ಮಂಗಳೂರು ಸೆಪ್ಟೆಂಬರ್ 24 : ದ.ಕಜಿಲ್ಲೆಯಲ್ಲಿಕೋರೋನಾ ವೈರಸ್ ಸೋಂಕು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂಜಾಗೃತಾ ಕ್ರಮಗಳು ಹಾಗೂ ಶರತ್ತುಗಳನ್ನು ವಿಧಿಸುವುದು ಅಗತ್ಯವಾಗಿರುವುದರಿಂದ ವಿಪತ್ತು ನಿರ್ವಹಣಾಕಾಯ್ದೆ 200 ರ ಕಲಂ 21(1)(2)(3) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದ.ಕಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರುಆದೇಶ ಹೊರಡಿಸಿರುತ್ತಾರೆ.
ದಕ್ಷಿಣಕನ್ನಡಜಿಲ್ಲೆಯಎಲ್ಲಾಗ್ರಾಮಾಂತರ, ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯವಹಾರ ನಡೆಯುವಎಲ್ಲಾ ಹೋಟೆಲ್, ರೆಸ್ಟೋರೆಂಟ್‍ಗಳು ವಾಣಿಜ್ಯ ಸಂಕೀರ್ಣಗಳು, ಮಾಲ್‍ಗಳು ಜನಸಂದಣಿ ಸೇರುವ ಪ್ರದೇಶಗಳಲ್ಲಿ ಎಲ್ಲಾಅಂಗಡಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಮಾಸ್ಕ್‍ಧರಿಸುವುದು ಹಾಗೂ ಸಾಮಾಜಿಕಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಪತ್ರಿಯೊಬ್ಬಅಂಗಡಿ ಮಾಲೀಕರು ಸಾಮಾಜಿಕಅಂತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ನಿಯಮಉಲ್ಲಂಘನೆಯಾಗದಂತೆ ಸಾಕಷ್ಟು ಮುಂಜಾಗೃತಾಕ್ರಮವಹಿಸಬೇಕು.
ನಗರ ಸ್ಥಳೀಯ ಸಂಸ್ಥೆ ಹಾಗೂ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಪ್ರತಿಯೊಬ್ಬ ವರ್ತಕರುತಮ್ಮಅಂಗಡಿಯಲ್ಲಿ ಸಾರ್ವಜಿನಿಕರು ಹೆಚ್ಚಿನ ಸಂಖ್ಯೆಯಲ್ಲಿಏಕಕಾಲದಲ್ಲಿ ಸೇರದಂತೆಅಂಗಡಿ ಮುಂಗಟ್ಟಿನ ಮುಂಭಾಗದಲ್ಲಿ ಕನಿಷ್ಟ 6×6 ಅಡಿ ಅಂತರವನ್ನು ಗುರುತಿಸಿ ಗ್ರಾಹಕರಲ್ಲಿದೈಹಿಕಅಂತರ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು.
ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವರ್ತಕರುತಮ್ಮಅಂಗಡಿ ಮುಂಗಟ್ಟಿನಲ್ಲಿ ಮುಂದೆಇರುವ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಬಳಸಲ್ಪಡುವ ರಸ್ತೆಯನ್ನು ಹೊರತುಪಡಿಸಿ, ಉಳಿದ ಸ್ಥಳವನ್ನು ಸಾಮಾಜಿಕಅಂತರಕಾಯ್ದುಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಳಸುವುದು.
ಪ್ರತಿಅಂಗಡಿ ಮಾಲೀಕರುತಮ್ಮಅಂಗಡಿ ಮುಂಭಾಗದಲ್ಲಿ ಸ್ವಯಂಚಾಲಿತ ಸ್ಯಾನಿಟೈಸರ್ ವ್ಯವಸ್ಥೆಯನ್ನು ಅಳವಡಿಸುವುದು ಹಾಗೂ ಗ್ರಾಹಕರನ್ನು ಸ್ಯಾನಿಟೈಸರ್ ಬಳಸಲು ಉತ್ತೇಜಿಸುವುದು.ಪತ್ರಿಅಂಗಡಿ ಮಾಲೀಕರು ಪ್ರತಿದಿನ ತಮ್ಮತಮ್ಮ ಅಂಗಡಿಗಳಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳ ಆರೋಗ್ಯತಪಾಸಣೆಯನ್ನು ನಡೆಸುವುದು, ಅಲ್ಲದೇ ಪ್ರತಿ ಮೂರು ದಿನಗಳಿಗೊಮ್ಮೆ ತಮ್ಮ ಅಂಗಡಿಗಳನ್ನು ಸ್ಯಾನಿಟೈಸರ್ ಮಾಡಲುಕ್ರಮವಹಿಸಬೇಕು.
