ಮಂಗಳೂರು, ಸೆಪ್ಟಂಬರ್.03: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ಆಯೋಜಿಸಲಾಗುವ ರಾಷ್ಟೀಯ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆ’ಯನ್ನು ಈ ಬಾರಿ ಕೊರೋನ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ನಡೆಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ಮೂರುವರೆ ದಶಕಗಳಿಂದ (36 ವರ್ಷ) ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರೀಯ ಮಕ್ಕಳ ಉತ್ಸವ- “ಶ್ರೀ ಕೃಷ್ಣ ವೇಷ ಸ್ಪರ್ಧೆ” ಯನ್ನು ಈ ಬಾರಿ ‘ಕೊರೊನಾ’ ಹಾವಳಿಯ ಪರಿಣಾಮ, ಸೆಪ್ಟೆಂಬರ್ 10, ಗುರುವಾರದಂದು Online ಮೂಲಕ ಹಮ್ಮಿಕೊಳ್ಳಲಾಗಿದೆ.
ಆದುದರಿಂದ ಸ್ಪರ್ಧಾಳು ಮಕ್ಕಳ 3 ನಿಮಿಷಗಳ ಅವಧಿಯ ಕೃಷ್ಣ ವೇಷ ಸ್ಪರ್ಧೆಯ ವೀಡಿಯೋವನ್ನು ಮನೆಯಿಂದಲೇ ಚಿತ್ರೀಕರಿಸಿ ಸೆಪ್ಟಂಬರ್ 9ರ ಒಳಗಾಗಿ ಇಮೇಲ್ ಮೂಲಕ ಕಳುಹಿಸಬೇಕು ಎಂದು ಹೇಳಿದರು.
ಒಟ್ಟು 30 ವಿಭಾಗಳಲ್ಲಿ ವಿವಿಧ ವಯೋಮಾನಗಳ ಮಕ್ಕಳ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಯಾಯ ವಿಭಾಗಕ್ಕೆ ಪ್ರತ್ಯೇಕ ಪ್ರತ್ಯೇಕ ಇಮೇಲ್ ಐಡಿಗಳನ್ನು ನೀಡಲಾಗಿದ್ದು ತಮ್ಮದೇ ವಿಭಾಗದ ಇಮೇಲ್ ಗಳಿಗೆ ಮಾತ್ರ ವಿಡಿಯೋಗಳನ್ನು ಕಳುಹಿಸಿಕೊಡಬೇಕಾಗಿ ಅವರು ಹೇಳಿದರು.
ಕನಿಷ್ಠ 30 ಸೆಕೆಂಡ್‌ನಿಂದ ಗರಿಷ್ಠ 3 ನಿಮಿಷದೊಳಗಿನ ವೀಡಿಯೋವನ್ನು ಕಳುಹಿಸಬೇಕು. ಸೆ.10ರಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ‘ನಮ್ಮ ಕುಡ್ಲ ಚಾನೆಲ್’ನಲ್ಲಿ ನೇರ ಪ್ರಸಾರದಲ್ಲಿ ವಿಜೇತ ಮಕ್ಕಳ ವೀಡಿಯೋ ಪ್ರಸಾರ ಮಾಡಲಾಗುವುದು ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ಪ್ರತಿ ವರ್ಷ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆವರಣದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿತ್ತು. ಕೋವಿಡ್‌ನಿಂದಾಗಿ ಈ ಬಾರಿ ಅಸಾಧ್ಯವಾಗಿದೆ. ಆದರೆ ಈ ಬಾರಿ ಮನೆಗಳಲ್ಲಿಯೇ ಹೆತ್ತವರು, ಮನೆ ಮಂದಿಯೆಲ್ಲಾ ಜತೆಯಾಗಿ ಚಿತ್ರೀಕರಣವನ್ನು ಅವರಿಗೆ ಇಷ್ಟದ ರೀತಿಯಲ್ಲಿ ಮಾಡಲು ಸಾಧ್ಯವಾಗಲಿದೆ ಎಂದವರು ಕಲ್ಕೂರ ಹೇಳಿದರು.
