ಕರಾವಳಿ

ರೈಲ್ವೆಯಲ್ಲಿ ಕುಂದಾಪುರಕ್ಕೆ ಬಹಳಷ್ಟು ಕೊಡುಗೆ ಕೊಟ್ಟಿದ್ದ ಸುರೇಶ್ ಅಂಗಡಿ..!

Pinterest LinkedIn Tumblr

ಕುಂದಾಪುರ: ಕುಂದಾಪುರದಲ್ಲಿ ಪುಣೆ, ಗಂಗಾ ನಗರ ಎಕ್ಸ್’ಪ್ರೆಸ್ ನಿಲುಗಡೆಗೆ ಮತ್ತು ಪಡೀಲ್ ಮಾರ್ಗವಾಗಿ ನೂತನ ವಾಸ್ಕೊ-ಕಾರವಾರ- ಕುಂದಾಪುರ-ಉಡುಪಿ-ಯಶವಂತಪುರ ರೈಲು ಆರಂಭಿಸಿ ಕರಾವಳಿಗೆ ಹೆಚ್ಚಿನ ಕೊಡುಗೆ ನೀಡಿದ ಹೆಗ್ಗಳಿಕೆ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿಯವರದ್ದಾಗಿತ್ತು.

ಅಭಿವೃದ್ಧಿಯ ಚಿಂತನೆಯುಳ್ಳ ನಾಯಕ ಸುರೇಶ್ ಅಂಗಡಿಯವರ ಕಾರ್ಯಕ್ಷಮತೆಗೆ ಉಡುಪಿ ಹಾಗೂ ಕುಂದಾಪುರವೂ ಸಾಕ್ಷಿಯಾಗಿತ್ತು. ಕುಂದಾಪುರದಲ್ಲಿ ಯಾವುದೇ ಪ್ರಮುಖ ರೈಲುಗಳಿಗೆ ನಿಲ್ದಾಣದ ಅವಕಾಶ ಇಲ್ಲದ ಸಮಯದಲ್ಲಿ ಈ ಬಗ್ಗೆ ಕುಂದಾಪುರ ರೈಲ್ವೇ ಹಿತರಕ್ಷಣಾ ಸಮಿತಿಯ ವತಿಯಿಂದ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದ ವೇಳೆ ಮನವಿಗೆ ಕೂಡಲೇ ಸ್ಪಂದಿಸಿದ್ದ ಸಚಿವರು ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಈಗ ಪ್ರಮುಖ ರೈಲುಗಳು ಕುಂದಾಪುರದಲ್ಲಿ ನಿಲುಗಡೆಯಾಗುತ್ತಿವೆ.

ಸುರೇಶ್ ಅಂಗಡಿಯವರ ಅಕಾಲಿಕ ನಿಧನಕ್ಕೆ ಕುಂದಾಪುರ ರೈಲು ಪ್ರಯಾಣಿಕರ ಹಿತ ರಕ್ಷಣ ಸಮಿತಿ ತೀವ್ರ ಸಂತಾಪ ವ್ಯಕ್ತ ಪಡಿಸಿದೆ. ಅವರ ನಿಧನದಿಂದ ಕರ್ನಾಟಕಕ್ಕೆ ಅದರಲ್ಲೂ ರೈಲ್ವೆ ಬೆಳವಣಿಗೆಗಳಿಗೆ ನಷ್ಟ ಆಗಿದೆ ಎಂದು ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ ಪುತ್ರನ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ರಾಜ್ಯ ಹಾಗೂ ದೇಶದಲ್ಲಿ ಅತ್ಯಂತ ಅಲ್ಪ ಸಮಯದಲ್ಲೇ ಗಮನಾರ್ಹ ಸಾಧನೆ ಮಾಡಿರುವ ಶ್ರೇಷ್ಠ ನಾಯಕರನ್ನು ಇಂದು ಭಾರತ ಕಳೆದುಕೊಂಡಿದೆ.ರಾಷ್ಟ್ರದ ಅಭಿವೃದ್ಧಿಗೆ ಹಾಗೂ ನಮ್ಮ ಪಕ್ಷಕ್ಕೆ ಇವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಮೃತರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಹಪ್ರಭಾರಿ ರಾಜೇಶ ಕಾವೇರಿ ಸಂತಾಪ ವ್ಯಕ್ತಪಡಿಸಿದ್ದಾರೆ.

Comments are closed.