ಕರಾವಳಿ

ಯಕ್ಷಗಾನ ಕಲೆ ಸರ್ವಮಾನ್ಯ ಕಲೆ-ಯಕ್ಷಕಲಾವಿದರ ಸೇವೆ ನಮ್ಮ ಭಾಗ್ಯ :ಇಸ್ಕಾನ್ ನ ಉಪಾಧ್ಯಕ್ಷ ಸನಂದನ ಪ್ರಭು

Pinterest LinkedIn Tumblr

ಮಂಗಳೂರು : “ಫಲಾನುಭವಿಗಳು ಸೇವಾವಕಾಶ ನೀಡಿದ ಗಣ್ಯರು.ಯಕ್ಷಗಾನ ಕಲಾವಿದರಿಗೆ ಪೊಟ್ಟಣ ವಿತರಿಸುವುದು ನಮ್ಮ ಭಾಗ್ಯ.ಯಕ್ಷಗಾನ ಕಲೆ ಸರ್ವಮಾನ್ಯ ಕಲೆ ” ಎಂದು ಇಸ್ಕಾನ್ ನ ಉಪಾಧ್ಯಕ್ಷ ಸನಂದನ ಪ್ರಭು ಅವರು ನುಡಿದರು.

ಮಂಗಳೂರಿನ ಮಹಾಮಾಯಾ ದೇವಸ್ಥಾನದ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದಲ್ಲಿ ಇಸ್ಕಾನ್ ಅಕ್ಷಯ ಪಾತ್ರ ಸಂಸ್ಥೆಯು ಕೊಡಮಾಡಿದ ಆಹಾರ ಪದಾರ್ಥಗಳ ಪೊಟ್ಡಣವನ್ನು ಯಕ್ಷಗಾನ ಕಲಾವಿದರಿಗೆ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ವಾಗೀಶ್ವರೀ ಸಂಘದ ಗೌರವಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರರು ಶತಮಾನದ ಇತಿಹಾಸ ಉಳ್ಳ ಈ ಸಂಘದ ಸೇವಾ ಚಟುವಟಿಕೆಗೆ ಇಸ್ಕಾನ್ ಕೊಡುಗೆಯನ್ನು ಶ್ಲಾಘಿಸಿದರು.

ಸಸಿಹಿತ್ಲು,ಬಪ್ಪನಾಡು,ಬೆಂಕಿನಾಥೇಶ್ವರ,ತಲಕಳ,ಮಂಗಳಾದೇವಿ ಮೇಳ ಹಾಗೂ ಹವ್ಯಾಸಿ ಕಲಾವಿದರನ್ನು ಸೇರಿ 40 ಮಂದಿಗೆ ಪೊಟ್ಟಣ ವಿತರಿಸಲಾಯಿತು.

ಪ್ರಸನ್ನ ಟೆಕ್ನೋಲೊಜಿ ಯ ಸುಬೋದ್ ಶೆಟ್ಟಿ ,ಉದ್ಯಮಿ ಚಂದ್ರಶೇಖರ ಭಂಢಾರಿ ಅವರು ಮುಖ್ಯ ಅತಿಥಿಗಳಾಗಿದ್ದರು.

ಸೇವಾ ಯೋಜನೆಯ ರೂವಾರಿಗಳಾದ ಬೋಳಾರದ ಸುರಭಿ ಸಮೂಹ ಸಂಸ್ಥೆಗಳ ನಾಗೇಶ್ ಪ್ರಭು, ಸುಭಾಶ್ಚಂದ್ರ ಪ್ರಭು ,ಶಿವಪ್ರಸಾದ ಪ್ರಭು ಅವರು ಎಲ್ಲಾ ಕಲಾವಿದರಿಗೆ ಗೌರವ ಧನ ವಿತರಿಸಿದರು.

ಯಕ್ಷಗಾನ ಅಕಾಡಮಿ ಸದಸ್ಯ ಕದ್ರಿ ನವನೀತ ಶೆಟ್ಟಿಯವರು ತನ್ನನ್ನು ಯಕ್ಷರಂಗದಲ್ಲಿ ಬೆಳೆಸಿದ ವಾಗೀಶ್ವರೀ ಸಂಘ ದ ಶತಮಾನೋತ್ಸವ ವನ್ನು 2001-02 ರಲ್ಲಿ ಆಚರಿಸಲಾಗುವುದು ಎಂದರು.

ಸಂಚಾಲಕ ಪಿ. ಸಂಜಯ ಕುಮಾರ್ ರಾವ್ ಸ್ವಾಗತಿಸಿದರು. ಯಕ್ಷಗುರು ಅಶೋಕ್ ಬೋಳೂರು ಧನ್ಯವಾದ ಸಮರ್ಪಿಸಿದರು.

ಸಂಘದ ಸದಸ್ಯರಿಂದ “ಶರಸೇತು ಬಂಧ” ತಾಳಮದ್ದಳೆ ಜರಗಿತು.ಪ್ರತೀ ಅದಿತ್ಯವಾರ ನಡೆಯುವ ತಾಳಮದ್ದಳೆ ಕೂಟದಲ್ಲಿ ಆಸಕ್ತಿ ಇದ್ದ ಕಲಾವಿದರು ಪಾಲ್ಗೊಳ್ಳಲು ಆಹ್ವಾನ ನೀಡಲಾಯಿತು. ಕಲಾವಿದ ಜಗದೀಶ ನಲ್ಕ ಅವರು ಕಲಾವಿದರ ಪರವಾಗಿ ಸೇವಾಕರ್ತರನ್ನು ಅಭಿನಂದಿಸಿದರು.

Comments are closed.