ಮುಂಬೈ: ಹಲವು ದಿನಗಳಿಂದ ತನಗೂ ಡ್ರಗ್ಸ್ ಗೂ ಸಂಬಂಧವಿಲ್ಲ ಎನ್ನುತ್ತಿದ್ದ ನಟಿ ರಿಯಾ ಚಕ್ರವರ್ತಿ ನಾಟಕಕ್ಕೆ ತಿರುವು ಸಿಕ್ಕಿದ್ದು, ತಾನು ಡ್ರಗ್ಸ್ ಸೇವಿಸುತ್ತಿದ್ದಿರುವುದಾಗಿ ತಪ್ಪೊಪ್ಪಿಕೊಂಡ ಬಳಿಕ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿಯನ್ನು ಸಿಬಿಐ, ಎನ್ ಸಿಬಿ ತೀವ್ರ ವಿಚಾರಣೆಗೆ ಗುರಿಪಡಿಸಿದ ಬಳಿಕ ಮಂಗಳವಾರ ಬಂಧಿಸಿದೆ.
ಮತ್ತೊಂದೆಡೆ ಮಹತ್ತರ ಬೆಳವಣಿಗೆಯೊಂದರಲ್ಲಿ ರಿಯಾ ಚಕ್ರವರ್ತಿ ತಾನು ಸಿಗರೇಟಿನೊಳಕ್ಕೆ ಮರಿಜುವಾನಾ(ಗಾಂಜಾ) ತುಂಬಿಸಿ ಸೇವಿಸುತ್ತಿದ್ದಿರುವುದಾಗಿ ಎನ್ ಸಿಬಿ ಮುಂದೆ ತಪ್ಪೊಪ್ಪಿಕೊಂಡಿರುವುದಾಗಿ ಮಾಹಿತಿ ಲಭಿಸಿದೆ. ಎನ್ ಸಿಬಿ (ನ್ಯಾಷನಲ್ ಕ್ರೈಂ ಬ್ಯುರೋ) ಅಧಿಕಾರಿಗಳು ತನಿಖೆ ನಡೆಸುತ್ತಿದ್ದ ವೇಳೆ, ರಿಯಾ ಚಕ್ರವರ್ತಿ ತಾನು ದಿ.ನಟ ಸುಶಾಂತ್ ಸಿಂಗ್ ರಜಪೂತ್ ಜತೆ ಮರಿಜುವಾನಾ ಸೇರಿಸಿದ್ದ ಸಿಗರೇಟ್ ಅನ್ನು ಸೇದುತ್ತಿದ್ದೆ ಎಂದು ರಿಯಾ ತಿಳಿಸಿದ್ದಾಳೆ. ಜೊತೆಗೆ ಸುಶಾಂತ್ ಕೂಡಾ ಮಾದಕ ದ್ರವ್ಯ ಸೇವಿಸುತ್ತಿದ್ದ ಎಂದು ರಿಯಾ ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ.
ವಿಧಿವಿಜ್ಞಾನ ತನಿಖೆಯಲ್ಲಿ ರಿಯಾ ಹಳೆಯ ಮೊಬೈಲ್ ಫೋನ್, ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ ನಲ್ಲಿ ಎನ್ ಸಿಬಿಗೆ ಹಲವು ಮಹತ್ವದ ಮಾಹಿತಿ ಲಭ್ಯವಾಗಿರುವುದಾಗಿ ವರದಿ ವಿವರಿಸಿದೆ. ರಿಯಾ ಮನೆಯಲ್ಲಿ ವಶಪಡಿಸಿಕೊಂಡಿದ್ದ ಗ್ಯಾಜೆಟ್ಸ್ ನಿಂದಾಗಿ 2017, 2018, 2019ರಲ್ಲಿ ಇವರ ಡ್ರಗ್ಸ್ ಸರ್ಕಲ್ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ನಟರನ್ನು ಎನ್ ಸಿಬಿ ಬಂಧಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ಹೇಳಿದೆ. ಡ್ರಗ್ಸ್ ಜಾಲದ ಕುರಿತಂತೆ ಸ್ಯಾಮ್ಯುಯೆಲ್ ಮಹತ್ತರವಾದ ಮಾಹಿತಿ ನೀಡಿರುವುದು ಎನ್ ಸಿಬಿಗೆ ಅನುಕೂಲಕರವಾಗಿದೆ ಎಂದು ವರದಿ ತಿಳಿಸಿದೆ.
Comments are closed.