ಮಂಗಳೂರು ಜೂನ್ 20 : ಪ್ರತಿ ವರ್ಷದಂತೆ ಜೂನ್ 21ರ ದಿನದಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುವುದು ವಾಡಿಕೆಯಾಗಿರುತ್ತದೆ.
ಪ್ರಸ್ತುತ ಸಾಲಿನಲ್ಲಿ ಕೋವಿಡ್-19ರ ಮಹಾಮಾರಿ ಕಾರಣದಿಂದ ಸಾರ್ವಜನಿಕ ಸಭೆ ಸಮಾರಂಭಗಳು, ಮತ್ತಿತ್ತರ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇದಿಸಿರುವುದರಿಂದ ಈ ಸಾಲಿನಲ್ಲಿ “ಮನೆಯಲ್ಲಿಯೇ ಯೋಗ- ಕುಟುಂಬದೊಂದಿಗೆ ಯೋಗ” (YOGA AT HOME YOGA WITH
FAMILY) ಎಂಬ ಘೋಷ ವಾಕ್ಯದೊಂದಿಗೆ ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯೋಗ ದಿನಾಚರಣೆಯನ್ನು ಆಚರಿಸಲು ಭಾರತ ಸರ್ಕಾರದ ಆಯುಷ್ ಸಚಿವಾಲಯವು ಸೂಚಿಸಿದೆ.
ಆದುದರಿಂದ ಜೂನ್ 21ರಂದು ಆಯುಷ್ ಸಚಿವರ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪ್ರಧಾನ ಮಂತ್ರಿಗಳು ವಿಡಿಯೋ ಸಂದೇಶವನ್ನು ಜನತೆಗೆ ನೀಡಲಿರುವರು.
ನಂತರ ಯೋಗ ತಜ್ಞರುಗಳಿಂದ ಯೋಗಾಸನಗಳ ಪ್ರಾತ್ಯಕ್ಷಿಕೆಗಳನ್ನು ನೀಡಲಾಗುವುದು. ದೂರದರ್ಶನದ ಎಲ್ಲಾ ಚಾನೆಲ್‍ಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಇರಲಿದ್ದು, ಯೋಗ ಪ್ರಾತ್ಯಕ್ಷಿಕೆಗಳನ್ನು ನೋಡಿ ಕೊಂಡು ಸಾರ್ವಜನಿಕರು ಮನೆಯಲ್ಲಿಯೇ ಕುಟುಂಬದೊಂದಿಗೆ ಯೋಗ ದಿನಾಚರಣೆಯನ್ನು ಆಚರಿಸಬೇಕೆಂದು ದ.ಕ. ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Comments are closed.