ಕರಾವಳಿ

ಅಯೋಧ್ಯೆಯ ನಂತರ ಇನ್ನು ಕಾಶಿ, ಮಥುರಾ… ! : ಕಾಲಾನುಸಾರ 2023ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ !

Pinterest LinkedIn Tumblr

9ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಿಂದ ಹಿಂದೂಗಳಿಗೆ ಮಾರ್ಗದರ್ಶನ !

ಹಿಂದೂಗಳೇ,ಧರ್ಮದ ಪರವನ್ನುವಹಿಸುತ್ತಾ ಹಿಂದೂ ರಾಷ್ಟ್ರದ ದಿಕ್ಕಿನತ್ತ ಮಾರ್ಗಕ್ರಮಣ ಮಾಡಿ !

ಮಂಗಳೂರು : 70 ವರ್ಷಗಳಲ್ಲಿ ಎಂದೂ ಆಗದಿರುವಷ್ಟು ಭಾರತ ದೇಶ ಇಂದು ಆಂತರಿಕ ಹಾಗೂ ಬಾಹ್ಯ ವಿಪತ್ತುಗಳಿಂದ ಬಳಲುತ್ತಿದೆ. ಒಂದೆಡೆ ಚೀನಾ-ಪಾಕಿಸ್ತಾನ ಎರಡೂ ಸೇರಿ ಭಾರತದ ಮೇಲೆ ದಾಳಿ ಮಾಡುವ ಸಿದ್ಧತೆಯಲ್ಲಿದ್ದರೆ, ಇನ್ನೊಂದೆಡೆ ದೇಶವಿರೋಧಿ ಘಟಕವಾಗಿರುವ ಭಯೋತ್ಪಾದರು, ನಕ್ಸಲರು ಇವರ ಸನ್ನೆಯಂತೆ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಸಾಧ್ಯತೆ ಇದೆ.

ಇಸ್ಲಾಮಿಕ್ ಸ್ಟೇಟ್‌ನ ನೂರಾರು ಜನರು ಕರ್ನಾಟಕ, ಅದೇರೀತಿ ಕೇರಳ ರಾಜ್ಯಗಳಲ್ಲಿ ಸಕ್ರಿಯವಾಗಿ ದೇಶದಲ್ಲಿ ರಕ್ತಪಾತ ಮಾಡುವಲ್ಲಿ ಸಕ್ರಿಯವಾಗುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಸಮಯದಲ್ಲಿ ದೇಶವಿರೋಧಿ ಪ್ರವೃತ್ತಿಯವರನ್ನು ಬಂಧಿಸುವುದು ಅಗತ್ಯವಿದೆ.

ಕೊರೋನಾ ಮಹಾಮಾರಿಯ ಕಾಲದಲ್ಲಿ ತಬಲೀಗಿ ಜಮಾತ್ ‘ಕೊರೋನಾ ವಾಹಕ’ರಾಗಿ, ಹಿಂದುತ್ವನಿಷ್ಠ ಸಂಘಟನೆಯವರು ‘ಕೊರೋನಾ ಯೋಧ’ರಾಗಿ ಪಾತ್ರ ನಿರ್ವಹಿಸಿದರು. ಸದ್ಯ ರಾಜಕೀಯ, ಶಿಕ್ಷಣ, ಪ್ರಸಾರ ಮಾಧ್ಯಮಗಳು, ಕಲೆ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ ‘ದೇಶಭಕ್ತ ಹಾಗೂ ಧರ್ಮಪ್ರೇಮಿ’ಗಳ ವಿರುದ್ಧ ‘ದೇಶದ್ರೋಹಿ ಹಾಗೂ ಧರ್ಮವಿರೋಧಿ’ ಹೀಗೆ ಧ್ರುವೀಕರಣವಗುತ್ತಿದೆ.