ಈ ಬಾರಿಯ ವಿಶೇಷ ತೊಟ್ಟಿಲ ಕೃಷ್ಣ, ವೃಕ್ಷ ಕೃಷ್ಣ :
ಈ ಬಾರಿ ತೊಟ್ಟಿಲ ಹಬ್ಬದ ಸಂಭ್ರಮದಲ್ಲಿರುವ ಮಗುವಿಗೆ ಸಾಧಾರಣ ಕೃಷ್ಣನ ವೇಷ ಹಾಕಿಸಿ ವೀಡಿಯೋ ಮಾಡುವ ಅವಕಾಶವಿದೆ. ಇದೇ ವೇಳೆ ಕೃಷ್ಣ ವ ವೇಷಧಾರಿಯೊಂದಿಗೆ ಮನೆಮಂದಿಯೆಲ್ಲಾ ಸೇರಿ ಮರ, ಗಿಡ ನೆಡುವ ವೀಡಿಯೋ ಮೂಲಕ ವೃಕ್ಷ ಕೃಷ್ಣ ಸ್ಪರ್ಧೆಯನ್ನೂ ಅಳವಡಿಸಲಾಗಿದೆ ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.
ಇದಲ್ಲದೆ ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀಕೃಷ್ಣ ಸೇರಿದಂತೆ ಒಟ್ಟು 32 ವಿಭಾಗಗಳಲ್ಲಿ ವಿವಿಧ ವಯೋಮಾನದ ಮಕ್ಕಳ ಸ್ಪರ್ಧೆ ನಡೆಯಲಿದೆ. ವಿಶ್ವಾದ್ಯಂತ ಮಕ್ಕಳು ಕೃಷ್ಣ ವೇಷಧಾರಿಯಾಗಿ ಭಾಗವಹಿಸಬಹುದು.
ವಿವಿಧ ಸ್ಪರ್ಧಾ ವಿಭಾಗಗಳು ಹಾಗೂ “ಇಮೇಲ್” (email Id) ಗಳ ವಿವರ
ತೊಟ್ಟಿಲ ಕೃಷ್ಣ : ಕೌಟುಂಬಿಕ ಸನ್ನಿವೇಶದೊಂದಿಗೆ ತೊಟ್ಟಿಲಲ್ಲಿ ಕೃಷ್ಣ (ವಯೋಮಿತಿಯ ನಿರ್ಬಂಧವಿರುವುದಿಲ) Email : kalkurathottilukrishna@gmail.com
ಸಂಪರ್ಕ: ಉಮೇಶ್ ಕೆ. ಆರ್. 9844173362
ಕಂದ ಕೃಷ್ಣ : 1 ವರ್ಷದ ಕೆಳಗಿನ ಪುಟಾಣಿ ಕಂದಮ್ಮಗಳಿಗಾಗಿ Email : kalkurakandakrishna@gmail.com
ಸಂಪರ್ಕ: ಮಂಜುಳಾ ಶೆಟ್ಟಿ 9591469555
ಮುದ್ದು ಕೃಷ್ಣ : 1 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ೨ ವರ್ಷಕ್ಕಿಂತ ಕೆಳಗಿನ ಕಂದಮ್ಮಗಳಿಗಾಗಿ Email : kalkuramuddukrishna2020@gmail.com
ಸಂಪರ್ಕ: ರಾಜಶ್ರೀ ಆಚಾರ್ಯ 9481378548
ತುಂಟ ಕೃಷ್ಣ : 2 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ೩ ವರ್ಷಕ್ಕಿಂತ ಕೆಳಗಿನ ಪುಟಾಣಿಗಳಿಗಾಗಿ Email : kalkurathuntakrishna2020@gmail.com
ಸಂಪರ್ಕ: ಭಾರತೀ ಸಂಜಯ್ ರಾವ್ 9902456133
