ಕರಾವಳಿ

ಮಂಗಳೂರಿನಿಂದ ಉತ್ತರ ಕರ್ನಾಟಕದ ಪ್ರಮುಖ ಸ್ಥಳಕ್ಕೆ ಬಸ್ ಆರಂಭ

Pinterest LinkedIn Tumblr

ಮಂಗಳೂರು ಜೂನ್ 12 : ಮಂಗಳೂರು ಬಸ್ಸು ನಿಲ್ದಾಣದಿಂದ ಉತ್ತರ ಕರ್ನಾಟಕದ ಪ್ರಮುಖ ಸ್ಥಳಗಳಾದ ಬಳ್ಳಾರಿ, ಇಳಕಲ್, ಲಿಂಗಸ್ಗೂರು, ಬೆಳಗಾವಿ ಮುಂತಾದ ಸ್ಥಳಗಳಿಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಹೊಸ ನಾನ್ ಎಸಿ. ಸ್ಲೀಪರ್ ವಾಹನಗಳೊಂದಿಗೆ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ.

ಈ ಹಿನ್ನಲೆಯಲ್ಲಿ ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಎಸ್‍ಒಪಿ (Standard operating procedure) ರಲ್ಲಿಯ ನಿರ್ದೇಶನಗಳಂತೆ ಮಂಗಳೂರು ವಿಭಾಗದ ಪ್ರಮುಖ ಬಸ್ಸು ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಮಾಡಿ, ಪ್ರಯಾಣಿಕರ ವಿವರಗಳನ್ನು ದಾಖಲಿಸಿ, ಸಾಮಾಜಿಕ ಅಂತರದೊಂದಿಗೆ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶಗಳನ್ನು ಕಲ್ಪಿಸಲಾಗಿರುತ್ತದೆ.

ಬಸ್ ಸೌಲಭ್ಯಗಳ ವಿವರ ಇಂತಿವೆ:

ಮಂಗಳೂರಿನಿಂದ ಸಂಜೆ 6.50 ಗಂಟೆಗೆ ಹೊರಟು ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಚನ್ನಗಿರೆ,ಹೊಳಲ್ಕೆರೆ, ಚಿತ್ರದುರ್ಗ, ಚಳ್ಳೆಕರೆ, ಬಳ್ಳಾರಿಗೆ ಬೆಳಿಗ್ಗೆ 7 ಗಂಟೆಗೆ ತಲುಪಲಿದೆ. ( ಪ್ರಯಾಣ ದರ ರೂ.800. )

ಬಳ್ಳಾರಿಯಿಂದ ಸಂಜೆ 5.31 ಗಂಟೆಗೆ ಹೊರಟು ಚಳ್ಳೆಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಚೆನ್ನಗಿರೆ ಶಿವಮೊಗ್ಗ, ತೀರ್ಥಹಳ್ಳಿ, ಕುಂದಾಪುರ, ಮಂಗಳೂರಿಗೆ ಬೆಳಿಗ್ಗೆ 5 ಗಂಟೆಗೆ ತಲುಪಲಿದೆ. (ಪ್ರಯಾಣ ದರ ರೂ.800)
ಮಂಗಳೂರಿನಿಂದ ಸಂಜೆ 7 ಗಂಟೆಗೆ ಹೊರಟು ಹುಬ್ಬಳ್ಳಿ,ಬದಾಮಿ, ಹುನಗುಂದ ಲಿಂಗಸ್ಗೂರು ಬೆಳಿಗ್ಗೆ 7.30 ಗಂಟೆಗೆ ತಲುಪಲಿದೆ. ( ಪ್ರಯಾಣ ದರ ರೂ. 950)
ಲಿಂಗಸ್ಗೂರಿನಿಂದ ಸಂಜೆ 4.30 ಗಂಟೆಗೆ ಹೊರಟು ಹುನಗುಂದ, ಬದಾಮಿ, ಹುಬ್ಬಳ್ಳಿ ಮಂಗಳೂರು ಬೆಳಿಗ್ಗೆ 5 ಗಂಟೆಗೆ ತಲುಪಲಿದೆ. (ಪ್ರಯಾಣ ದರ ರೂ.950)
ಮಂಗಳೂರಿನಿಂದ ಸಂಜೆ 7.30 ಗಂಟೆಗೆ ಹೊರಟು ಹುಬ್ಬಳ್ಳಿ, ಗದಗ, ಗಜೇಂದ್ರಗಡ ಇಳಕಲ್ ಬೆಳಿಗ್ಗೆ 7 ಗಂಟೆ ತಲುಪಲಿದೆ. (ಪ್ರಯಾಣ ದರ ರೂ. 950)
ಇಳಕಲ್ ನಿಂದ ಸಂಜೆ 6.30 ಗಂಟೆಗೆ ಹೊರಟು ಗಜೇಂದ್ರಗಡ, ಗದಗ, ಹುಬ್ಬಳ್ಳಿ ಮಂಗಳೂರಿಗೆ ಬೆಳಿಗ್ಗೆ 6 ಗಂಟೆಗೆ ತಲುಪಲಿದೆ. (ಪ್ರಯಾಣ ದರ ರೂ. 950)
ಮಂಗಳೂರಿನಿಂದ ಸಂಜೆ 6.30 ಗಂಟೆಗೆ ಹೊರಟು ಕುಂದಾಪುರ, ಹುಬ್ಬಳ್ಳಿ, ಧಾರವಾಡ ಬೆಳಗಾವಿಗೆ ಬೆಳಿಗ್ಗೆ 5.30 ಗಂಟೆಗೆ ತಲುಪಲಿದೆ. (ಪ್ರಯಾಣ ದರ ರೂ. 800)
ಬೆಳಗಾವಿಯಿಂದ ಸಂಜೆ 6.30 ಗಂಟೆಗೆ ಹೊರಟು ಧಾರವಾಡ ಹುಬ್ಬಳ್ಳಿ, ಕುಂದಾಪುರ, ಮಂಗಳೂರಿಗೆ ಬೆಳಿಗ್ಗೆ 5.30 ಗಂಟೆಗೆ ತಲುಪಲಿದೆ. (ಪ್ರಯಾಣ ದರ ರೂ. 800)

ಬಸ್ ಪ್ರಯಾಣಕ್ಕೆ ಆನ್‍ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯ ಒದಗಿಸಲಾಗಿದ್ದು www.ksrtc.in ವೆಬ್ ಸೈಟ್ ಅಥವಾ ಹತ್ತಿರದ ರಿಸರ್ವೇಶನ್ ಕೌಟಂರ್ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.