ಈ ವೈಚಾರಿಕ ಧ್ರುವೀಕರಣದ ಕಾಲದಲ್ಲಿ ಧರ್ಮದ ಪರವಾಗಿದ್ದು ಹಿಂದೂ ರಾಷ್ಟ್ರದ ದಿಕ್ಕಿನತ್ತ ಮಾರ್ಗದರ್ಶನ ಮಾಡುವುದು ಅಗತ್ಯವಿದೆ.

ಇಂದು ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳಿದ್ದೂ ಇವರು ಸ್ವಾತಂತ್ರ್ಯದ 7 ದಶಕಗಳ ಕಾಲ ಅನ್ಯಾಯ, ಅತ್ಯಾಚಾರ, ಪಕ್ಷಪಾತ ಹಾಗೂ ಅವಮಾನವನ್ನು ಸಹಿಸಿಕೊಳ್ಳುತ್ತಾ ಬಂದಿದೆ. ಹಿಂದೂಗಳಿಗೆ ಅಸಂಖ್ಯಾತ ಸಮಸ್ಯೆಗಳಿವೆ. ಅದಕ್ಕೆ ಹಿಂದೂ ರಾಷ್ಟ್ರದ ಸ್ಥಾಪನೆ’ ಇದೊಂದೇ ಉಪಾಯವಾಗಿದೆ.

ಇದನ್ನು ಗಮನದಲ್ಲಿಟ್ಟು ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆ ಕಳೆದ 8 ವರ್ಷಗಳ ಕಾಲ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಮಾಧ್ಯಮದಿಂದ ಹಿಂದೂಗಳನ್ನು ಸಂಘಟಿಸಲು ಪ್ರಯತ್ನಿಸುತ್ತಿದೆ. ಆದ್ದರಿಂದಲೇ ಇಂದು ಭಾರತದೊಂದಿಗೆ ವಿದೇಶಗಳಲ್ಲಿಯೂ ಹಿಂದೂ ರಾಷ್ಟ್ರದ ಚರ್ಚೆ ಭರದಲ್ಲಿ ನಡೆಯುತ್ತಿದೆ. ಅದಕ್ಕಾಗಿ ಭಾರತ, ಅದೇರೀತಿ ನೇಪಾಳ, ಬಾಂಗ್ಲಾದೇಶ, ಇಂಡೋನೇಶಿಯಾ ಈ ದೇಶಗಳ ಹಿಂದುತ್ವನಿಷ್ಠ ಸಂಘಟನೆಗಳು ಹಿಂದೂ ರಾಷ್ಟ್ರ ನಿರ್ಮಾಣದ ಉದ್ದೇಶಕ್ಕಾಗಿ ಸಂಘಟಿತರಾಗಿದ್ದಾರೆ.

ಇಂದು ಕೊರೋನಾ ಈ ಜಾಗತಿಕ ಮಹಾಮಾರಿಯಿಂದಾಗಿ ಈ ಅಧಿವೇಶನವನ್ನು ಜುಲೈ 30 ರಿಂದ ಆಗಸ್ಟ್ 2 ಹಾಗೂ 6 ರಿಂದ ಆಗಸ್ಟ್ 9 ರ ಕಾಲಾವಧಿಯಲ್ಲಿ ‘ಆನ್‌ಲೈನ್’ನಲ್ಲಿ ಸಾಕಾರಗೋಂಡಿತು. ಈ 8 ದಿನಗಳಲ್ಲಿ ದೇಶ-ವಿದೇಶಗಳ ೩೦೦ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು, ನ್ಯಾಯವಾದಿಗಳು, ವಿಚಾರವಂತರು, ಸಂಪಾದಕರು ಇತ್ಯಾದಿಗಳು ಈ ಅಧಿವೇಶನಕ್ಕೆ ‘ಆನ್‌ಲೈನ್’ನಿಂದ ಉಪಸ್ಥಿತರಿದ್ದರು.