ಬಾಲಕೃಷ್ಣ : ಬಾಲವಾಡಿ, ಅಂಗನವಾಡಿ, ಎಲ್.ಕೆ.ಜಿ ಪುಟಾಣಿಗಳಿಗಾಗಿ Email : kalkurabalakrishna2020@gmail.com
ಸಂಪರ್ಕ: ಸುಖಲಾಕ್ಷಿ ಸುವರ್ಣ 9901188414
ವೃಕ್ಷ ಕೃಷ್ಣ : ಕೃಷ್ಣ ವೇಷಧಾರಿಯಾಗಿ ಗಿಡನೆಡುವ ಸನ್ನಿವೇಶ (ವಯೋಮಿತಿಯ ನಿರ್ಬಂಧವಿಲ್ಲ) Email : kalkuravrikshakrishna@gmail.com
ಸಂಪರ್ಕ: ಸುಜಾತ ಆಶೋಕ್ 9341150655
ಕಿಶೋರ ಕೃಷ್ಣ : ಯು.ಕೆ.ಜಿ. ಮತ್ತು 1ನೇ ತರಗತಿ ಪುಟಾಣಿಗಳಿಗಾಗಿ Email : kalkurakishorakrishna2020@gmail.com
ಸಂಪರ್ಕ: ಫೂರ್ಣಿಮಾ ರಾವ್ ಪೇಜಾವರ 9900788229
ಶ್ರೀ ಕೃಷ್ಣ : 2, 3, 4ನೇ ತರಗತಿಯ ವಿದ್ಯಾರ್ಥಿಗಳಿಗಾಗಿ Email : kalkurasrikrishna2020@gmail.com
ಸಂಪರ್ಕ: ಸಚಿತಾ ನಂದಗೋಪಾಲ 9844277475
ಗೀತಾ ಕೃಷ್ಣ : ವೇಷಭೂಷಣದೊಂದಿಗೆ ಗೀತೋಪದೇಶದ ಚಿತ್ರಣ ಗೀತೆ ಯಾವುದಾದರೂ ಶ್ಲೋಕದ ಪಠನದೊಂದಿಗೆ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ Email : kalkurageethakrishna2020@gmail.com
ಸಂಪರ್ಕ: ಗೀತಾ ಆಚಾರ್ 9448177311
ಯಕ್ಷ ಕೃಷ್ಣ : ಜಿಲ್ಲೆಯ ವಿಶೇಷ ಸಾಂಪ್ರದಾಯಿಕ ಶೈಲಿಯಾದ ಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸುವ ದೃಷ್ಟಿಯಿಂದ ಯಕ್ಷ ಕೃಷ್ಣ (ತೆಂಕು ಯಾ ಬಡಗು) 10ನೇ ತರಗತಿವರೆಗಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗಾಗಿ (ಈ ವಿಭಾಗದಲ್ಲಿ ಭಾಗವಹಿಸುವ ಮಕ್ಕಳು ಸಾಂಪ್ರದಾಯಿಕ ಯಕ್ಷಗಾನ ವೇಷಭೂಷಣ ಧರಿಸಬೇಕು 5೫ ನಿಮಿಷಗಳು Email : kalkurayakshakrishna2020@gmail.com
ಸಂಪರ್ಕ: ಸಂಜಯ್ ಕುಮಾರ್ 9845687066
ರಾಧಾಕೃಷ್ಣ : 7ನೇ ತರಗತಿಯ ವರೆಗಿನ ಮಕ್ಕಳು (ಜೋಡಿ)
Email : kalkuraradhakrishna2020@gmail.com
ಸಂಪರ್ಕ: ವಿನಯಾನಂದ 9980569185
