ಮಂಗಳೂರು: ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ‘ತುಳುನಾಡ ಅಟ್ಟೆಮಿ’ ಪ್ರಯುಕ್ತ ಸೆಪ್ಟೆಂಬರ್ 10 ರಂದು ಗುರುವಾರ ಬೆಳಿಗ್ಗೆ ಗಂಟೆ 9ರಿಂದ ಮಂದಾರ ಕೇಶವ ಭಟ್ಟ ಅವರ ‘ಬೀರದ ಬೊಲ್ಪು ( ಸಿರಿ ಕಿಟ್ಣ ಲೀಲೆ )’ ಕಾವ್ಯದ ಸುಗಿಪು – ದುನಿಪು ಕಾರ್ಯಕ್ರಮ ಜರಗುವುದು. ಕರ್ನಾಟಕ ಜಾನಪದ ಪರಿಷತ್ತು, ಸಂಸ್ಕಾರ ಭಾರತಿ ಮಂಗಳೂರು ಮತ್ತು ತುಳು ವರ್ಲ್ಡ್(ರಿ.) ಕುಡ್ಲ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ತುಳು ವರ್ಲ್ಡ್ ಆಯೋಜಿಸುವ ತುಳು ಕಾವ್ಯಯಾನದ 5 ನೇ ಸರಣಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಭಾಗವತರಾದ ಯಕ್ಷ ಧ್ರುವ ಪಟ್ಲ ಸತೀಶ ಶೆಟ್ಟಿ ಮತ್ತು ಕಾವ್ಯಶ್ರೀ ಅಜೇರು ಕಾವ್ಯವಾಚನ ಮಾಡುವರು. ಯಕ್ಷಗಾನ ಅರ್ಥಧಾರಿ, ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡುವರು. ಗುರುಪ್ರಸಾದ್ ಬೊಳಿಂಜಡ್ಕ ಮದ್ದಳೆಯಲ್ಲಿ ಸಹಕರಿಸುವರು ಎಂದು ತುಳು ವರ್ಲ್ಡ್ (ರಿ) ಕುಡ್ಲ ಅಧ್ಯಕ್ಷ ಡಾ. ರಾಜೇಶ್ ಆಳ್ವ ಬದಿಯಡ್ಕ ತಿಳಿಸಿದ್ದಾರೆ.
ಕಾವ್ಯ ಪರಿಚಯ :
ಕಾರ್ಯಕ್ರಮವನ್ನು ಭಾರತ ಸರಕಾರದ ನಿವೃತ್ತ ಪ್ರಾದೇಶಿಕ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಪ್ರಕಾಶ್ ರಾವ್ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಕೆ.ಸಿ.ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಜರುಗುವ ಸಭಾಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ‘ಬೀರದ ಬೊಲ್ಪು’ ಕಾವ್ಯದ ಕುರಿತು ಉಪನ್ಯಾಸ ನೀಡುವರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ಮುಂಬೈ ಕಲಾ ಜಗತ್ತಿನ ರೂವಾರಿ ತೋನ್ಸೆ ವಿಜಯಕುಮಾರ್ ಶೆಟ್ಟಿ , ಉಪನ್ಯಾಸಕ ಅರುಣ್ ಕುಮಾರ್ ಉಲ್ಲಾಳ್ ಅತಿಥಿಗಳಾಗಿರುವರು.
ರಾಜೇಶ್ ಹೆಗಡೆ ಪೊಳಲಿ, ವಿಶ್ವನಾಥ ಶಕ್ತಿನಗರ, ಮಂದಾರ ರಾಜೇಶ್ ಭಟ್, ಪ್ರಮೋದ ಸಪ್ರೆ ಮತ್ತು ಶಾರದಾಮಣಿ ಅಭ್ಯಾಗತರಾಗಿ ಪಾಲ್ಗೊಳ್ಳುವರು ಎಂದು ಕರ್ನಾಟಕ ಜಾನಪದ ಪರಿಷತ್ ದ.ಕ. ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.