ಸಮಿತಿಯ ‘ಯೂ-ಟ್ಯೂಬ್’ ಚಾನೆಲ್ `hindujagruti’ ಹಾಗೂ ಫೇಸ್‌ಬುಕ್ ಪೇಜ್ `hinduadhiveshan’ ಈ ಮೂಲಕ ಅಧಿವೇಶನವನ್ನು 3 ಲಕ್ಷ 90 ಸಾವಿರಕ್ಕಿಂತಲೂ ಹೆಚ್ಚು ಜನರು ಪ್ರತ್ಯಕ್ಷವಾಗಿ ನೋಡಿದರು.

ಪೂರ್ವ ಮತ್ತು ಪೂರ್ವೋತ್ತರ ಭಾರತದಲ್ಲಿ ಹಿಂದೂಗಳ ಹೆಚ್ಚಾಗುತ್ತಿರುವ ಮತಾಂತರದ ದಯನೀಯ ವಾಸ್ತವಿಕತೆ !

ವಿವಿಧ ವಿಷಯಗಳ ಬಗ್ಗೆ ತೆಗೆದುಕೊಳ್ಳಲಾದ ‘ವಿಶೇಷ ಚರ್ಚಾಗೋಷ್ಠಿ’ಯು ಈ ಅಧಿವೇಶನದ ವೈಶಿಷ್ಟ್ಯವಾಗಿತ್ತು. ‘ದೇವಸ್ಥಾನಗಳ ರಕ್ಷಣೆ’, ‘ಹಿಂದೂ ರಾಷ್ಟ್ರದ ಆವಶ್ಯಕತೆ ಮತ್ತು ದಿಶೆ’ ಇಂತಹ ವಿವಿಧ ವಿಷಯಗಳ ವಿಶೇಷ ಚರ್ಚಾಗೋಷ್ಠಿಗಳನ್ನು ತೆಗೆದುಕೊಂಡು ವ್ಯಾಪಕ ವಿಚಾರಮಂಥನ ಮಾಡಲಾಯಿತು.

‘ಪೂರ್ವ ಮತ್ತು ಪೂರ್ವೋತ್ತರ ಭಾರತದಲ್ಲಿ ಹಿಂದೂಗಳ ಹೆಚ್ಚುತ್ತಿರುವ ಮತಾಂತರ ಮತ್ತು ಅದರ ಮೇಲಿನ ಉಪಾಯ’ ಈ ವಿಷಯದ ಚರ್ಚಾಗೋಷ್ಠಿಯಲ್ಲಿ ಕೇಂದ್ರಸರಕಾರವು ಮತಾಂತರಕ್ಕಾಗಿ ವಿದೇಶದಿಂದ ಬರುವ ನಿಧಿಯನ್ನು ಪ್ರಾಮುಖ್ಯವಾಗಿ ತಡೆಹಿಡಿದು ರಾಷ್ಟ್ರೀಯ ಸ್ತರದಲ್ಲಿ ಮತಾಂತರ ನಿಷೇಧ ಕಾಯದೆಯನ್ನು ಜಾರಿಗೆ ತರಬೇಕು  ಎಂಬ ಬೇಡಿಕೆಯನ್ನು ಝಾರಖಂಡದ ‘ತರುಣ ಹಿಂದೂ’ ಸಂಸ್ಥಾಪಕ ಅಧ್ಯಕ್ಷ ಡಾ. ನೀಲ ಮಾಧವ ದಾಸ ಇವರು ಮಾಡಿದರು.

ತ್ರಿಪುರಾದಲ್ಲಿನ ಶಾಂತಿ ಕಾಲಿ ಆಶ್ರಮದ ಪೂ. ಸ್ವಾಮಿ ಚಿತ್ತರಂಜನ ಮಹಾರಾಜರು ಹಿಂದೂಗಳ ಮತಾಂತರವನ್ನು ತಡೆಗಟ್ಟಲು ಹೆಚ್ಚೆಚ್ಚು ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು ಮತ್ತು ಬಂಗಾಲದ ಶಾಸ್ತ್ರ ಧರ್ಮಪ್ರಚಾರ ಸಭೆಯ ಡಾ. ಕೌಶಿಕಚಂದ್ರ ಮಲ್ಲಿಕ ಇವರು ಬಂಗಾಲದಲ್ಲಿ ಮತಾಂತರ ನಿಷೇಧ ಸಹಿತ ನುಸುಳುವಿಕೆಯನ್ನು ತಡೆಯುವುದು, ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿಗೆ ತರುವುದು ಮತ್ತು ಧರ್ಮಶಿಕ್ಷಣ ನೀಡುವ ಆವಶ್ಯಕತೆಯನ್ನು ನಿರೂಪಿಸಿದರು.