ರಾಧಾ ಮಾಧವ : 7ನೇ ತರಗತಿ ಮೇಲ್ಪಟ್ಟ ಮಕ್ಕಳು.(ಜೋಡಿ) Email : kalkuraradhamadhava2020@gmail.com
ಸಂಪರ್ಕ: ಪದ್ಮಾಭಿಡೆ 99001124887
ಯಶೋದ ಕೃಷ್ಣ : ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಮಹಿಳೆ ಯಶೋದೆಯಾಗಿ ಯಾವುದೇ ಮಗು ಕೃಷ್ಣನಾಗಿ ಅಭಿನಯಪೂರ್ವಕವಾಗಿ ಭಾಗವಹಿಸಬಹುದು. ಮಹಿಳೆಗೆ ವಯೋಮಿತಿ ನಿರ್ಬಂಧವಿಲ್ಲ. ಮಗು (ಕೃಷ್ಣ) 12 ವರ್ಷದೊಳಗಿನವರಾಗಿರಬೇಕು. Email : kalkurayashodhakrishna2020@gmail.com
ಸಂಪರ್ಕ: ಕವಿತಾಪಕ್ಕಳ 9900813350
ಶಂಖನಾದ : (ಸಾಂಪ್ರದಾಯಿಕ ಉಡುಗೆಯೊಂದಿಗೆ) :- 7ನೇ ತರಗತಿವರೆಗಿನ ಮಕ್ಕಳಿಗಾಗಿ Email : kalkurashankhanadha2020@gmail.com
ಸಂಪರ್ಕ: ಅಶ್ವತ್ಥಾಮ ರಾವ್ 9900827607
ಶಂಖಉದ್ಘೋಷ : (ಸಾಂಪ್ರದಾಯಿಕ ಉಡುಗೆಯೊಂದಿಗೆ) :-7ನೇ ತರಗತಿ ಮೇಲ್ಪಟ್ಟು ಹಾಗೂ ಮುಕ್ತ ವಿಭಾಗ
Email : kalkurashankhanadha2020@gmail.com
ಸಂಪರ್ಕ: ಅಶ್ವತ್ಥಾಮ ರಾವ್ 9900827607
ದೇವಕಿ ಕೃಷ್ಣ : ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಮಹಿಳೆ ದೇವಕಿಯಾಗಿ ಯಾವುದೇ ಮಗು ಕೃಷ್ಣನಾಗಿ ಅಭಿನಯಪೂರ್ವಕವಾಗಿ ಭಾಗವಹಿಸಬಹುದು. Email : kalkuradevakikrishna2020@gmail.com
ಸಂಪರ್ಕ: ವಿಜಯಲಕ್ಷ್ಮೀ ಬಿ. ಶೆಟ್ಟಿ 9448163607
ವಸುದೇವ ಕೃಷ್ಣ (ಮುಕ್ತ ವಿಭಾಗ) : ಪುರುಷ ವಸುದೇವನಾಗಿ ಮಗುವನ್ನು ಫ್ಲಾಸ್ಟಿಕ್‌ರಹಿತವಾದ ಯಾವುದೇ ಬೆತ್ತ ಅಥವಾ ಬೀಳು ಇನ್ನಿತರ ಬುಟ್ಟಿಗಳಲ್ಲಿ ತಲೆಯ ಮೇಲೆ ಹೊತ್ತು ಸಾಂಪ್ರಾದಾಯಿಕ ಉಡುಗೆಯೊಂದಿಗೆ ಭಾಗವಹಿಸಬಹುದು. ವಯೋಮಿತಿ ನಿರ್ಬಂಧವಿಲ್ಲ. (ಮಹಿಳೆಯರೂ ಪುರುಷವೇಷದೊಂದಿಗೆ ವಸುದೇವನಾಗಿ ಭಾಗವಹಿಸಬಹುದು.) Email : kalkuravasudevakrishna2020@gmail.com