ಅಂಗಡಿ ಮಾಲಿಕರುತಮ್ಮಅಂಗಡಿ ಮುಂಭಾಗದಲ್ಲಿಓರ್ವ ಸಿಬ್ಬಂದಿಯನ್ನು ನಿಯೋಜಿಸಿ ದಿನನಿತ್ಯ ಗ್ರಾಹಕರ ನ್ನುಥರ್ಮಲ್ ಸ್ಕ್ಯಾನಿಂಗ್ ಮಾಡುವುದು.ಜ್ವರದ ಲಕ್ಷಣಗಳುಳ್ಳ ಗ್ರಾಹಕರ ಹೆಸರುದೂರವಾಣಿಸಂಖ್ಯೆ ಮತ್ತು ವಿಳಾಸವನ್ನು ರಿಜಿಸ್ಟರ್ ನಲ್ಲಿ ನಮೂದಿಸುವುದು ಹಾಗೂ ತಮ್ಮ ವ್ಯಾಪ್ತಿಯಆರೋಗ್ಯಾಧಿಕಾರಿ ಹಾಗೂ ಮಹಾನಗರಪಾಲಿಕೆಗೆ ವರದಿ ನೀಡಬೇಕು.
ಜ್ವರದ ಲಕ್ಷಣಗಳುಳ್ಳ ಗ್ರಾಹಕರಕುರಿತು ವರದಿ ಮಹಾನಗರಪಾಲಿಕೆಹಾಗೂ ಆರೋಗ್ಯ ಇಲಾಖೆಗೆ ಸ್ವೀಕೃತವಾದ ತಕ್ಷಣವೇ ಮಹಾನಗರಪಾಲಿಕೆಯಿಂದ / ಜಿಲ್ಲಾಡಳಿತದಿಂದ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿಕೋವಿಡ್ ಲಕ್ಷಣಗಳುಳ್ಳ ವ್ಯಕ್ತಿಯನ್ನುಕೋವಿಡ್‍ಕೇರ್ ಸೆಂಟರ್‍ಗೆತಪಾಸಣೆಗೆ ಕಳುಹಿಸಬೇಕು.
ಅಂಗಡಿ ಮುಂಗಟ್ಟುಗಳಲ್ಲಿ ಸಾರ್ವಜಿನಿಕರು ಸಾಮಾಜಿಕಅಂತರವನ್ನುಕಾಯ್ದುಕೊಂಡಿರುವ ಬಗ್ಗೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವ ಬಗ್ಗೆ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಿ ರೆಕಾರ್ಡಿಂಗ್ ಮಾಡವುದು ಸಂಬಂಧಪಟ್ಟ ವರ್ತಕರಜವಾಬ್ದಾರಿಯಾಗಿರುತ್ತದೆ.ಸಿಸಿಟಿವಿ ರೆಕಾರ್ಡಿಂಗ್ ದಾಖಲೆಗಳನ್ನು ಸಂಬಂಧಪಟ್ಟಆರೋಗ್ಯಇಲಾಖಾಧಿಕಾರಿಗೆ ಹಾಗೂ ಆಯುಕ್ತರು ಮಂಗಳೂರು ಮಹಾನಗರಪಾಲಿಕೆ/ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸಲ್ಲಿಸಬೇಕು.
ಮೇಲ್ಕಂಡ ಅಧಿಕಾರಿಗಳು ದಾಖಲೆಗಳನ್ನು ನಿಯಮಿತವಾಗಿ ಪರಿಶೀಲಿಸಿ ಸಾಮಾಜಿಕಅಂತರವನ್ನು ಹಾಗೂ ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಉಲ್ಲಂಘಿಸಿದಲ್ಲಿ ದಂಡ ವಿಧಿಸುವುದು/ ಪರವಾನಗಿರದ್ದು ಪಡಿಸುವಂತೆಕ್ರಮ ಕೈಗೊಳಲಾಗುವುದು.