ಈ ಸಮಯದಲ್ಲಿ ಮೇಘಾಲಯದ ಸಾಮಾಜಿಕ ಕಾರ್ಯಕರ್ತೆಯಾದ ಶ್ರೀಮತಿ ಇಸ್ಟರ್ ಖರಬಾಮೊನ್ ಇವರು ‘ಮೇಘಾಲಯದಲ್ಲಿ ಹಿಂದೂಗಳಿಗೆ, ಶಾಲೆ, ಆಸ್ಪತ್ರೆ, ಸರಕಾರಿ ನೌಕರಿ, ನಿವಾಸ, ವಿವಾಹ ಮುಂತಾದ ವಿಷಯಗಳಲ್ಲಿ ದುರ್ಲಕ್ಷಿಸಲಾಗುತ್ತದೆ; ಆದರೆ ಕ್ರೈಸ್ತರು ಮತ್ತು ಮುಸಲ್ಮಾನರಿಗೆ ಎಲ್ಲ ಸೌಲಭ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ನೀಡಲಾಗುತ್ತದೆ; ಆದ್ದರಿಂದ ಹಿಂದೂಗಳು ಮತಾಂತರಗೊಳ್ಳುತ್ತಿದ್ದಾರೆ’ ಎಂಬ ವಾಸ್ತವಿಕತೆಯನ್ನು ಮಂಡಿಸಿದರು.

ಹಿಂದೂಗಳ ಮೇಲಿನ ಎಲ್ಲ ಅನ್ಯಾಯಗಳಿಗೆ ‘ಹಿಂದೂ ರಾಷ್ಟ್ರ’ವೊಂದೇ ಉಪಾಯ !

ಇಂದು ಸಮಾನತೆ ಹಾಗೂ ಪಂಥನಿರಪೇಕ್ಷತೆ ಈ ತತ್ತ್ವಗಳನ್ನು ಹೇಳುತ್ತಾ ಸರಕಾರ ಹಿಂದೂಗಳ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುತ್ತಿದೆ; ಆದರೆ ಒಂದೇ ಒಂದು ಮಸೀದಿ ಅಥವಾ ಚರ್ಚ್‌ಗಳನ್ನು ವಶಪಡಿಸಿಕೊಳ್ಳುವುದಿಲ್ಲ. ಹಿಂದೂಗಳಿಗೆ ಧಾರ್ಮಿಕ ಯಾತ್ರೆಗಳಿಗೆ ಸೌಲಭ್ಯಗಳನ್ನು ನೀಡುವುದಿಲ್ಲ; ಆದರೆ ಹಜ್ ಯಾತ್ರೆಗೆ ಕೋಟಿಗಟ್ಟಲೆ ರೂಪಾಯಿ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಸಂವಿಧಾನಕ್ಕನುಸಾರ ಅಲ್ಪಸಂಖ್ಯಾತರಿಗೆ ಧಾರ್ಮಿಕ ಶಿಕ್ಷಣ ನೀಡುವ ಮತ್ತು ಸರಕಾರಿ ಅನುದಾನ ಪಡೆಯುವ ಅಧಿಕಾರವಿದೆ. ಆದರೆ ಹಿಂದೂಗಳಿಗೆ ಇಲ್ಲ. ಈ ರೀತಿಯಲ್ಲಿ ಹಿಂದೂಗಳ ಮೇಲಾಗುತ್ತಿರುವ ಎಲ್ಲ ಅನ್ಯಾಯದ ಮೇಲೆ ‘ಹಿಂದೂ ರಾಷ್ಟ್ರದ ಸ್ಥಾಪನೆ’ ಇದು ಏಕೈಕ ಉಪಾಯವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ  ರಮೇಶ ಶಿಂದೆಯವರು ಅಧಿವೇಶನದಲ್ಲಿ ಹೇಳಿದರು.

