ಮಂಗಳೂರು, ಸೆಪ್ಟಂಬರ್.03 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮತ್ತೆ ಕೊರೋನಾ ಮಹಾಸ್ಫೋಟಗೊಂಡಿದ್ದು, 414 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದು ಜಿಲ್ಲೆಯಲ್ಲಿ ಇದವರೆಗೆ ಪತ್ತೆಯಾದ ಒಂದು ದಿನದ ಅತೀ ಹೆಚ್ಚು ಪಾಸಿಟಿವ್ ಸಂಖ್ಯೆಯಲ್ಲಿ ಎರಡನೇ ಪ್ರಕರಣವಾಗಿದೆ. ಕಳೆದ ಶುಕ್ರವಾರ ಆಗಸ್ಟ್.29ರಂದು ದ.ಕ. ಜಿಲ್ಲೆಯಲ್ಲಿ ಆತೀ ಹೆಚ್ಚು 448 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಬುಧವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಪ್ರಕಟಿಸಿದ ಪ್ರಕಟಣೆಯಲ್ಲಿ ದ.ಕ. ಜಿಲ್ಲೆಯಲ್ಲಿ 414 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಭುಧವಾರ ಸೋಂಕಿತರ ಸಂಖ್ಯೆ 13,479ಕ್ಕೆ ಏರಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏಕಾಏಕಿ ಸೋಂಕು ಹರಡುವ ಸ್ವರೂಪವೇ ಬದಲಾಗಿಬಿಟ್ಟಿದೆ. ಆತಂಕಕಾರಿ ವಿಚಾರವೆಂದರೆ ಸೋಂಕಿನ ಮೂಲವೇ ಪತ್ತೆಯಾಗದವರ ಸಂಖ್ಯೆ ( 150 )ಮತ್ತೆ ಮುಂದುವರಿದಿದೆ.
ಬುಧವಾರದಂದು ಪತ್ತೆಯಾದ ಸೋಂಕಿತರ ಪೈಕಿ ಮಂಗಳೂರಿನ 222, ಬಂಟ್ವಾಳದ 64, ಪುತ್ತೂರಿನ 49, ಸುಳ್ಯದ 31, ಬೆಳ್ತಂಗಡಿಯ 28 ಮತ್ತು ಇತರ ಜಿಲ್ಲೆಯ 20 ಮಂದಿ ಸೇರಿದ್ದಾರೆ. ಬುಧವಾರ ವರದಿಯಾದ 414 ಮಂದಿಯ ಸಹಿತ ಈವರೆಗೆ ಜಿಲ್ಲೆಯಲ್ಲಿ ಒಟ್ಟು 13,479 ಮಂದಿಗೆ ಕೊರೋನ ಸೋಂಕು ತಗುಲಿದೆ.
ಬುಧವಾರದಂದು ಪತ್ತೆಯಾದ ಸೋಂಕಿತರ ಪೈಕಿ 77 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 174 ಮಂದಿಯಲ್ಲಿ ಐಎಲ್ ಐ ಪ್ರಕರಣ ದೃಢಪಟ್ಟಿದೆ. 11 ಮಂದಿಯಲ್ಲಿ ಸಾರಿ ಪ್ರಕರಣ ಪತ್ತೆಯಾಗಿದೆ. 150 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. ಹೊರ ರಾಜ್ಯದಿಂದ ಬಂದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಬುಧವಾರ 346 ಮಂದಿ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅದರಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ 29, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 271 ಮತ್ತು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 46 ಮಂದಿ ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 10,498ಕ್ಕೇರಿದೆ. ಜಿಲ್ಲೆಯಲ್ಲಿ 2600 ಸಕ್ರಿಯ ಪ್ರಕರಣಗಳಿವೆ.
ಕೊರೊನಾ ಸೋಂಕಿಗೆ 6 ಮಂದಿ ಬಲಿ:
ಇನ್ನು ಬುಧವಾರದಂದು ದ.ಕ. ಜಿಲ್ಲೆಯಲ್ಲಿ ಮತ್ತೆ 6 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮಂಗಳೂರು ತಾಲೂಕಿನ 4, ಬೆಳ್ತಂಗಡಿ 1 ಮತ್ತು ಹೊರಜಿಲ್ಲೆಯ ಒಬ್ಬರು ಸಹಿತ ಜಿಲ್ಲೆಯಲ್ಲಿ ಬುಧವಾರ 6 ಮಂದಿ ಕೊರೋನಕ್ಕೆ ಬಲಿಯಾಗಿದ್ದು, ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಈವರೆಗೆ ಮಹಾಮಾರಿಗೆ ಬಲಿಯಾದವರ ಸಂಖ್ಯೆ 381ಕ್ಕೇರಿದೆ.
ಬುಧವಾರದ ಪ್ರಮುಖ ಅಂಶಗಳು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರದಂದು ಕೊರೋನಾ ಮಹಾಸ್ಫೋಟ
ಜಿಲ್ಲೆಯಲ್ಲಿ ಬುಧವಾರ ಬರೋಬ್ಬರಿ 414 ಮಂದಿಗೆ ಕೊರೋನಾ ಪಾಸಿಟಿವ್
ಬುಧವಾರ ಮಂಗಳೂರಿನ 222, ಬಂಟ್ವಾಳದ 64,ಪುತ್ತೂರಿನ 49, ಸುಳ್ಯದ 31,ಬೆಳ್ತಂಗಡಿಯ 28, ಹಾಗೂ ಹೊರ ಜಿಲ್ಲೆಯ 20 ಮಂದಿಗೆ ಕೊರೋನಾ ಪಾಸಿಟಿವ್
ಸಂಪರ್ಕವೇ ಪತ್ತೆಯಾಗದ 150 ಮಂದಿಗೆ ಕೊರೋನಾ ಪಾಸಿಟಿವ್
ILI ಪ್ರಕರಣದಿಂದ 174 ಮಂದಿಗೆ ಕೊರೋನಾ ಪಾಸಿಟಿವ್
ಪ್ರಾಥಮಿಕ ಸಂಪರ್ಕದಿಂದ 77 ಮಂದಿಗೆ ಕೊರೋನಾ ಪಾಸಿಟಿವ್
SARI ಪ್ರಕರಣದಿಂದ 11 ಮಂದಿಗೆ ಕೊರೋನಾ ಪಾಸಿಟಿವ್
ಹೊರ ರಾಜ್ಯದಿಂದ ಬಂದ ಇಬ್ಬರಿಗೆ ಕೊರೋನಾ ಪಾಸಿಟಿವ್
ಬುಧವಾರ ಜಿಲ್ಲೆಯಲ್ಲಿ 346 ಮಂದಿ ಗುಣಮುಖ
ಜಿಲ್ಲೆಯಲ್ಲಿ ಒಟ್ಟು 13,479 ಪಾಸಿಟಿವ್ ಕೇಸ್
ಜಿಲ್ಲೆಯಲ್ಲಿ ಒಟ್ಟು 2,600 ಆಕ್ವೀವ್ ಕೇಸ್
ಜಿಲ್ಲೆಯಲ್ಲಿ ಬುಧವಾರದಂದು 6 ಮಂದಿ ಕೊರೋನಾ ಮಹಾಮಾರಿಗೆ ಬಲಿ
ಕೊರೋನಾಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 381ಕ್ಕೆ ಏರಿಕೆ.
Comments are closed.