ಕರಾವಳಿ

ಮಂಗಳೂರಿನಲ್ಲಿ ವಿವಿಧ ತಾತ್ಕಾಲಿಕ ಹುದ್ದೆಗಳಿಗೆ ನಾಳೆ ನೇರ ಸಂದರ್ಶನ: ಇಲ್ಲಿದೆ ವಿವರ

Pinterest LinkedIn Tumblr

ಮಂಗಳೂರು ಆಗಸ್ಟ್ 24 : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋವಿಡ್-19 ನಿಯಂತ್ರಣ ಕಾರ್ಯಕ್ರಮ ದಡಿಯಲ್ಲಿ ಸಂಚಾರಿ ಕ್ಷಿಪ್ರ ಪ್ರತಿಜನಕ ಪರೀಕ್ಷೆ (RAT) ನಡೆಸಲು ಅಗತ್ಯವಿರುವ ತಂಡಗಳಿಗೆ ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಡಾಟಾ ಎಂಟ್ರಿ ಅಪರೇಟರ್‍ಗಳನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಮಟ್ಟಿಗೆ ನೇಮಕ ಮಾಡಿಕೊಳ್ಳಲು ಆಗಸ್ಟ್ 25 ರಂದು ಬೆಳಿಗ್ಗೆ 11 ಗಂಟೆಗೆ ದ.ಕ ಜಿಲ್ಲಾ ಪಂಚಾಯತ್ ಆವರಣ, ನೇತ್ರಾವತಿ ಸಭಾಂಗಣ ನೇರ ಸಂದರ್ಶನ ನಡೆಸಲಾಗುವುದು.

ಹುದ್ದೆಯ ವಿವರ- ಪ್ರಯೋಗ ಶಾಲಾ ತಂತ್ರಜ್ಞರು, ಸಂಖ್ಯೆ- 51, ಮಾಸಿಕ ವೇತನ- ರೂ. 10,000+15/- ಸ್ವಾಬ್ ಕಲೆಕ್ಸನ್, ವಿದ್ಯಾರ್ಹತೆ- ಎಂ.ಎಲ್.ಟಿ./ಡಿ.ಎಂ.ಎಲ್.ಟಿ ಬಿ.ಎಸ್‍ಸಿ.-ಎಂ.ಎಲ್.ಟಿ. ಇವರಿಗೆ ಪ್ರಥಮ ಆದ್ಯತೆ.

ನರ್ಸಿಂಗ್/ಅರೆ ವೈದ್ಯಕೀಯ ಪದವೀಧರರು, ಡಿಪ್ಲೋಮೋದಾರರು ಮತ್ತು ವಿಜ್ಞಾನ ಪದವೀಧರರು ಇವರಿಗೆ ಎರಡನೇ ಆದ್ಯತೆ.

ಹುದ್ದೆಯ ವಿವರ- ದತ್ತಾಂಶ ನಮೂದಕರು (ಡಾಟಾ ಎಂಟ್ರಿ ಅಪರೇಟರ್, ಸಂಖ್ಯೆ- 51, ಮಾಸಿಕ ವೇತನ- ರೂ. 14,000/-, ವಿದ್ಯಾರ್ಹತೆ-ಪಿಯುಸಿ ಮತ್ತು 6 ತಿಂಗಳ ಬೇಸಿಕ್ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು.

ಸಲ್ಲಿಸಬೇಕಾದ ದಾಖಲೆಗಳು:

ವಿದ್ಯಾರ್ಹತೆಯ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿ ಹಾಗೂ ಅವುಗಳ ಸ್ವಯಂ ದೃಡೀಕೃತ ನಕಲು ಪ್ರತಿಗಳು, ಅನುಭವಕ್ಕೆ ಆದ್ಯತೆ ನೀಡಲಾಗುವುದು. ಆದ್ದರಿಂದ ಅನುಭವ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಹಾಜರಾಗಬೇಕು. (ಈಗಾಗಲೇ ಈ ಕಚೇರಿಗೆ ಅರ್ಜಿಯನ್ನು ಸಲ್ಲಿಸಿದವರು ನೇರ ಸಂದರ್ಶನಕ್ಕೆ ಎಲ್ಲಾ ದಾಖಲಾತಿಗಳೊಂದಿಗೆ ಹಾಜರಾಗುವುದು)

ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ದ.ಕ ಮಂಗಳೂರು ಇಲ್ಲಿನ ಕಚೇರಿ ವೇಳೆಯಲ್ಲಿ ದೂರವಾಣಿ ಮುಖಾಂತರ ಪಡೆಯಬಹುದು ಎಂದು ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆ ತಿಳಿಸಿದೆ.

Comments are closed.