ಕರಾವಳಿ

ಮೃಣ್ಮಯಿ ಗಣಪತಿ ಶಿಲ್ಪಿ ಪ್ರಭಾಕರ್ ರಾವ್ ಅವರಿಗೆ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಂದ ಸನ್ಮಾನ

Pinterest LinkedIn Tumblr

ಮಂಗಳೂರು: ನಗರದ ಮಣ್ಣಗುಡ್ಡೆಯ ಹರಿದಾಸ್ ಲೇನ್ ನ ಪ್ರಸಿದ್ದ ಪಾರಂಪರಿಕ ಮೃಣ್ಮಯಿ ಗಣಪತಿ ವಿಗ್ರಹ ನಿರ್ಮಿಸುವ ಹಿರಿಯ ಶಿಲ್ಪಿ ಪ್ರಭಾಕರ್ ರಾವ್ ಅವರಿಗೆ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.

ಅನೇಕ ತಲೆಮಾರುಗಳಿಂದ ಮೃಣ್ಮಯಿ ಗಣಪತಿಯನ್ನು ರಚಿಸಿಕೊಂಡು ಬರುತ್ತಿರುವ ಕುಟುಂಬದ ಹಿರಿಯ ಶಿಲ್ಪಿ ಪ್ರಭಾಕರ್ ರಾವ್ ತನ್ನ ಸಹೋದರರಾದ ಸುಧಾಕರ್ ರಾವ್, ಮತ್ತು ರಾಮಚಂದ್ರ ರಾವ್ ಜತೆ ಗೂಡಿಕೊಂಡು ಈ ಕಾಯಕದಲ್ಲಿ ಪ್ರಸಿದ್ದರಾಗಿರುವರು.

ಪೂರ್ವಜರಿಂದ ಕರಗತವಾದ ಈ ವಿದ್ಯೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಪ್ರಭಾಕರ್ ರಾವ್ ಸಹೋದರರು ನಗರದ ಪ್ರಸಿದ್ದ ಸಂಘನಿಕೇತನದ ಗಣಪತಿ, ಪೊಲೀಸ್ ಲೇನ್ ನ ಗಣಪತಿ, ಕೆ.ಎಸ್.ಆರ್.ಟಿ.ಸಿ ಗಣಪತಿ, ಸಹಿತ ಮನೆ ಮನೆಗಳಲ್ಲಿ ಪೂಜಿಸಲ್ಪಡುವ ಸಾವಿರಾರು ಸಂಖ್ಯೆಯ ಮೃಣ್ಮಯ ವಿಗ್ರಹಗಳನ್ನು ಶಾಸ್ತ್ರೀಯವಾಗಿ ರಚಿಸುವ ಮೂಲಕ ಶ್ಲಾಘನೀಯ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಸಾಹಿತ್ಯಪರಿಷತ್ ನ ಜಿಲ್ಲಾಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ಹಿರಿಯ ಶಿಲ್ಪಿ ಪ್ರಭಾಕರ್ ರಾಯರನ್ನು ಅವರ ಶಿಲ್ಪಕಲಾ ಕೇಂದ್ರದಲ್ಲಿ ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಕೊಂಡಾಡಿದ್ದಾರೆ.

ಈ ಸಂದರ್ಭ ಸುಧಾಕರ್ ರಾವ್,ರಾಮಚಂದ್ರ ರಾವ್, ಪೊಲೀಸ್ ಲೇನ್ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಕಲ್ಕೂರ ಪ್ರತಿಷ್ಠಾನದ ಲಎಂ.ನಾರಾಯಣ ಭಟ್, ವಿಜಯಕುಮಾರ್ , ಪೊಳಲಿ ನಿತ್ಯಾನಂದ ಕಾರಂತ, ಜನಾರ್ದನ ಹಂದೆ , ಚಂದ್ರಕಾಂತ ನಾಯಕ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Comments are closed.