ಕರಾವಳಿ

ಕೋವಿಡ್ ಸಂದರ್ಭದಲ್ಲಿ ಸಾರ್ವನಿಕರ ರಕ್ಷಣೆ – ಆರೋಗ್ಯ ಇಲಾಖೆಯ ಶ್ರಮ ಶ್ಲಾಘನೀಯ : ಕಾಮಾತ್

Pinterest LinkedIn Tumblr

ಮಂಗಳೂರು ಸೆಪ್ಟೆಂಬರ್ 19: ವ್ಶೆದ್ಯರು ಮತ್ತು ರೋಗಿಯ ನಡುವಿನ ಸಂಬಂಧವು ಅನನ್ಯತೆಯಿಂದ ಕೂಡಿರಬೇಕು. ವ್ಶೆದ್ಯರು ಸದಾ ನಗು ಮುಖವನ್ನು ಹೊಂದಿ ರೋಗಿಯ ಆರೈಕೆ ಮಾಡಬೇಕು. ಆರೋಗ್ಯಾಧಿಕಾರಿಗಳಿಗೆ ಹೆಚ್ಚಿನ ಒತ್ತಡವಿದ್ದರೂ ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸುವುದು ಶಾಘ್ಲನೀಯವಾಗಿದೆ.

ಕೋವಿಡ್-19 ವೈರಸ್ ಸಂದರ್ಭದಲ್ಲಿ ಸಾರ್ವನಿಕರನ್ನು ರಕ್ಷಣೆ ಮಾಡುವುದರಲ್ಲಿ ಆರೋಗ್ಯ ಇಲಾಖೆಯು ಸಾಕಷ್ಟು ಶ್ರಮವಹಿಸಿರುವುದು ಹೆಮ್ಮಯ ಸಂಗತಿಯಾಗಿದೆ ಎಂದು ಮಂಗಳ್ರರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಅವರು ಬಂದರ್ ನಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ನೂತನವಾಗಿ ಉದ್ಘಾಟನೆಗೊಂಡಿರುವ ಆರೋಗ್ಯ ಕೇಂದ್ರವು ಡೊಂಗರಕೇರಿ, ಕೊಡಿಯಾಲ್‍ಬೈಲ್, ಕಂಬಳ, ಸೆಂಟ್ರಲ್, ಪೋರ್ಟ್, ಬಂದರು, ಕೋರ್ಟ್ ವಾರ್ಡ್‍ನ ಜನರಿಗೆ ಉಪಯೋಗವಾಗುವಂತೆ ಸರಕಾರವು ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದು, ಸಾರ್ವಜಿನಿಕರು ಇದರ ಉಪಯೋಗವನ್ನು ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.

ಬಂದರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ರೂ. 45 ಲಕ್ಷ ವೆಚ್ಚದಲ್ಲಿ 2019 ರ ಅಂತ್ಯದಲ್ಲಿ ಕಟ್ಟಡ ಕಾಮಗಾರಿಯು ಪೂರ್ಣಗೊಂಡಿದ್ದು, ಕೊರೋನಾದಿಂದ ಇದರ ಉದ್ಘಾಟನೆ ವಿಳಂಬವಾಗಿದೆ. ಸರಕಾರವು 40-50 ಸಾವಿರ ಜನ ಸಂಖ್ಯೆ ಇರುವ ಪ್ರದೇಶದಲ್ಲಿ ಆರೋಗ್ಯ ಕೇಂದ್ರದ ನಿರ್ಮಾಣ ಮಾಡಿರುವುದರಿಂದ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ.

ಮುಂದಿನ ದಿನದಲ್ಲಿ ಡೊಂಗರಕೇರಿ, ಕೋಡಿಯಾಲ್ ಬೈಲ್, ಕಂಬಳ, ಸೆಂಟ್ರಲ್ ಈ ನಾಲ್ಕು ವಾರ್ಡ್‍ಗಳಿಗೆ ಹೊಸದಾಗಿ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡುವ ಬಗ್ಗೆ ಸರಕಾರಕ್ಕೆ ಮನವಿಯನ್ನು ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ರಾಮಾಚಂದ್ರ ಬಾಯಾರಿ, ಆರ್.ಸಿ.ಹೆಚ್ ಅಧಿಕಾರಿ ಡಾ. ರಾಜೇಶ್ ಬಿ.ವಿ., ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಸುಜಯ್ ಭಂಡಾರಿ, ಡಾ. ಚಂದ್ರಪ್ರಭ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತಿತರು ಉಪಸ್ಥಿತರಿದ್ದರು.

Comments are closed.