ಮಂಗಳೂರು : ಗಣೇಶನ ಜನ್ಮ ದಿನ ( ಗಣೇಶ ಚತುರ್ಥಿ)ವಾದ ಶನಿವಾರ ಮಂಗಳೂರಿನ ಹೊರವಲಯದ ವಾಮಂಜೂರು ಪರಿಸರದಲ್ಲಿ ಪ್ರಕೃತಿದತ್ತ ಗಣಪ ಕಂಡು ಬಂದಿದ್ದು, ಹವ್ಯಾಸಿ ಛಾಯಾಗ್ರಾಹಕ ವಿಶಾಲ್ ವಾಮಂಜೂರು ಅವರು ತಮ್ಮ ಕ್ಯಾಮರದಲ್ಲಿ ಸೆರೆಹಿಡಿದ ಈ ಫೋಟೋ ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗಿದೆ.
ಮಂಗಳೂರಿನ ಹೊರವಲಯದ ವಾಮಂಜೂರಿನ ಕೆತ್ತಿಕಲ್ ಸಮೀಪ ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಮರದ ಮೇಲೆ ಪೊದೆ ಬಳ್ಳಿಗಳು ಬೆಳೆದಿದ್ದು, ಇದರಲ್ಲಿ ಪ್ರಕೃತಿದತ್ತ ಗಣಪ ರೂಪುಗೊಂಡಿದ್ದಾನೆ.
ಈ ಗಣಪತಿ ಪ್ರಕೃತಿಯಲ್ಲೇ ರೂಪು ಪಡೆದಿದ್ದು, ಮರ, ಗಿಡ, ಬಳ್ಳಿಯಿಂದ ಆವೃತ್ತವಾಗಿದೆ. ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಅರಳಿದ ಪ್ರಕೃತಿದತ್ತ ಗಣಪ ಚೌತಿಯ ದಿನದಂದೇ ಗೋಚರಿಸಿದ್ದು, ಮತ್ತೊಂದು ವಿಸ್ಮಯವಾಗಿದೆ.
Comments are closed.