ಅಧಿವೇಶನದಲ್ಲಿ ‘ಜಿಹಾದಿ ಭಯೋತ್ಪಾದನೆಯ ಪ್ರತಿಕಾರ’, ‘ರಾಷ್ಟ್ರರಕ್ಷಣೆ’, ‘ರಾಷ್ಟ್ರವಿರೋಧಿ ತತ್ತ್ವಗಳ ಪ್ರತಿಕಾರ’, ‘ಸುರಾಜ್ಯ ಅಭಿಯಾನ’ ಇತ್ಯಾದಿ ವಿಷಯಗಳ ಮೇಲೆಯೂ ಅನೇಕ ಗಣ್ಯರು ಅಭ್ಯಾಸಪೂರ್ಣ ಮಾಹಿತಿಯನ್ನು ನೀಡಿ ಕಾನೂನಿನ ಮಾರ್ಗದಿಂದ ಹೋರಾಡಲು ಕರೆ ನೀಡಿದರು. ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಗಣ್ಯ ವಕ್ತಾರರು ಹಾಗೂ ಸಂತರು ಪ್ರತಿಪಾದಿಸಿದಂತೆ ಹಿಂದೂಗಳಿಗೆ ಕಾರ್ಯತಂತ್ರದ ದಾರಿ ಸಿಕ್ಕಿತು. ಅದರಲ್ಲಿಯ ಮಹತ್ವದ ಅಂಶ ಈ ಮುಂದಿನಂತೆ ಇದೆ…

ಅಯೋಧ್ಯೆಯ ನಂತರ ಇನ್ನು ಕಾಶಿ, ಮಥುರಾ… !

ಅಧಿವೇಶನದಲ್ಲಿ ಸಹಭಾಗಿಯಾಗಿದ್ದ ಪ್ರಖರ ಹಿಂದುತ್ವನಿಷ್ಠ ಹಾಗೂ ತೆಲಂಗಾಣದ ಭಾಜಪದ ಶಾಸಕ ಶ್ರೀ. ಟಿ.ರಾಜಾಸಿಂಹ ಇವರು ಹಿಂದೂಗಳಿಗೆ ಕರೆ ನೀಡುತ್ತಾ, ‘ತ್ರಿವಳಿ ತಲಾಖ್ ನಿಷೇಧ, ಕಲಮ್ 370 ರದ್ದು ಪಡಿಸುವುದು ಹಾಗೂ ಶ್ರೀರಾಮಮಂದಿರದ ನಿರ್ಮಾಣ ಈ ಮೂರೂ ಅಂಶಗಳು ಪೂರ್ಣವಾಗಿವೆ. ಇನ್ನು ಕಾಶಿಯಲ್ಲಿನ ವಿಶ್ವನಾಥ ದೇವಸ್ಥಾನ ಹಾಗೂ ಮಥುರಾದಲ್ಲಿನ ಶ್ರೀಕೃಷ್ಣ ದೇವಸ್ಥಾನ ಇವುಗಳನ್ನು ನಿರ್ಮಿಸುವುದು ಹಾಗೂ ಕೊನೆಯಲ್ಲಿ ಅಖಂಡ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬೇಕಿದೆ. ಅದಕ್ಕಾಗಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಧರ್ಮವೀರ ಸಂಭಾಜಿ ಮಹಾರಾಜರ ಮಾರ್ಗವನ್ನು ಅನುಸರಿಸಬೇಕು. ಅದಕ್ಕಾಗಿ ಕೇವಲ ಚರ್ಚೆಯಲ್ಲ, ಹಿಂದೂಗಳು ಪ್ರತ್ಯಕ್ಷ ಕೃತಿಶೀಲರಾಗಬೇಕು ಎಂದು ಹೇಳಿದರು.

