ಉಡುಪಿ: ಹಾಡಹಗಲೇ ನಡು ರಸ್ತೆಯಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕಡಿದು ಹತ್ಯೆಗೈದ ಆತಂಕಕಾರಿ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಘಟನೆ ನಡೆದಿದೆ.
ಇನ್ನಾ ಗ್ರಾಮದ ಕಿಶನ್ ಹೆಗ್ಡೆ (36) ಹತ್ಯೆಗೀಡಾದ ಯುವಕನಾಗಿದ್ದಾನೆ. ಕಿಶನ್ ರಿಯಲ್ ಎಸ್ಟೇಟ್ ನಡೆಸುತ್ತಿದ್ದು ರೌಡಿಶೀಟರ್ ಎನ್ನಲಾಗಿದ್ದು ಆರೋಪಿಗಳ ಬಂಧನಕ್ಕಾಗಿ ಜಿಲ್ಲಾ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ರಚಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.
ಮಂಗಳೂರು ಮೂಲದ ಗ್ಯಾಂಗ್ ಒಂದು ಈ ಹತ್ಯೆ ಮಾಡಿದೆ ಎಂದು ಹೇಳಲಾಗಿದೆ. ಕಿಶನ್ ಅವರನ್ನು ಎರಡು ಕಾರುಗಳಲ್ಲಿ ಬೆನ್ನಟ್ಟಿದ್ದು ಕಿಶನ್ ಕಾರಿಗೂ ಹಾನಿಮಾಡಿದ್ದಾರೆ ಎನ್ನಲಾಗಿದೆ. ಕಾರ್ಕಳ ಕಡೆಗೆ ಹೋಗುವ ರಸ್ತೆಯಲ್ಲಿ ಹಲ್ಲೆಕೋರರು ಪರಾರಿಯಾಗಿದ್ದು ಈ ದುಷ್ಕರ್ಮಿಗಳ ತಂಡದಲ್ಲಿ 15 ಜನರು ಇದ್ದರು ಎಂದು ವರದಿಗಳು ತಿಳಿಸಿವೆ. ಸ್ಥಳಕ್ಕೆ ಹಿರಿಯಡ್ಕ ಪೋಲಿಸರು ಭೇಟಿ ನೀಡಿದ್ದಾರೆ.
Comments are closed.