ಕರಾವಳಿ

ಇಂದಿನಿಂದ ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ

Pinterest LinkedIn Tumblr

ಮಂಗಳೂರು ಸೆಪ್ಟೆಂಬರ್ 24 : ಮಂಗಳೂರಿನ ಹೊರವಲಯದ ವಾಮಂಜೂರು- ಮೂಡುಶೆಡ್ಡೆ ಯಲ್ಲಿರುವ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಮೃಗಾಲಯ, ಲೇಕ್‍ಗಾರ್ಡನ್, ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ, ಸಂಸ್ಕೃತಿಗ್ರಾಮವನ್ನು(ವಿಜ್ಞಾನಕೇಂದ್ರ ಮತ್ತುತಾರಾಲಯ ಹೊರತುಪಡಿಸಿ) ಇಂದಿನಿಂದ (ಸೆಪ್ಟೆಂಬರ್24 ರಿಂದ) ಸಾರ್ವಜನಿಕರ ವೀಕ್ಷಣೆಗೆತೆರೆಯಲಾಗುವುದು.

ವೀಕ್ಷಕರು ಸರಕಾರದ ಆದೇಶದಂತೆ ಸಾಮಾಜಿಕ ಅಂತರವನ್ನುಕಾಯ್ದುಕೊಂಡು, ಮುಖಗವಸು (ಮಾಸ್ಕ್) ಧರಿಸಿ ವೀಕ್ಷಿಸಬಹುದಾಗಿದೆ. ಹಾಗೂ ಪ್ರತಿ ಸೋಮವಾರ ವಾರದರಜಾ ದಿನವಾಗಿರುತ್ತದೆ ಎಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Comments are closed.