ರಾಜಕಾರಣದ ಹಿಂದೂಕರಣ ಆಗುವುದು ಆವಶ್ಯಕವಿದೆ !

‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ನ ಕೋಷಾಧ್ಯಕ್ಷ ಸ್ವಾಮಿ ಗೋವಿಂದ ದೇವಗಿರಿ ಮಹಾರಾಜ ಇವರು, ‘ಭಾರತವು ಸ್ವಯಂಭೂ ಹಿಂದೂ ರಾಷ್ಟ್ರವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರೂ ಹಿಂದೂ ಸಾಮ್ರಾಜ್ಯದ ಸ್ಥಾಪನೆ ಮಾಡಿದ್ದರು. ಸ್ವಾತಂತ್ರ್ಯದ ನಂತರ ಮಾತ್ರ ಅಧಿಕಾರಕ್ಕೆ ಬರುವವರು ಹಿಂದೂವಿರೋಧಿ ವಿಚಾರವನ್ನು ಕಾಪಾಡಿದ್ದಾರೆ; ಆದರೆ ಮುಂದೆ ಹಿಂದೂ ರಾಷ್ಟ್ರವನ್ನು ಅಬಾಧಿತವಾಗಿಡುವುದು ಪ್ರತಿಯೊಬ್ಬ ಹಿಂದೂಗಳ ಜವಾಬ್ದಾರಿಯಾಗಿದೆ. ಅದಕ್ಕಾಗಿ ಸ್ವಾತಂತ್ರ್ಯವೀರ ಸಾವರಕರ ಇವರು ಹೇಳಿದಂತೆ ರಾಜಕಾರಣದ ಹಿಂದೂಕರಣವಾಗುವುದು ಅಗತ್ಯವಿದೆ’ ಎಂದು ಹೇಳಿದರು.

ಆಪತ್ಕಾಲದಲ್ಲಿ ರಕ್ಷಣೆಯಾಗಲು ಭಕ್ತರಾಗಿ !

ಈ ಸಮಯದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸದ್ಗುರು ನಂದುಕುಮಾರ ಜಾಧವ ಇವರು ಮಾತನಾಡುತ್ತಾ, ‘ನನ್ನ ಭಕ್ತರ ನಾಶ ಎಂದಿಗೂ ಆಗುವುದಿಲ್ಲ’ ಎಂಬುದು ಭಗವಂತನ ವಚನವಾಗಿದೆ, ರಾಜ್ಯಕರ್ತರು ಸಾಧನಸಾಮಗ್ರಿಗಳಿಂದ ಸಜ್ಜುಗೊಂಡಿದ್ದರೂ, ಅವರು ಜನರ ರಕ್ಷಣೆ ಮಾಡಲು ಸಾಧ್ಯವಿಲ್ಲ, ಎಂಬುದನ್ನು ನಾವು ಅನುಭವಿಸುತ್ತಿದ್ದೇವೆ. ಈಶ್ವರನು ಮಾತ್ರ ಭಕ್ತರ ಕರೆಗೆ ಧಾವಿಸಿ ಬರುತ್ತಾನೆ. ಆದ್ದರಿಂದ ಮುಂಬರುವ ಆಪತ್ಕಾಲದಲ್ಲಿ ನಮ್ಮ ರಕ್ಷಣೆಯಾಗಲು ಈಶ್ವರನ ಭಕ್ತರಾಗಬೇಕು ಹಾಗೂ ಇತರರಿಗೂ ಸಾಧನೆಯನ್ನು ಮಾಡಲು ಸಹಾಯ ಮಾಡಬೇಕು’ ಎಂದು ಹೇಳಿದರು.

