ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯನ್ನು ಖಂಡಿಸಿ ಎಸ್ ಡಿಪಿಐ ವತಿಯಿಂದ ಅಣಕು ಪ್ರದರ್ಶನ ಮತ್ತು ರಸ್ತೆತಡೆ.
ಮಂಗಳೂರು/ ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವತಿಯಿಂದ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯ ವಿರುದ್ಧ ಅಣಕು ಪ್ರದರ್ಶನ ಮತ್ತು ರಸ್ತೆ ತಡೆಯ ಮೂಲಕ ಮೆಲ್ಕಾರ್ ಮತ್ತು ಕಲ್ಲಡ್ಕ ದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಎಸ್ ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹಮ್ಮದ್ ತುಂಬೆ ಮಾತಾಡಿ ಭ್ರಷ್ಟಾಚಾರದಲ್ಲಿ ಮುಳುಗಿದ ರಾಜ್ಯ ಬಿಜೆಪಿ ಸರಕಾರ ಜನರ ಸಮಸ್ಯೆಗಳನ್ನು ಆಲಿಸುವ ಪ್ರಯತ್ನ ಮಾಡದೆ ಜನರ ಹಕ್ಕನ್ನು ಹತ್ತಿಕುವ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಅಭಿಪ್ರಾಯ ಪಟ್ಟರು.
ಎಸ್ ಡಿ ಪಿ ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹುಲ್ ಎಸ್ ಎಚ್ ಮಾತಾಡಿ ಈ ಪ್ರತಿಭಟನೆಯು ಕೇವಲ ಸಾಂಕೇತಿಕವಾದ ಪ್ರತಿಭಟನೆ ಮುಂದಿನ ದಿನಗಲ್ಲಿ ಹೆದ್ದಾರಿಯನ್ನು ಸರಿಪಡಿಸದಿದ್ದಲ್ಲಿ ಎಂಟು ವಿಧಾನಸಭಾಕ್ಷೇತ್ರದಲ್ಲಿ ಎಲ್ಲಾ ಸಮಾನ ಮನಸ್ಕ ಸಂಘಟನೆ ಮತ್ತು ಪಕ್ಷವನ್ನು ಸೇರಿಸಿ ರಸ್ತಾ ರುಕೋ ಮುಖಾಂತರ ಪ್ರತಿಭಟಿಸಲಿದ್ದೇವೆ ಎಂಬ ಎಚ್ಚರಿಕೆಯನ್ನು ಕೊಟ್ಟರು.
ಕಲ್ಲಡ್ಕದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಸರಕಾರಕ್ಕೆ ಜನಸಾಮಾನ್ಯರ ಬಗ್ಗೆ ಯಾವುದೇ ಕಾಳಜಿ ಇಲ್ಲ ಕಳೆದ ಹಲವು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 75 ಅವ್ಯವಸ್ಥೆಯಿಂದ ಕೂಡಿದ್ದು ಇದರ ಬಗ್ಗೆ ಜಿಲ್ಲೆಯ ಸಂಸದ ಲೋಕಸಭೆಯಲ್ಲಿ ಮೌನ ವೃತರಾಗಿದ್ದಾರೆ ಎಂದರು. ಮುಂದಿನ ಹತ್ತು ದಿನಗಳೊಳಗಾಗಿ ಹೆದ್ದಾರಿ ಗುಂಡಿಗಳನ್ನು ಮುಚ್ಚದೇ ಇದ್ದಲ್ಲಿ ಮುಂದೆ ಹೆದ್ದಾರಿಯನ್ನು ತಡೆಯುವ ಮೂಲಕ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಂತರ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಜಿಲ್ಲೆಯ ಸಂಸದರಿಗೆ ಅಬಿವೃದ್ದಿ ಕಾರ್ಯಗಳ ಕುರಿತ ಕನಿಷ್ಠ ಕಾಳಜಿಯೂ ಇಲ್ಲದಾಗಿದ್ದು ಕೇವಲ ಆರೋಪ, ಪ್ರತ್ಯಾರೋಪಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಪ್ರತಿಭಟನೆಯಲ್ಲಿ ಕ್ಷೇತ್ರ ಅಧ್ಯಕ್ಷರಾದ ಯೂಸುಫ್ ಆಲಡ್ಕ,ಎಸ್.ಡಿ.ಪಿ.ಐ ಬಂಟ್ವಾಳ ಕ್ಷೇತ್ರ ಪ್ರಧಾನಕಾರ್ಯದರ್ಶಿಗಳಾದ ಕಲಂದರ್ ಪರ್ತಿಪ್ಪಾಡಿ, ,ಪಿ ಎಫ್ ಐ ಬಂಟ್ವಾಳ ತಾಲೂಕು ಅಧ್ಯಕ್ಷ ಸಲೀಂ ಕುಂಪನಮಜಲ್, ಪಾಪ್ಯುಲರ್ ಫ್ರಂಟ್ ವಿಟ್ಲ ತಾಲೂಕು ಅಧ್ಯಕ್ಷರಾದ ಝಕರಿಯಾ ಗೋಳ್ತಮಜಲು, ಪುರಸಭಾ ಸದಸ್ಯರಾದ ಮುನೀಶ್ ಅಲಿ ಇದ್ರೀಸ್ ಪಿ ಜೆ ಕ್ಷೇತ್ರ ಜೊತೆ ಕಾರ್ಯದರ್ಶಿ ಸಲೀಂ ಅಲಾಡಿ ,
ಕ್ಷೇತ್ರ ಸಮಿತಿ ಸದಸ್ಯರಾದ ಫೈಝಲ್ ಮಂಚಿ, ಸತ್ತಾರ್ ಕಲ್ಲಡ್ಕ, ಸಿದ್ದೀಖ್ ಪನಾಮಾ, ಗ್ರಾಮಪಂಚಾಯತ್ ಸದಸ್ಯರಾದ ಯೂಸುಫ್ ಹೈದರ್, ಗೋಳ್ತಮಜಲು ಗ್ರಾಮ ಸಮಿತಿ ಅಧ್ಯಕ್ಷರಾದ ಜವಾಝ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.
ಶಾಕೀರ್ ಅಳಿಕೆಮಜಲು ಮತ್ತು ಮಲಿಕ್ ಕೊಳಕೆ ಸ್ವಾಗತಿಸಿ, ದನ್ಯವಾದಗೈದರು.
Comments are closed.