ಉಡುಪಿ: ರಿಯಲ್ ಎಸ್ಟೇಟ್ ಮಾಡಿಕೊಂಡಿದ್ದ ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಶನಿವಾರ ಮಾಹಿತಿ ನೀಡಿದರು.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದ್ದು ಮನೋಜ್ ಕುಲಾಲ್ (37), ಚಿತ್ತರಂಜನ್ ಪೂಜಾರಿ (27), ಚೇತನ್ ಯಾನೆ ಚೇತು ಪಡೀಲ್ (27), ರಮೇಶ್ ಪೂಜಾರಿ (38) ಮತ್ತು ದೀಕ್ಷಿತ್ ಶೆಟ್ಟಿ ಯಾನೆ ದೇವಿ ಪ್ರಸಾದ್ (29) ಬಂಧಿಸಲಾಗಿದೆ ಎಂದರು.
ಬಂಧಿತ ಐವರು ಆರೋಪಿಗಳು ರೌಡಿ ಶೀಟರ್‌ಗಳಾಗಿದ್ದು ಅವರ ವಿರುದ್ದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಬಂಧಿತರಿಂದ ಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಮನೋಜ್ ಮತ್ತು ಕಿಶನ್ ಹೆಗ್ಡೆ ನಡುವಿನ ವೈಯಕ್ತಿಕ ಜಗಳ ಹಾಗೂ ಹಣಕಾಸಿನ ವಿಷಯಗಳಿಂದಾಗಿ ಈ ಕೊಲೆ ನಡೆದಿದೆ.
ಹೆಚ್ಚುವರಿ ಎಸ್‌ಪಿ ಉಡುಪಿ ಕುಮಾರಚಂದ್ರ, ಉಡುಪಿ ಡಿವೈಎಸ್‌ಪಿ ಟಿ. ಜೈಶಂಕರ್, ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ್,ಎಎಸ್ಐ ಕೃಷ್ಣಪ್ಪ, ಎಚ್‌ಸಿ ವಾಸು, ಗಣೇಶ್, ಪ್ರದೀಪ್, ರವಿ, ಶೇಖರ್ ಉಡುಪಿ ಸಿಪಿಐ ಮಂಜುನಾಥ್, ಮಣಿಪಾಲ ಸಿಐ ಮಂಜುನಾಥ್, ಡಿಸಿಐಬಿ ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಅರ್. ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಬ್ರಹ್ಮಾವರ ಠಾಣೆ ಪಿಎಸ್ಐ ರಾಘವೇಂದ್ರ ಹಾಗೂ ಇತರ ಅಧಿಕಾರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.
Comments are closed.