ಕರಾವಳಿ

ಮಂಗಳೂರಿನ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ : ಪರಿಸರವನ್ನು ಉಳಿಸಿ ಬೆಳೆಸಲು ಕರೆ

Pinterest LinkedIn Tumblr

ಮಂಗಳೂರು ಜೂನ್ 07 : ಡಾ.ಪಿ.ದಯಾನಂದ ಪೈ. – ಪಿ.ಸತೀಶ ಪೈ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾಘಟಕದ ವತಿಯಿಂದ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮವನ್ನುಕಾಲೇಜಿನ ಪ್ರಾಂಶುಪಾಲ ಪ್ರೋ. .ರಾಜಶೇಖರ್ ಹೆಬ್ಬಾರ್ ಸಿ. ನೆರವೇರಿಸಿ. ವಿಶ್ವ ಪರಿಸರ ದಿನದ ಮಹತ್ವ ಹಾಗೂ ಪರಿಸರವನ್ನು ಉಳಿಸಿ ಬೆಳೆಸುವ ಬಗ್ಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿಕಾಲೇಜಿನರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಶೇಷಪ್ಪ, ಪ್ರೋ. ತ್ರಿಶಾಂತ್‍ ಕುಮಾರ್, ಪ್ರೋ. ಅರುಣ ಕುಮಾರಿ ಮತ್ತುಉಪನ್ಯಾಸಕಡಾ.ಕೃಷ್ಣಪ್ರಭಭಾಗವಹಿಸಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನುಅರ್ಥಪೂರ್ಣವಾಗಿ ಆಚರಿಸಿದರು.

Comments are closed.