ಯಾವುದೇ ಅಂಗಡಿಗಳಲ್ಲಿ ಮಾಸ್ಕ್‍ಧರಿಸದಿರುವುದು ಹಾಗೂ ಸಾಮಾಜಕಅಂತರವನ್ನು ಕಾಯ್ದುಕೊಳ್ಳ ದಿರುವುದು ಅಥವಾ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಮೊದಲ ಬಾರಿಗೆ ರೂ.1000, ಎರಡನೇ ಮತ್ತು ಮೂರನೇ ಬಾರಿಗೆಕ್ರಮವಾಗಿರೂ.2000 ಮತ್ತುರೂ.3000 ದಂಡವನ್ನು ವಿಧಿಸಿ ಎಚ್ಚರಿಗೆ ನೀಡಲು ಹಾಗೂ ಮೂರಕ್ಕಿಂತ ಹೆಚ್ಚು ಬಾರಿ ಷರತ್ತುಗಳನ್ನು ಉಲ್ಲಂಘಸಿದ್ದಲ್ಲಿ ಅಂಗಡಿಗಳ ಪರವಾನಿಗೆಯನ್ನುರದ್ದು ಪಡಿಸಲು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಹಂತದಲ್ಲಿ ಸೂಕ್ತ ಉಪನಿಯಮಗಳನ್ನು ರಚಿಸಿ ಅದನ್ನು ಅನುಷ್ಟಾನಗೊಳಿಸಬೇಕು.
ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮುಖದ ಹೊದಿಕೆಯನ್ನುಧರಿಸುವುದುಕಡ್ಡಾಯವಾಗಿದೆ.ಅಗತ್ಯಾನುಸಾರ ಮುಖದ ಹೊದಿಕೆಯನ್ನುಧರಿಸದಿದ್ದಲ್ಲಿ ನಗರ ಪ್ರದೇಶಗಳಲ್ಲಿ ರೂ.200 ಮತ್ತು ಇನ್ನುಳಿದ ಪ್ರದೇಶಗಳಲ್ಲಿ ರೂ.100 ದಂಡ ವಿಧಿಸಲಾಗುವುದು.
ಪ್ರತಿ ಅಂಗಡಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ವಯ ವಿಲೇವಾರಿ ಮಾಡಲುಕ್ರಮವಹಿಸಲಾಗುವುದು.ರಸ್ತೆಗಳಲ್ಲಿ ತ್ಯಾಜ್ಯಗಳನ್ನುಎಸೆಯದಂತೆಕ್ರಮವಹಿಸಲಾಗುವುದು, ಉಲ್ಲಂಘಿಸಿದ್ದಲ್ಲಿ ಹಾಗೂ ಮೇಲೆ ತಿಳಿಸಿದ ನಿಯಮಗಳು, ಹಾಗೂ ಘನತ್ಯಾಜ್ಯ ನಿರ್ವಹಣೆ ನಿಯಮಗಳು ಹಾಗೂ ಮಹಾನಗರಪಾಲಿಕೆ ನಿಯಮಗಳಡಿಯಲ್ಲಿ ದಂಡ ಭರಿಸುಬೇಕು.
ಮೀನುಗಳನ್ನು ದೋಣಿ, ಮೀನುಗಾರಿಕೆ ಹಡಗುಗಳಿಂದ ಇಳಿಸುವ ಸಂದರ್ಭಗಳಲ್ಲಿ ಬಂದರು, ಜಟ್ಟಿಗಳಲ್ಲಿ ಮೀನುಗಾರಿಕೆ ವ್ಯಾಪಾರದ ಸಂದರ್ಭಗಳಲ್ಲಿ ಅಲ್ಲಿ ಸೇರುವ ಜನಗಳು ಸಾಮಜಿಕಅಂತರವನ್ನು ಹಾಗೂ ಸರ್ಕಾರಿ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.
ಉಪನಿರ್ದೇಶಕರು ಮೀನುಗಾರಿಕೆ ಇಲಾಖೆ ದ.ಕ.ಮಂಗಳೂರು ಹಾಗೂ ಬಂದರುಅಧಿಕಾರಿಯವರುಇದರ ಬಗ್ಗೆ ನಿಗಾವಹಿಸಿ ಸಂಬಂಧಪಟ್ಟವರಿಗೆ ಸೂಕ್ತ ತಿಳುವಳಿಕೆ ನೀಡಿ ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸುವಂತೆಅಗತ್ಯಕ್ರಮ ಕೈಗೊಳ್ಳಬೇಕು.
ಮೀನುಗಾರಿಕೆ ವ್ಯಾಪಾರ, ಹಣ್ಣು ಹಂಪಲು, ತರಕಾರಿ ಹಾಗೂ ಇತರೇ ವ್ಯಾಪಾರ ವಹಿವಾಟುಗಳು ನಡೆಸುವ ಸ್ಥಳಗಳಲ್ಲಿ ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ತಮ್ಮತಮ್ಮ ವ್ಯಾಪ್ತಿಯಲ್ಲಿಓರ್ವ ನೋಡಲ್‍ಅಧಿಕಾರಿಯನ್ನು ನೇಮಿಸಿ ಪ್ರತಿನಿತ್ಯ ಸರ್ಕಾರಿ ಮಾರ್ಗಸೂಚಿ ಗಳನ್ನು ಸಾರ್ವಜನಿಕರು, ವರ್ತಕರುಕಡ್ಡಾಯವಾಗಿ ಪಾಲಿಸುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಹಾಗೂ ಜಿಲ್ಲಾಡಳಿತದ ಗಮನಕ್ಕೆ ತರಬೇಕು.