ಸಂಪರ್ಕ: ತಮ್ಮ ಲಕ್ಷ್ಮಣ 9845446414
ನಂದಗೋಕುಲ (ಸಮೂಹ ವಿಭಾಗ) : ಸಾಮೂಹಿಕವಾಗಿ ಶ್ರೀ ಕೃಷ್ಣನ ಕಥಾನಕದ ಯಾವುದೇ ಸನ್ನಿವೇಶದ ಪ್ರದರ್ಶನವನ್ನು (ಕನಿಷ್ಠ 5 ಜನ) ಗುಂಪಿನಲ್ಲಿ ಸ್ತಬ್ಧ ಚಿತ್ರ ದೃಶ್ಯ ಸ್ವರೂಪದೊಂದಿಗೆ ಪ್ರದರ್ಶಿಸುವುದು. ವಯೋಮಿತಿ ನಿರ್ಬಂಧವಿಲ್ಲ. 5 ನಿಮಿಷಗಳು Email : kalkuranandagokula2020@gmail.com
ಸಂಪರ್ಕ: ಸುದೇಶ್ ಜೈನ್ 9620898052
ಅಚ್ಚುತ (ರಸಪ್ರಶ್ನೆ) : 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ Email : kalkuraachuthaquiz2020@gmail.com
ಸಂಪರ್ಕ: ವಿದುಷಿ ಶ್ರೇಯಾ ಕೆ. 9481764771
ಮಾಧವ (ರಸಪ್ರಶ್ನೆ) : 7ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ Email : kalkuramadhavaquiz2020@gmail.com
ಸಂಪರ್ಕ: ವಿದುಷಿ ಶ್ರೇಯಾ ಕೆ. 9481764771
ಛಾಯಾಕೃಷ್ಣ : ಶ್ರೀ ಕೃಷ್ಣ ವೇಷಧಾರಿಯಾಗಿ ಛಾಯಾಚಿತ್ರಕ್ಕೆ ಅನುಕೂಲಕರವಾಗಿ ಆಕರ್ಷಕ ಭಂಗಿಯಲ್ಲಿ ಪಾಲ್ಗೊಳ್ಳುವುದು Email : kalkurachayakrishna2020@gmail.com
ಸಂಪರ್ಕ: ಅಶಾಲತ 9880382338
ಶ್ರೀಕೃಷ್ಣ ಗಾನ ವೈಭವ : ಮಕ್ಕಳಿಗಾಗಿ ಶ್ರೀಕೃಷ್ಣನಿಗೆ ಸಂಬಂಧಪಟ್ಟ ಸಂಗೀತ ಸ್ಪರ್ಧೆ ೪ ವಿಭಾಗಗಳಲ್ಲಿ ನಡೆಯುವುದು (ಶಿಶು, ಬಾಲ, ಕಿಶೋರ, ತರುಣ) Email : kalkurasrikrishnagaana2020@gmail.com
ಸಂಪರ್ಕ: ರಂಜಿತಾ ಎಲ್ಲೂರು 9108080396
ಐಶ್ವರ್ಯ ಎ. ರಾವ್
7204650064
ರಂಗೋಲಿಯಲ್ಲಿ ಶ್ರೀ ಕೃಷ್ಟ್ಣ : ಮುಕ್ತ ವಿಭಾಗ ಇEmail : kalkurarangolikrishna2020@gmail.com
ಸಂಪರ್ಕ: ಸುಮಾ ಪ್ರಸಾದ್ 9449242170