ಕಾಲಾನುಸಾರ 2023 ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ !

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು(ಡಾ.) ಚಾರುದತ್ತ ಪಿಂಗಳೆಯವರು ಮಾತಮಾಡುತ್ತಾ, ಆಪತ್ಕಾಲದಲ್ಲಿ ಜಗತ್ತು ಮೂರನೇ ಮಹಾಯುದ್ಧದ ಹೊಸ್ತಿಲಿನಲ್ಲಿದೆ. ಕೊರೋನಾ ಮಹಾಮಾರಿಯ ನಂತರ ಚೀನಾದ ವಿರುದ್ಧ ಅನೇಕ ದೇಶಗಳು ಒಟ್ಟಾಗಿವೆ. ವಿಶ್ವಯುದ್ಧ ಆರಂಭವಾದರೆ, ಭಾರತವಿರೋಧಿ ಶಕ್ತಿಗಳು ಜಾತಿ-ಧರ್ಮ ಇವುಗಳ ಹೆಸರಿನಲ್ಲಿ ಗೃಹಯುದ್ಧ ನಡೆಸುವ ಸಂಚನ್ನು ರೂಪಿಸುವ ಸಾಧ್ಯತೆಗಳಿವೆ.

ಈ ಮುಂಬರುವ ಅರಾಜಕತೆಯ ಪರಿಸ್ಥಿತಿಯನ್ನು ಎದುರಿಸಲು ಹಿಂದುತ್ವನಿಷ್ಠರು ಅಗ್ನಿಶಮನ, ಪ್ರಥಮೋಪಚಾರ, ಆಪತ್ಕಾಲೀನ ಸಹಾಯಗಳು, ನಾಗರಿಕರ ರಕ್ಷಣೆ ಇತ್ಯಾದಿ ಆಪತ್ಕಾಲದ ಪರಿಸ್ಥಿತಿಯನ್ನು ನಿಭಾಯಿಸಲು ತರಬೇತಿ ಪಡೆಯುವುದು ಆವಶ್ಯಕತೆ ಇದೆ. ಕಾಲಮಹಾತ್ಮೆಗನುಸಾರ 2023 ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಖಂಡಿತ ಆಗಲಿದೆ. ಅದಕ್ಕಾಗಿ ಯೋಗದಾನ ನೀಡುವುದು, ಸಾಧನೆಯೇ ಆಗಿದೆ’ ಎಂದು ಹೇಳಿದರು.

9 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಒಪ್ಪಿಗೆ ನೀಡಿದ್ದ ಠರಾವುಗಳು !

‘ಸೆಕ್ಯುಲರ್’ ಶಬ್ಧವನ್ನು ತೆಗೆದು ‘ಸ್ಪಿರಿಚ್ಯುವಲ್’ ಪದ ಹಾಕಬೇಕು ಹಾಗೂ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಬೇಕು. ನೇಪಾಳ ಹಿಂದೂ ರಾಷ್ಟ್ರವೆಂದು ಘೋಷಿತವಾಗಬೇಕು. ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮಮಂದಿರದಲ್ಲಿ ಹಿಂದೂಗಳಿಗಾಗಿ ಧರ್ಮಶಿಕ್ಷಣ ನೀಡಬೇಕು. ರಾಮಮಂದಿರದಂತೆ ಕಾಶಿ, ಮಥುರಾ ಇತ್ಯಾದಿ ದೇವಸ್ಥಾನಗಳನ್ನು ಮುಕ್ತ ಮಾಡಲು ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ 1991’ ಈ ಕಾನೂನನ್ನು ರದ್ದು ಪಡಿಸಬೇಕು. ದೇಶದಲ್ಲಿ ‘ಸಮಾನ ನಾಗರಿಕ ಕಾನೂನು’, ‘ಗೋವಂಶ ಹತ್ಯಾ ನಿಷೇಧ’, ‘ಮತಾಂತರ ನಿಷೇಧ’, ಅದೇರೀತಿ ‘ಹಿಂದೂ ದೇವತೆ ಹಾಗೂ ಶ್ರದ್ಧಾಸ್ಥಾನಗಳ ಅವಮಾನವನ್ನು ನಿಲ್ಲಿಸಲು ಕಠಿಣ ಕಾನೂನು ರೂಪಿಸಬೇಕು.

