ಮಂಗಳೂರು/ ಮುಂಬಾಯಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಉದ್ಯೋಗ ಅರಸಿ ಮುಂಬಾಯಿಗೆ ಹೋಗಿ ಅಲ್ಲಿ 1902 ರಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯನ್ನು ಪ್ರಾರಂಬಿಸಿ, ಸಮಾಜದ ಸಮಾಜದ ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಕ್ಷೇತ್ರಗಳೊಂದಿಗೆ ಎಲ್ಲಾ ಕ್ಷೇತ್ರದಲ್ಲೂ ಸೇವೆ ಮಾಡುತ್ತಿರುವ ಮೊಗವೀರ ವ್ಯವಸ್ಥಾಪಕಾ ಮಂಡಳಿಗೆ 118 ವರ್ಷ ತುಂಬಿ ದಿನಾಂಕ 09:08:2020ರಂದು 119ನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು.
ಈ ಸಂದರ್ಭದಲ್ಲಿ ಇದರ ದಕ್ಷಿಣ ಕನ್ನಡ ಹಾಗೂ ಉಡುಪಿ ಶಾಖೆಯ ವತಿಯಿಂದ ಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು,
ಈ ಸಂಧರ್ಭದಲ್ಲಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬಾಗ್ವಾಡಿ, ಶ್ರೀ ಕುಲಮಾಸ್ತಿಯಮ್ಮ ದೇವಸ್ಥಾನ ಬಾರ್ಕೂರು, ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಉಚ್ಚಿಲ, ಶ್ರೀ ಮಾರಿಯಮ್ಮ ದೇವಸ್ಥಾನ ಉರ್ವ ಹಾಗೂ ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನ ಉಳ್ಳಾಲಕ್ಕೆ ಸೆನ್ಸರ್ ಸ್ಯಾನಿಟೈಸರ್ ಯಂತ್ರಗಳನ್ನು ನೀಡಲಾಯಿತು.
ಮೊಗವೀರ ವ್ಯವಸ್ಥಾಪಕಾ ಮಂಡಳಿಯ ಶಾಖಾ ಅಧ್ಯಕ್ಷ ಭರತ್ ಕುಮಾರ್ ಎರ್ಮಾಳ್, ಗೌರವ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಉಳ್ಳಾಲ್ ಜತೆ ಕಾರ್ಯದರ್ಶಿ ಮೋಹನ್ ಕೋಡಿಕಲ್, ಪೂರ್ವಾಧ್ಯಕ್ಷ ಯತೀಶ್ ಬೈಕಂಪಾಡಿ, ಮೊಗವೀರ ಮಹಾಜನ ಸಭಾದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಬಾರ್ಕೂರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಅಮೀನ್, ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಶ್ಚಂದ್ರ ಕರ್ಕೇರ, ಉಚ್ವಿಲ ಶ್ರಿ ಮಹಾಲಕ್ಷ್ಮಿ ದೇವಸ್ಥಾನದ ರವೀಂದ್ರ ಶ್ರೀಯಾನ್, ಬಾಗ್ವಾಡಿ ಮಹಿಷಾ ಮರ್ಧಿನಿ ದೇವಸ್ಥಾನದ ವಿಠಲ್ ಕರ್ಕೇರ ಬೆಳ್ಳಂಪಳ್ಳಿ , ಮೊಗವೀರ ಯುವ ಸಂಘಟಣೆಯ ಚಂದ್ರೇಶ್ ಪಿತ್ರೋಡಿ, ಹಾಗೂ ಶ್ರೀಮತಿ ಕವಿತಾ, ದಿನಕರ್ ಮುಕ್ಕ ಮುಂತಾದವರು ಉಪಸ್ಥಿತರಿದ್ದರು*
Comments are closed.