ಕರ್ನಾಟಕ

ಗಾನ ಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

Pinterest LinkedIn Tumblr

ಚೆನ್ನೈ: ಅನಾರೋಗ್ಯದಿಂದ್ದ ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂಬ ಮಾಹಿತಿಯನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಯ ಹೆಲ್ತ್ ಬುಲೆಟಿನ್ ನೀಡಿದೆ‌.

ಆ. 5 ರಿಂದ ಎಸ್.ಪಿ. ಬಾಲಸುಬ್ರಣ್ಯ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಹಿಂದೆ ಹಲವು ಬಾರಿ ಅವರ ಆರೋಗ್ಯ ಸ್ಥಿತಿ ಏರುಪೇರಾಗಿತ್ತು. ಪ್ರಸ್ತುತ ಇದೀಗ ಅವರ ಆರೋಗ್ಯ ತೀರಾ ಹದಗೆಟ್ಟಿದೆ ಎಂದು ಅವರ ಆರೈಕೆ ಮಾಡುತ್ತಿರುವ ವೈದ್ಯರು ತಿಳಿಸಿದ್ದು, ಈ ಬಗ್ಗೆ ಹೆಲ್ತ್ ಬುಲೆಟಿನ್ ಮೂಲಕ ಪ್ರಕಟಿಸಲಾಗಿದೆ.

ಇನ್ನು ದಿನಗಳ ಹಿಂದೆಯಷ್ಟೇ ಗುಣಮುಖರಾಗುತ್ತಿದ್ದಾರೆ ಎಂದು ಅವರ ಮಗ ಚರಣ್ ಮಾಹಿತಿ ನೀಡಿದ್ದರು. ಅಲ್ಲದೆ, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ತಿಳಿಸಿದ್ದರು. ಇನ್ನು ಸೆಪ್ಟೆಂಬರ್ 7 ರಂದು ಎಸ್‌ಪಿಬಿ ಅವರಿಗೆ ಕೊರೊನಾ ನೆಗೆಟಿವ್ ದೃಢಪಟ್ಟಿತ್ತು ಎಂದು ಚರಣ್ ತಿಳಿಸಿದ್ದರು. ಈ ನಡುವೆ ಆಸ್ಪತ್ರೆಯಲ್ಲಿಯೇ ಅವರ ಮದುವೆ ವಾರ್ಷಿಕೋತ್ಸವ ಸಂಭ್ರಮವನ್ನು ಆಚರಿಸಿದ್ದರು.

ಖ್ಯಾತ ಗಾಯಕ ಎಸ್.ಪಿ.ಬಿ. ಆರೋಗ್ಯ ಚೇತರಿಕೆಗೆ ಅವರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.

 

Comments are closed.