ಕಾಶ್ಮೀರ ಕಣಿವೆಯಲ್ಲಿ ಸ್ವತಂತ್ರ ‘ಪನೂನ ಕಾಶ್ಮೀರ’ ಈ ಕೇಂದ್ರಾಡಳಿತ ಪ್ರದೇಶವನ್ನು ನಿರ್ಮಿಸಿ ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಬೇಕು. ಸರಕಾರಿಕರಣಗೊಂಡ ಎಲ್ಲ ದೇವಸ್ಥಾನಗಳನ್ನು ಸ್ವಾಧೀನ ಪಡಿಸಿಕೊಳ್ಳುವುದನ್ನು ರದ್ದುಪಡಿಸಿ ಆ ದೇವಸ್ಥಾನಗಳನ್ನು ಭಕ್ತರಿಗೆ ಒಪ್ಪಿಸಬೇಕು ಹೀಗೆ ಅನೇಕ ಠರಾವುಗಳಿಗೆ ಈ ಅಧಿವೇಶನದಲ್ಲಿ ಒಪ್ಪಿಗೆ ನೀಡಲಾಯಿತು.

ರಾಷ್ಟ್ರ ಹಾಗೂ ಧರ್ಮ ರಕ್ಷಣೆಯ ವಿಷಯದಲ್ಲಿ ಕೃತಿ ಕಾರ್ಯಕ್ರಮವನ್ನು ನಿರ್ಧರಿಸಲು ‘ಆನ್‌ಲೈನ್’ ಗುಂಪು ಚರ್ಚೆಯನ್ನೂ ತೆಗೆದುಕೊಳ್ಳಲಾಯಿತು.

ದೇಶ ವಿದೇಶಗಳಿಂದ ಸಹಭಾಗಿಯಾಗಿದ್ದ ಹಿಂದುತ್ವನಿಷ್ಠರು ಮುಂಬರುವ ಆಪತ್ಕಾಲ ಪರಿಸ್ಥಿತಿಯಲ್ಲಿ ಹಿಂದೂಗಳ ಪರ್ಯಾಯವಾಗಿ ದೇಶದ ರಕ್ಷಣೆಯನ್ನು ಮಾಡಲು ಸಿದ್ಧತೆಯನ್ನು ತೋರಿದರು.

ದೇಶದಲ್ಲಿ ಲೋಕಕಲ್ಯಾಣಕಾರಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು, ಅದಕ್ಕಾಗಿ ಎಲ್ಲರೂ ಕಟಿಬದ್ಧರಾಗಿದ್ದಾರೆ ಹಾಗೂ ಆ ದಿಕ್ಕಿನತ್ತ ಸಂಘಟಿತವಾಗಿ ಕಾರ್ಯ ಮಾಡುವಂತೆ ಎಲ್ಲರೂ ನಿರ್ಧರಿಸಿದರು. ಹಿಂದೂ ರಾಷ್ಟ್ರ ಸ್ಥಾಪನೆಯ ದಿಕ್ಕಿನತ್ತ ಮಾರ್ಗಕ್ರಮಣ ಮಾಡಲು ಹಿಂದೂ ಬಾಂಧವರು ಸಿದ್ಧರಾಗುತ್ತಿದ್ದಾರೆ, ಈ ವಿಶ್ವಾಸ ಅಧಿವೇಶನದಲ್ಲಿ ಕಂಡುಬಂದಿತು.

ವರದಿ ಕೃಪೆ:
ಶ್ರೀ ರಮೇಶ ಶಿಂದೆ,
ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.
ಸಂಪರ್ಕ ಸಂ. : 99879 66666

Comments are closed.