ಶ್ರೀಕೃಷ್ಣ ವರ್ಣ ವೈಭವ ಚಿತ್ರಕಲಾ ಸ್ಪರ್ಧೆ : ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, 5 ವಿಭಾಗಗಳಲ್ಲಿ ನಡೆಯುವುದು. 1 ರಿಂದ 3ನೇ ತರಗತಿಯವರೆಗೆ ಶ್ರೀ ಕೃಷ್ಣನ ಯಾವುದೇ ಚಿತ್ರವನ್ನು ಕ್ರಾಯನ್ಸ್ / ಸ್ಕೆಚ್ ಪೆನ್ನ್‌ನಿಂದ. 4 ರಿಂದ 5 ನೇ ತರಗತಿಯವರೆಗೆ ಶ್ರೀ ಕೃಷ್ಣನ ಯಾವುದೇ ಚಿತ್ರನ್ನು ಕ್ರಾಯನ್ಸ್/ ಕಲರ್ ಪೆನ್ಸಿಲ್/ ವಾಟರ್ ಕಲರ್‌ನಿಂದ ೬ ರಿಂದ 8 ನೇ ತರಗತಿಯವರೆಗೆ ಗೋಪಾಲ ಕೃಷ್ಣನ ಚಿತ್ರವನ್ನು ವಾಟರ್ ಕಲರ್‍ಸ್ ಜಲ ವರ್ಣದಲ್ಲಿ 9 ರಿಂದ 10 ನೇ ತರಗತಿಯವರೆಗೆ ಕಾಳಿಂಗ ಮರ್ದನ ಕೃಷ್ಣ ಚಿತ್ರ ವಾಟರ್ ಕಲರ್ (ಜಲವರ್ಣ) / ಪೋಸ್ಟರ್ ಕಲರ್‌ನಲ್ಲಿ ಮುಕ್ತ ವಿಭಾಗ ಗೋವರ್ಧನ ಗಿರಿಧಾರಿ ಕೃಷ್ಣ ಚಿತ್ರವನ್ನು ವಾಟರ್ ಕಲರ್ (ಜಲವರ್ಣ)ದಲ್ಲಿ ರಚಿಸುವುದು. ೮x೧೧ ಇಂಚು ಅಳತೆಯ ಡ್ರಾಯಿಂಗ್ ಪೇಪರ್‌ನಲ್ಲಿ ರಚಿಸಿದ ಚಿತ್ರವನ್ನು ಸೆಪ್ಟೆಂಬರ್ ೦೮ ರೊಳಗಾಗಿ ಜಾನ್ ಚಂದ್ರನ್ (ಮೊ: 9844284175), ಶ್ರೀ ಕೃಷ್ಣ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಕೊಡಿಯಾಲ್ ಬೈಲ್, ಮಂಗಳೂರು ಇಲ್ಲಿಗೆ ತಲುಪಿಸುವುದು.
ಬಹುಮಾನಗಳು : ವಿಜೇತರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು. ಭಾಗವಹಿಸುವ ಎಲ್ಲಾ ಕೃಷ್ಣ ವೇಷ ಸ್ಪರ್ಧಾಳುಗಳಿಗೆ ಉಡುಪಿ ಕಡಗೋಲು ಕೃಷ್ಣನ ಪಂಚಲೋಹದ ವಿಗ್ರಹ ಹಾಗೂ ಪ್ರಶಂಸನಾ ಪತ್ರವನ್ನು ನೀಡಲಾಗುವುದು.
ಈ ಬಾರಿಯ ವಿಶೇಷತೆ :
ಒಟ್ಟು 32 ವಿಭಾಗದಲ್ಲಿ Online ಮೂಲಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ತೊಟ್ಟಿಲಲ್ಲಿ ಕೃಷ್ಣ – ಕೌಟುಂಬಿಕ ಸನ್ನಿವೇಶದೊಂದಿಗೆ ಕೃಷ್ಣವೇಷಧಾರಿ ಮಗುವನ್ನು ತೊಟ್ಟಿಲಲ್ಲಿ ತೂಗುವುದು ವಯೋಮಿತಿಯ ನಿರ್ಬಂಧವಿಲ್ಲ
ವೃಕ್ಷ ಕೃಷ್ಣ _ ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೃಷ್ಣ ವೇಷಧಾರಿ ಮಕ್ಕಳು ಗಿಡ ನೆಡುವ ಸನ್ನಿವೇಶ online ಮೂಲಕ ವಿಶ್ವದಾದ್ಯಂತ ಮಕ್ಕಳು ಕೃಷವೇಷಧಾರಿಯಾಗಿ ಭಾಗವಹಿಸಬಹುದು.
