ಮಂಗಳೂರು : ಅರಬ್ ರಾಷ್ಟ್ರವಾದ ದುಬಾಯಿಯ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ ಮೆಂಟ್ ಫೋರಂ ಘಟಕದ ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಮುರ್ಡೇಶ್ವರ ಆಯ್ಕೆಯಾಗಿದ್ದಾರೆ.
AIMDF ದೇಶಾದ್ಯಂತ ವಿಸ್ತರಿಸಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಕಾರ್ಯಕರ್ತರ ಪಡೆಯನ್ನು ಹೊಂದಿದೆ. ಇದೀಗ ( UAE ) ಯುನೈಟೆಡ್ ಅರಬ್ ಎಮಿರೇಟ್ಸ್ ಗೂ ಲಗ್ಗೆ ಇಟ್ಟಿದ್ದು ಅನಿವಾಸಿ ಭಾರತೀಯರಿಗಾಗಿ ತನ್ನ ಸೇವೆಯನ್ನು ಯುಎಇ ಗೂ ವಿಸ್ತರಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಸಿಸಿ ದೇಶಗಳಲ್ಲಿ ಮೊದಲ ಹಂತದ ಸಲುವಾಗಿ ಯುಎಐ ಯಲ್ಲಿ ಸಂಘಟನೆಯ ಅಧಿಕೃತ ಸೇವೆ ಪ್ರಾರಂಭವಾಗಿದ್ದು, ಜನಾಬ್ ಅಬ್ದುಲ್ ಲತೀಫ್ ಮುರ್ಡೇಶ್ವರ್ ಅವರನ್ನು ಯುಎಇ ನ್ಯಾಷನಲ್ ಬೋರ್ಡ್ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಇದರ ಸಂಸ್ಥಾಪಕ ಸದಸ್ಯರೂ ಹಾಗೂ ರಾಜ್ಯ ಉಪಾಧ್ಯಕ್ಷರಾದ ಎಸ್.ಅಬೂಬಕ್ಕರ್ ಸಜೀಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಬ್ದುಲ್ ಲತೀಫ್ ಅವರು ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ .
ಅವರು 2014-2017ನೇ ಸಾಲಿನ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿ ಎಂಬ ಬಿರುದನ್ನೂ ಪಡೆದಿದ್ದಾರೆ
2015-2016ನೇ ಸಾಲಿನ ಯೆನೆಪೊಯ ಕಾಲೇಜಿನ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಹಾಗೂ ಗ್ರೀನ್ ವ್ಯಾಲಿ ನ್ಯಾಷನಲ್ ಪಿಯು ಕಾಲೇಜಿನ ಹೌಸ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು .
ಸಮಾಜಕ್ಕೆ ಒಳಿತನ್ನು ಬಯಸುತ್ತಾ ಸದಾ ಬಡ ನಿರ್ಗತಿಕ ಧ್ವನಿಯಾಗಿ ದೇಶಾಧ್ಯಂತ ಕಾರ್ಯಾಚರಿಸುತ್ತಿರುವ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಇನ್ನು ಮುಂದಕ್ಕೆ ವಿದೇಶಗಳಲ್ಲೂ ತನ್ನ ಹಿಡಿತವನ್ನು ಸಾಧಿಸಲಿವೆ ಎಂದು ಎಸ್.ಅಬೂಬಕ್ಕರ್ ಸಜೀಪ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
Comments are closed.