ಕರಾವಳಿ

ಉಡುಪಿ‌ ಲಕ್ಷ್ಮೀನಗರದಲ್ಲಿ ಯುವಕನ ಬರ್ಬರ ಹತ್ಯೆ: ಹಣದ ವಿಚಾರದಲ್ಲಿ ಕೊಲೆ ಶಂಕೆ

Pinterest LinkedIn Tumblr

ಉಡುಪಿ: ಉಡುಪಿಯ ಲಕ್ಷೀ ನಗರ ಎಂಬಲ್ಲಿ ಯುವನೊಬ್ಬನ ಬರ್ಬರವಾಗಿ ಕೊಲೆಯಾಗಿದೆ.ಲಕ್ಷ್ಮೀ ನಗರ ಶಾಲೆಯ ಹಿಂಭಾಗದಲ್ಲಿ ಹತ್ಯೆಯಾದ ಯುವಕನ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಕೊಲೆಯಾದ ಯುವಕ ಮಲ್ಪೆಯಲ್ಲಿ ಮೀನುಗಾರಿಕೆ‌ ಕೆಲಸ ಮಾಡಿಕೊಂಡಿದ್ದ ಯೋಗೀಶ್ ಎನ್ನುವಾತನನ್ನು ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಲಾಗಿದೆ‌ ಎನ್ನಲಾಗಿದೆ.

ರೌಡಿ ಶೀಟರ್ ಪ್ರವೀಣ್ ಹಾಗೂ ಗುರು ಭಟ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಜೀತ್ ಪಿಂಟೋ ಈ ಯುವಕನ‌ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಸುಜೀತ್ ಪಿಂಟೋ ಹಾಗೂ ಅತನ‌ ಅಣ್ಣಾ ಬಡ್ಡಿ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.ಯೋಗೀಶನಿಗೆ ಹಣ ನೀಡಿದ್ದರು ಎನ್ನಲಾಗಿದೆ.ಹಣ ವಾಪಸ್ಸು ಕೇಳಲು ಇವರಿಬ್ಬರು ಸಂತಕಟ್ಟೆ ಬಾರಲ್ಲಿ ಕೂತಿದ್ದ ಯೋಗಿಶನನ್ನು ಭೇಟಿಯಾಗಿದ್ದರು‌.ಅಲ್ಲಿ ಕೊಲೆಯಾದ ಯುವಕ ಹಾಗೂ ಸುಜಿತ್ ಪಿಂಟೋ ಗುಂಪು ಗಲಾಟೆ ನಡೆಸಿದ್ದರು. ಬಳಿಕ ಲಕ್ಷ್ಮೀನಗರದ ಶಾಲೆ ಬಳಿ‌ಬಂದಾಗ ಇಬ್ಬರ ಮಧ್ಯೆ ಮಾತಿನ‌ ಚಕಮಕಿ ನಡೆದು ಕೊಲೆ ಮಾಡಲಾಗಿದೆ ಎಂದು ತಿಳಿಯಲಾಗಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Comments are closed.