ಕರಾವಳಿ

ಕೊರೋನಾ ಗೆದ್ದು ಬಂದ ಹಿರಿಯ ರಾಜಕಾರಣಿ ಪೂಜಾರಿಯವರ ಸಂದೇಶ ಕೇಳಿ

Pinterest LinkedIn Tumblr

ಮಂಗಳೂರು, ಜುಲೈ.20: ದ.ಕ.ಜಿಲ್ಲೆಯ ಹಿರಿಯ ರಾಜಕಾರಣಿ, ಕಾಂಗ್ರೆಸ್ ನ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ, ಬಿ. ಜನಾರ್ದನ ಪೂಜಾರಿ (83 ವರ್ಷ)ಯವರು ಕೊರೋನಾ ಸೋಂಕನ್ನು ಗೆದ್ದು ಬಂದಿದ್ದಾರೆ.

ಕೊರೊನಾ ಸೋಂಕಿನ ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಜನಾರ್ದನ ಪೂಜಾರಿಯವರು ಜುಲೈ,4 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪೂಜಾರಿ ಅವರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಇದೇ ವೇಳೆ ಕೊರೋನ ಸೋಂಕಿಗೊಳಗಾಗಿ ಆಸ್ಪತ್ರ್ಗೆ ದಾಖಲಾಗಿದ್ದ ಜನಾರ್ದನ ಪೂಜಾರಿ ಅವರ ಮನೆಯ ಮೂವರು ಸದಸ್ಯರು ಕೂಡ ಗುಣಮುಖರಾಗಿ ಸೋಮವಾರ ನಗರದ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಕೊರೋನ ಬಗ್ಗೆ ಭಯಬೇಡ -ಜಾಗರೂಕತೆ ವಹಿಸಿ : ಪೂಜಾರಿ ಸಂದೇಶ

ಕೊರೋನ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ. ಆತ್ಮಸ್ಥೈರ್ಯದಿಂದ ರೋಗವನ್ನು ಎದುರಿಸಬೇಕು. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಉತ್ತಮ ಪೌಷ್ಠಿಕ ಆಹಾರ, ಕಷಾಯ ಸೇವನೆ ಮಾಡಿ ಜಾಗರೂಕತೆ ವಹಿಸಿ. ಸಾರ್ವಜನಿಕ ಸ್ಥಳದಲ್ಲಿ ಅಂತರ ಕಾಪಾಡಿ ಮಾಸ್ಕ್ ಧರಿಸಿ ಸುರಕ್ಷಿತ ಮುನ್ನೆಚ್ಚರಿಕೆ ವಹಿಸಿ” ಎಂದು ಕೊರೊನಾದ ವಿರುದ್ದ ಹೋರಾಡಿ ಗುಣಮುಖರಾದ ಪೂಜಾರಿಯವರು ಸಲಹೆ ನೀಡಿದ್ದಾರೆ.

ತಮ್ಮ ಕ್ಷೇಮಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಪ್ರಕಟಣೆಯ ಮೂಲಕ ಧನ್ಯವಾದ ಸಲ್ಲಿಸಿರುವ ಬಿ. ಜನಾರ್ದನ ಪೂಜಾರಿಯವರು ತಮಗೆ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು, ಸಿಬ್ಬಂದಿ ವರ್ಗ ಹಾಗೂ ಆಸ್ಪತ್ರೆಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಮುಖಂಶಗಳು :

ಜನಾರ್ದನ ಪೂಜಾರಿ,ಮಾಜಿ ಕೇಂದ್ರ ಸಚಿವ

83 ರ ಹರೆಯದ ಜನಾರ್ದನ ಪೂಜಾರಿ

ಜುಲೈ 4 ರಂದು ಪತ್ತೆಯಾಗಿದ್ದ ಕೊರೋನಾ ಪಾಸಿಟಿವ್

ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಪೂಜಾರಿ

ಪೂಜಾರಿ ಜೊತೆಗೆ ಪತ್ನಿ ಸೇರಿ ಮನೆಯ ಮೂವರಿಗೆ ಕಂಡು ಬಂದಿದ್ದ ಕೊರೋನಾ ಪಾಸಿಟಿವ್

ಮನೆಯ ಕೆಲಸದಾಕೆಯಿಂದ ಹರಡಿದ್ದ ಕೊರೋನಾ ಸೋಂಕು

ಇಂದು ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಪೂಜಾರಿ ಕುಟುಂಬ

ಬಂಟ್ವಾಳದಲ್ಲಿರುವ ಜನಾರ್ದನ ಪೂಜಾರಿ ನಿವಾಸ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ.

Comments are closed.