ಮಂಗಳೂರು : ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಸಿಸಿಬಿ ಪೊಲೀಸರಿಂದ ನೋಟಿಸ್ ಪಡೆದು ಬಳಿಕ ಮಂಗಳೂರಿನಲ್ಲಿ ವಿಚಾರಣೆಗೆ ಹಾಜಾರಾಗಿ ಹೇಳಿಕೆ ನೀಡಿರುವ ನಟಿ, ಖ್ಯಾತ ನಿರೂಪಕಿ ಅನುಶ್ರೀ ಮೊಬೈಲ್ ಪರಿಶೀಲನೆ ಮಾಡಿದ ಸಂದರ್ಭ ಪೊಲೀಸ್ ಅಧಿಕಾರಿಗಳಿಗೆ ಗುಪ್ತ ಮಾಹಿತಿಯೊಂದು ಲಭಿಸಿದ್ದು, ಈ ಮಾಹಿತಿಯಿಂದ ಸ್ವತಹ ