ಬೆಂಗಳೂರು : ಸ್ಯಾಂಡಲ್‌ವುಡ್‌ನ ಖ್ಯಾತ ಪೋಷಕ ನಟ, ತಮ್ಮ ವಿಶಿಷ್ಟ ಕಾಮಿಡಿ ನಟನೆಯ ಮೂಲಕ ಸ್ಯಾಂಡಲ್ ವುಟ್ ಚಿತ್ರರಂಗದಲ್ಲಿ ಖ್ಯಾತರಾಗಿದ್ದ ರಾಕ್‌ಲೈನ್ ಸುಧಾಕರ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗುರುವಾರ ಸಿನಿಮಾ ಒಂದರ ಶೂಟಿಂಗ್ ನಲ್ಲಿ ತೊಡಗಿದ್ದ ರಾಕ್ ಲೈನ್ ಸುಧಾಕರ್ ಅವರಿಗೆ ಹೃದಯಾಘಾತ ಉಂಟಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ರಾಕ್ ಲೈನ್ ಸುಧಾಕರ್ ಅವರು 2012ರಲ್ಲಿ ಡಕೋಟಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ ಯೋಗರಾಜ್ ಭಟ್ ನಿರ್ದೇಶನದ ನಟ ದಿಗಂತ್ ಅಭಿನಯದ ಪಂಚರಂಗಿ ಸಿನಿಮಾ ಮೂಲಕ ಪ್ರಖ್ಯಾತಿಯನ್ನು ಹೊಂದಿದ್ದರು. ಬೆಳ್ಳಿತೆರೆಯಲ್ಲಿ ಹೆಸರು ಮಾಡಿದ್ದ ರಾಕ್‌ಲೈನ್ ಸುಧಾಕರ್ ನಿಧನರಾಗಿರುವುದು ಚಿತ್ರರಂಗಕ್ಕೆ ನಷ್ಟವೇ ಸರಿ.
ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದ ರಾಕ್‌ಲೈನ್ ಸುಧಾಕರ್, ಹಾಸ್ಯಕಲಾವಿದರಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಪಂಚರಂಗಿ, ಪರಮಾತ್ಮ, ಟೋಪಿವಾಲಾ, ಅಧ್ಯಕ್ಷ, ಲವ್ ಇನ್ ಮಂಡ್ಯ, ಮಿಸ್ಟರ್ ಆಯಂಡ್ ಮಿಸೆಸ್ ರಾಮಾಚಾರಿ, ವಾಸ್ತುಪ್ರಕಾರ, ಕರ್ವ, ಜೂಮ್ ಸೇರಿ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ
ಅವರ ಸಾವಿಗೆ ಸ್ಯಾಂಡಲ್ವುಡ್ ಚಿತ್ರೋದ್ಯಮ ಸಂತಾಪ ಸೂಚಿಸಿದೆ.
Comments are closed.