ಕೆ.ಎಸ್.ಆರ್.ಟಿ.ಸಿ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರುತಪ್ಪದೇ ಮಾಸ್ಕ್‍ಗಳನ್ನು ಬಳಸಬೇಕು ಹಾಗೂ ಸರ್ಕಾರಿ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.ಇದನ್ನುಉಲ್ಲಂಘಿಸುವ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅವಕಾಶ ನೀಡದಂತೆ ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೆಜಿಲ್ಲೆಯ ವಿಭಾಗೀಯ ನಿಯಂತ್ರಣಾಧಿಕಾರಿ, ಕೆ.ಎಸ್.ಆರ್.ಟಿ.ಸಿ, ಮಂಗಳೂರು, ಪುತ್ತೂರುಇವರು ಸೂಕ್ತ ನಿರ್ದೇಶನ ನೀಡಬೇಕು.
ಖಾಸಗಿ ಬಸ್, ಆಟೋ, ಕ್ಯಾಬ್‍ಇತ್ಯಾದಿ ವಾಹನಗಳಲ್ಲಿ ಪ್ರಯಾಣಿಕರುಕಡ್ಡಾಯವಾಗಿ ಮಾಸ್ಕ್ ಬಳಸಿ ಸಂಚರಿಸಬೇಕು.ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಿ ಉಲ್ಲಂಘನೆ ಯಾದ್ದಲ್ಲಿ ವಾಹನದ ಮಾಲೀಕರಿಗೆದಂಡವನ್ನು ವಿಧಿಸಬೇಕು.
ಪೊಲೀಸ್ ಇಲಾಖಾ ಅಧಿಕಾರಿಗಳು ಕೂಡಾತಮ್ಮ ಹಂತದಲ್ಲಿಆಗಿದ್ದಾಂಗೆ ವಾಹನ ತಪಾಸಣೆ ಮಾಡಿ ಸರ್ಕಾರಿ ಮಾರ್ಗಸೂಚಿಗಳನ್ನು ಸಾರ್ವಜನಿಕರುಕಡ್ಡಾಯವಾಗಿ ಪಾಲಿಸುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.
ಎ.ಪಿ.ಎಂ.ಸಿ. ಮಾರುಕಟ್ಟೆಗಳಲ್ಲಿ ಸಾರ್ವಜನಿಕರು ಹಾಗೂ ವರ್ತಕರುಕಡ್ಡಾಯವಾಗಿ ಮಾಸ್ಕ್‍ಧರಿಸುವುದು ಹಾಗೂ ಸಾಮಾಜಿಕಅಂತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಕೃಷಿ ಉತ್ಪನ್ನಗಳನ್ನು ಸಾಗಾಣಿಕೆ, ವಾಹನಗಳಿಂದ ಇಳಿಸುವ ಇತ್ಯಾದಿ ಸಂದರ್ಭಗಳಲ್ಲಿ ಸರ್ಕಾರಿ ಮರ್ಗಸೂಚಿಗಳ ಉಲ್ಲಂಘನೆಯಗದಂತೆ ಎ.ಪಿ.ಎಂ.ಸಿ.ಕಾರ್ಯದರ್ಶಿಯವರು ಅಗತ್ಯಕ್ರಮ ಜರುಗಿಸಿ ನಿಗಾವಹಿಸಬೇಕು.
ಸಾರ್ವಜನಿಕರುಕಡ್ಡಾಯವಾಗಿ ಮಾಸ್ಕ್‍ಧರಿಸುವ ಬಗ್ಗೆ ಹಾಗೂ ಎಲ್ಲೆಂದರಲ್ಲಿ ಉಗುಳದಂತೆ ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ಜನಜಾಗೃತಿ ಮೂಡಿಸಬೇಕು ಹಾಗೂ ತಮ್ಮ ವ್ಯಾಪ್ತಿಯಲ್ಲಿಇದನ್ನುಉಲ್ಲಂಘಿಸುವ ಸಾರ್ವಜನಿಕರಿಗೆದಂಡವನ್ನು ವಿಧಿಸಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Comments are closed.