ಮಂಗಳೂರು : ಬೆಂಡೆ ಬೆಳೆಯಲ್ಲಿ ಹಳದಿ ನಂಜು ರೋಗ- ಇದು ಬಿಳಿ ನೊಣದಿಂದ ಹರಡುವ ಒಂದು ವೈರಸ್ ರೋಗವಾಗಿದೆ. ಆರಂಭದಲ್ಲಿ ಸೋಂಕಿತ ಎಲೆಗಳು ಹಳದಿ ನಾಳಗಳನ್ನು ಮಾತ್ರ ತೋರಿಸುತ್ತದೆ, ನಂತರದ ಹಂತಗಳಲ್ಲಿ ಸಂಪೂರ್ಣ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಗಿಡದ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತದೆ.
ನಿರ್ವಹಣೆ ಕ್ರಮಗಳು: ಆರಂಭಿಕ ಹಂತಗಳಲ್ಲಿ ರೋಗಭಾಧಿತ ಗಿಡಗಳನ್ನು ಕಿತ್ತು ಸುಡುವುದು, ಹಳದಿ ನಂಜು ರೋಗ ಹರಡುವ ಕೀಟಗಳ ನಿಯಂತ್ರಣಕ್ಕಾಗಿ 1.5 ಮಿ.ಲೀ. ಟ್ರೈಜೋಫಾಸ್ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅವಶ್ಯವಿದ್ದಲ್ಲಿ 15 ದಿವಸಗಳ ನಂತರ ಇದೇ ಸಿಂಪರಣೆಯನ್ನು ಪುನರಾವರ್ತಿಸಬೇಕು.
ಸಾವಯವವಾಗಿ ನಿಯಂತ್ರಣ ಮಾಡಲು 5 ಮಿ.ಲೀ. ಬೇವಿನ ಎಣ್ಣೆ +1/2 ಪ್ಯಾಕೇಟ್ ಶ್ಯಾಂಪು ಅಥವಾ ಸೋಪ್ ನೀರನ್ನು ಒಂದು ಲೀಟರ್ ನೀರಿಗೆ ಹಾಕಿ ಗಿಡಗಳಿಗೆ ಸಿಂಪಡಣೆ ಮಾಡುವುದು.
ಹೆಚ್ಚಿನ ಮಾಹಿತಿಗೆ ಮಂಗಳೂರು ತೋಟಗಾರಿಕೆ ವಿಷಯ ತಜ್ಞ ರಿಶಲ್ ಡಿಸೋಜ ಅಥವಾ ದೂರವಾಣಿ ಸಂಖ್ಯೆ: 8277806372 ಸಂಪರ್ಕಿಸಬಹುದು ತೋಟಗಾರಿಗೆ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
Comments are closed.