ಸುಮಾರು ಮೂರುವರೆ ದಶಕಗಳಿಂದ ವರ್ಷಂಪ್ರತಿ ನಡೆಯುತ್ತಿರುವ ಶ್ರೀ ಕೃಷ್ಣ ವೇಷ ಸ್ಪರ್ಧೆ ಇಂದು ರಾಷ್ಟ್ರೀಯ ಮಕ್ಕಳ ಉತ್ಸವವಾಗಿ ಪರಿವರ್ತಿತವಾಗಿ ಸರ್ವರಿಂದಲೂ ಪ್ರಶಂಸಿಸಲ್ಪಟ್ಟಿದ್ದು ವಿವಿಧ ವಿಭಾಗಗಳಲ್ಲಿ ಸಾಮೂಹಿಕವಾಗಿ ಕೃಷ್ಣ ವೇಷ ಸ್ಪರ್ಧೆಯ ಮುಖೇನ ಮಕ್ಕಳ ಉತ್ಸವವನ್ನು ಆಚರಿಸುವ ಪದ್ದತಿ ಇಂದು ಕರಾವಳಿಯ ಜಿಲ್ಲೆಯಾದ್ಯಂತ , ರಾಜ್ಯದಾದ್ಯಂತ ಹಾಗೂ ರಾಷ್ಟ್ರಾದ್ಯಂತ ಇದೇ ಮಾದರಿಯಲ್ಲಿ ನಡೆಯುತ್ತಿರುವುದು ಕಲ್ಕೂರ ಪ್ರತಿಷ್ಠಾನಕ್ಕೆ ಅತ್ಯಂತ ಸಂತಸದ ವಿಷಯ. ಪ್ರಸ್ತುತ ರಾಷ್ಟ್ರೀಯ ಮಕ್ಕಳ ಉತ್ಸವವಾಗಿ ವಿಜೃಂಬಿಸುತ್ತಿದೆ. ಸ್ಪರ್ಧಾಳುಗಳು ಅವರ ಹೆತ್ತವರು ಇದರ ಯಶಸ್ವಿಗೆ ಸಹಕರಿಸಬೇಕೆಂದು ಎಸ್. ಪ್ರದೀಪ್ ಕುಮಾರ್ ಕಲ್ಕೂರ ವಿನಂತಿಸಿದ್ದಾರೆ.
ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕಲ್ಕೂರ ಪ್ರತಿಷ್ಠಾನ, ಶೀ ಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಫೋನ್: 0824-2492239, 9845083736, ಇಮೇಲ್: pradeep.kalkura@gmail.com ದಯಾನಂದ ಕಟೀಲ್, ಶಾರದಾ ವಿದ್ಯಾಲಯ, ಮಂಗಳೂರು ಫೋನ್: 9448545578, ಕದ್ರಿ ನವನೀತ ಶೆಟ್ಟಿ, ಫೋನ್: 9448123061 ಜಾನ್ ಚಂದ್ರನ್ 9844284175, ಗೋಕುಲ್ ಕದ್ರಿ: 9448549456 ಸುಧಾಕರ ರಾವ್ ಪೇಜಾವರ, ಫೋನ್:9448546051, ಪುನೀತ್ ಬೆಂಗಳೂರು: 8971312622
ಈ ರಾಷ್ಟ್ರಮಟ್ಟದ ಮಕ್ಕಳ ಉತ್ಸವದಲ್ಲಿ ಎಲ್ಲಾ ನಾಗರಿಕ ಬಂಧುಗಳು, ಗಣ್ಯರು, ಆಡ್ಯ ಮಹನೀಯರು ಮಕ್ಕಳ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸಿ ಯಶಸ್ವಿಗೊಳಿಸಬೇಕೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕದ್ರಿ ನವನೀತ ಶೆಟ್ಟಿ, ದಯಾನಂದ ಕಟೀಲು, ಜಿ.ಕೆ. ಭಟ್ ಸೇರಾಜೆ, ವಿಜಯಲಕ್ಷ್ಮೀ ಬಿ.ಶೆಟ್ಟಿ, ರತ್ನಾಕರ ಜೈನ್, ಕೌಶಿಕ್ ಕಲ್ಲೂರಾಯ, ಸುಧಾಕರ ರಾವ್ ಪೇಜಾವರ ಮುಂತಾದವರು ಉಪಸ್ಥಿತರಿದ್ದರು
Comments are closed.