ಮಂಗಳೂರು : ಭಾರತ ಮತ್ತು ಚೀನಾ ಕಣಿವೆಯಲ್ಲಿ ದೇಶರಕ್ಷಣೆಯ ಸಂಧರ್ಭದಲ್ಲಿ ಭಾರತೀಯ ಸೈನಿಕರ ಹತ್ಯೆಗೈದ ಚೀನಾದ ಕೃತ್ಯವನ್ನು ವಿಶ್ವಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ. ಚೀನಾಕ್ಕೆ ಸರಿಯಾಗಿ ಉತ್ತರ ಕೊಡಬೇಕಾದರೆ ನಮ್ಮ.ವ್ಯಾಪಾರಸ್ಥರು ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷದ್‌ನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಹೇಳಿದ್ದಾರೆ.
ಕಳೆದ ಹಲವು ದಶಕಗಳಿಂದ ಈ ರೀತಿಯ ದುರಾಕ್ರಮಣದಿಂದಾಗಿ ಸಾವಿರಾರು ಸೈನಿಕರ ಬಲಿದಾನವಾಗಿದೆ.ವಿಶ್ವಹಿಂದೂ ಪರಿಷದ್ ಬಜರಂಗದಳ ಕೆಲವು ವರ್ಷಗಳಿಂದ ಚೀನಾ ಉತ್ಪನ್ನಗಳ ಬಹಿಸ್ಕಾರ ಅಭಿಯಾನವನ್ನು ಮಾಡಿಕೊಂಡು ಬಂದಿರುತ್ತದೆ.
ಹಲವಾರು ಬಾರಿ ಪ್ರತಿಭಟನೆ, ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಮೊನ್ನೆ ಗ್ಯಾಲ್ವನ್ ಕಣಿವೆಯಲ್ಲಿ ಚೀನಾ ಸೈನಿಕರು ಕಬ್ಬಿಣದ ಮೊಳೆಗಳಿಂದ ಕೂಡಿದ ದೊಣ್ಣೆಯಿಂದ ನಮ್ಮ ಸೈನಿಕರ ಬರ್ಬರ ಹತ್ಯೆ ಮಾಡಿದ್ದು, ಇದಕ್ಕೆ ಪ್ರತ್ಯುತ್ತರ ಕೊಡುವ ಸಮಯ ಬಂದಿದೆ.
ಈ ದುಷ್ಕೃತ್ಯಗಳನ್ನು ಎಸಗಿ ದ್ರೋಹ ಎಸಗುವ ಚೀನಾ ದೇಶ ಆರ್ಥಿಕತೆಯು ನಮ್ಮ ದೇಶದ ಮಾರುಕಟ್ಟೆಯನ್ನು ಅವಲಂಬಿಸಿದೆ.ಚೀನಾಕ್ಕೆ ಸರಿಯಾಗಿ ಉತ್ತರ ಕೊಡಬೇಕಾದರೆ ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡಬೇಕು.
ಅದರಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಚೀನಾ ಉತ್ಪನನಗಳ ಮಾರಾಟಗಾರರಿದ್ದು ತಮ್ಮ ತಮ್ಮ ವ್ಯಾಪಾರ ಮಳಿಗೆಗಳಲ್ಲಿ ಚೀನಾ ಉತ್ಪನ್ನಗಳನ್ನು ಮಾರಾಟ ಮಾಡಬಾರದಾಗಿ ಕೈ ಮುಗಿದು ವಿನಂತಿಸುತ್ತೇವೆ. ಹಾಗೆ ರಾಷ್ಟ್ರಭಕ್ತ ಎಲ್ಲ ನಾಗರೀಕ ಬಂಧುಗಳು ಚೀನಾ ನಿರ್ಮಿತ ಮೊಬೈಲ್ ಫೋನ್, ಮಕ್ಕಳ ಆಟಿಕೆಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಗೃಹ ಉಪಯೋಗಿ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವ ಮೂಲಕ ದೇಶ ಸೈನಿಕರೊಂದಿಗೆ ಕೈಜೋಡಿಸೋಣ, ಮುಂದಿನ ದಿವಸಗಳಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರದ ಜನಜಾಗೃತಿ ಅಭಿಯಾನವನ್ನು ಕೈಗೊಳ್ಳಲಿದ್ದೇವೆ ಎಂದು ಶರಣ್ ಪಂಪವೆಲ್ ತಿಳಿಸಿದ್ದಾರೆ.
ಈ ಸಂದರ್ಭ ವಿಶ್ವ ಹಿಂದೂ ಪರಿಷದ್‌ನ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಬಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ವಿಶ್ವ ಹಿಂದೂ ಪರಿಷದ್ ನ ಗೋರಕ್ಷ ಪ್ರಮುಖ್ ಪ್ರದೀಪ್ ಪಂಪುವೆಲ್ ಉಪಸ್ಥಿತರಿದ್ದರು.
Comments are closed.