ಕರಾವಳಿ

ಅಂಪಾರಿನಲ್ಲಿ ಅಂದರ್-ಬಾಹರ್ ಆಡುತ್ತಿದ್ದ ಜುಗಾರಿಕೋರರ ಬಂಧನ

Pinterest LinkedIn Tumblr

ಉಡುಪಿ: ಕಾಡಿನಲ್ಲಿ ಅಂದರ್ ಬಾಹರ್ ಇಸ್ಫೀಟ್ ಜುಗಾರಿಯಲ್ಲಿ ತೊಡಗಿದ್ದ ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ತಾಲೂಕು ಅಂಪಾರು ಗ್ರಾಮದ ಅಂಪಾರು ಪೇಟೆ ಸಮೀಪದ ಅರಣ್ಯ ಇಲಾಖೆಯ ವಸತಿ ಗೃಹದ ಹಿಂಬದಿಯ ಹಾಲಕ್ಕಿ ಹೋಲದ ಹಾಡಿಯಲ್ಲಿ ಈ ಘಟನೆ ನಡೆದಿದೆ.

ರಮೇಶ್ ಪೂಜಾರಿ( 46), ಕೃಷ್ಣಶೆಟ್ಟಿ(22), ಭಾಸ್ಕರ ಪೂಜಾರಿ (28), ಕೆ.ಕರುಣಾಕರ ಶೆಟ್ಟಿ (35), ರಾಜು ವಾಲ್ತೂರು ಬಂಧಿತ ಆರೋಪಿಗಳಾಗಿದ್ದು ಪ್ರಭಾ ಎನ್ನುವಾತ ತಲೆಮರೆಸಿಕೊಂಡಿದ್ದಾನೆ.

ಅಂಪಾರು ಪೇಟೆ ಸಮೀಪದ ಅರಣ್ಯ ಇಲಾಖೆಯ ವಸತಿ ಗೃಹದ ಹಿಂಬದಿಯ ಹಾಲಕ್ಕಿ ಹೋಲದ ಹಾಡಿ ಜಾಗದಲ್ಲಿ ಆಕ್ರಮವಾಗಿ ಇಸ್ವೀಟ್‌ ಜುಗಾರಿ ಅಂದರ್- ಬಾಹರ್ ಆಟವಾಡುತ್ತಿದ್ದ ಬಗ್ಗೆ ಶಂಕರನಾರಾಯಣ ಪಿ.ಎಸ್.ಐ. ಶ್ರೀಧರ್ ನಾಯ್ಕ್ ಅವರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಯಿಸಿ ಆರೋಪಿಗಳನ್ನು ಬಂಧಿಸಿದ್ದು ಸ್ಥಳದಲ್ಲಿದ್ದ ಇಸ್ವೀಟ್‌ ಎಲೆ, 5,680 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.