ಚಿಕ್ಕಮಗಳೂರು: ಕಳ್ಳತನ ಹಾಗೂ ಕರ್ನಾಟಕ ಅರಣ್ಯ ಕಾಯ್ದೆಯಡಿ ಆರೋಪಿಯಾಗಿದ್ದು ಬರೋಬ್ಬರಿ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಖತರ್ನಾಕ್ ಆರೋಪಿಯನ್ನು ಚಿಕ್ಕಮಗಳುರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ವಿಶೇಷ ಕರ್ತವ್ಯಕ್ಕೆ ನಿಯೋಜಿಸಿದ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಮಂಗಲ್ಪಾಡಿಯ ಇಬ್ರಾಹಿಂ (60) ಬಂಧಿತ ಆರೋಪಿ.
ಘಟನೆ ವಿವರ: ಕಳೆದ ಮೂವತ್ತು ವರ್ಷಗಳಿಂದ ಆರೋಪಿ ಇಬ್ರಾಹಿಂ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಶೃಂಗೇರಿ ಠಾಣೆ ನಿರೀಕ್ಷಕ ಸಿದ್ರಾಮಯ್ಯ ಬಿ.ಎಂ ಉಸ್ತುವಾರಿಯಲ್ಲಿ ಸಿಬ್ಬಂದಿಗಳಾದ ಉಡುಪಿ ಜಿಲ್ಲೆಯ ಚಂದ್ರಶೇಖರ್ ಹಾಗೂ ಪ್ರಿನ್ಸ್ ಅವರನ್ನು ಹಿರಿಯ ಅಧಿಕಾರಿಗಳು ನಿಯೋಜಿಸಿದ್ದರು. ಅದರಂತೆಯೇ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಬುಧವಾರ ಆತನನ್ನು ಬಂಧಿಸಿ ಶೃಂಗೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ.
ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಎಂ.ಎಚ್, ಹೆಚ್ಚುವರಿ ಎಸ್ಪಿ ಶೃತಿ, ಕೊಪ್ಪ ಉಪವಿಭಾಗದ ಡಿವೈಎಸ್ಪಿ ರಾಜು ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
Comments are closed.