ಕರಾವಳಿ

ರಸ್ತೆ ಮಾಡಿಕೊಡದಿದ್ರೆ ಚುನಾವಣೆಗೆ ಬಹಿಷ್ಕಾರ ಹಾಕುವುದಾಗಿ ಗ್ರಾಮಸ್ಥರ ಎಚ್ಚರಿಕೆ!

Pinterest LinkedIn Tumblr

ಉಡುಪಿ: ಕೋಡಿ ಕನ್ಯಾಣದಿಂದ ಕೋಟ ಪಡುಕೆರೆ ರಸ್ತೆ ಅವ್ಯವಸ್ಥೆಯ ಕುರಿತು ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಹಾಗೂ ಶೀಘ್ರಗತಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಆಗ್ರಹಿಸಿ ಸ್ಥಳೀಯ ಹೋರಾಟ ಸಮಿತಿ ಗುರುವಾರದಂದು ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕರೆ ಬಳಿ ಬೃಹತ್ ಪ್ರತಿಭಟನೆ ನಡೆಯಿತು.

ಹೋರಾಟ ಸಮಿತಿಯ ಪ್ರಮುಖ ವಿವೇಕ್ ಸುವರ್ಣ ಮಾತನಾಡಿ ಹಲವು ವರ್ಷಗಳಿಂದ ಈ ರಸ್ತೆಯ ಅವ್ಯವಸ್ಥೆಯ ಕುರಿತು ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಬೇಸರ ವ್ಯಕ್ತಪಡಿಸಿ ,ವಾಹನ ದಟ್ಟನೆ,ಜನಸಾಮಾನ್ಯರಿಗೆ ಅತಿಯಾಗಿ ಬಳಕೆಯಾಗುತ್ತಿದ್ದು,ಪ್ರಗ್ನೆಂಟ್ ಸ್ತ್ರೀಯರನ್ನು ಕರೆದೊಯ್ಯಲು ಕಷ್ಟಕರ ಸನ್ನಿವೇಶ,ಶಾಲಾ ಮಕ್ಕಳಿಗೆ ಮಳೆಗಾಲದಲ್ಲಿ ಸಂಚರಿಸಲು ಹಾಗೇ ಹಲವಾರು ಅಪಘಾತಗಳು ಈ ರಸ್ತೆಯ ಕಣಿವೆಗಳಿಂದ ಸೃಷ್ಠಿಯಾಗಿವೆ.ಪ್ರತಿಯೊರ್ವನಿಗೂ ತಾಳ್ಮೆ ಇರುತ್ತದೆ.ಆದರೆ ಈ ರೀತಿ ಪರೀಕ್ಷೆ ಸಲ್ಲ ಶೀಘ್ರಗತಿಯಲ್ಲಿ ಇದಕ್ಕೊಂದು ಮುಕ್ತಿ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣಾ ಬಹಿಷ್ಕಾರ, ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೊರೋನಾ ಹಿನ್ನಲ್ಲೆಯಲ್ಲಿ ಬೃಹತ್ ಪ್ರತಿಭಟನೆಗೆ ಜಿಲ್ಲಾಡಳಿತ ನಿಷೇಧದ ಸುತ್ತೋಲೆ ಅಡ್ಡಿಮಾಡಿತ್ತಾದರೂ ಬೃಹತ್ ಪ್ರತಿಭಟನೆ ಕಡಿವಾಣ ಹಾಕಲು ಕೋಟ ಪೋಲಿಸ್ ಎಸ್ ಐ ಸಂತೋಷ್ ಬಿ.ಪಿ ನೇತ್ರತ್ವದಲ್ಲಿ ಸರ್ಪಗಾವಲು ನಿಯೋಜಿಸಲಾಗಿತ್ತು.ಹೆಚ್ಚಿನ ಜನ ಸೇರದಂತೆ ಹಾಗೂ ರಸ್ತೆ ತಡೆ ನಡೆಸದಂತೆ ಪೋಲೀಸ್ ಇಲಾಖೆ ಎಚ್ಚರಿಕೆ ವಹಿಸಿತು. ಪ್ರತಿಭಟನಾ ಸ್ಥಳಕ್ಕೆ ಬ್ರಹ್ಮಾವರ ತಹಶಿಲ್ದಾರ್ ಕಿರಣ್ ಗೌರಯ್ಯ ಆಗಮಿಸಿ ಮಾತನಾಡಿ ಜನರ ಸಮಸ್ಯೆಗೆ ಸ್ಪಂದಿಸಲಾಗುತ್ತದೆ‌. ಸ್ಥಳೀಯರು ನೀಡಿದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ‌ ಮಾಜಿ ಸದಸ್ಯ ಶಂಕರ್ ಕುಂದರ್, ಸ್ಥಳೀಯ ಮುಖಂಡರಾದ ಯೋಗೇಂದ್ರ ಪುತ್ರನ್, ಸೋಮಶೇಖರ್ ಪಡುಕೆರೆ, ರತ್ನಾಕರ ಶ್ರೀಯಾನ್, ಇಬ್ರಾಹಿಂ ಸಾಹೇಬ್, ಅಶ್ವಥ್ ಕಾಂಚನ್, ದಾವುದ್, ಸ್ಥಳೀಯ ಸಂಘಟನೆಗಳಾದ ವಿನಾಯಕ ಫ್ರೆಂಡ್ಸ್ ಪಡುಕರೆ, ಅರಮ ವಿಜಯ ಸ್ಪೋರ್ಟ್ಸ್ ಕ್ಲಬ್, ಪಡುಕರೆ ಫ್ರೆಂಡ್ಸ್ ಪಡುಕರೆ,ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ,ನಜಾದ್ ಫ್ರೆಂಡ್ಸ್ ಮತ್ತಿತರ ಸ್ಥಳೀಯ ಸಂಘಸಂಸ್ಥೆಗಳು ಸಾತ್ ನೀಡಿದರು.

Comments are closed.