ್ ಸದಸ್ಯಯು.ಪಿ ಇಬ್ರಾಹಿಂ, ಮೂಡುಶೆಡ್ಡೆಗ್ರಾಮ ಪಂಚಾಯತ್‍ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್‍ಡಿಸೋಜಾ, ಪಿಲಿಕುಳ ಕಾರ್ಯನಿರ್ವಾಹಕ ನಿರ್ದೇಶಕಿಮೇಘನಾ ಆರ್, ಪಿಲಿಕುಳ ಜೈವಿಕಉದ್ಯಾನವನದ ನಿರ್ದೇಶಕಜಯಪ್ರಕಾಶ್ ಭಂಡಾರಿ, ಪ್ರಾಧಿಕಾರದ ವಲಯಾಧಿಕಾರಿಚಂದ್ರಕಾಂತ್, ಲೋಕೋಪಯೋಗಿಇಲಾಖೆಯಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.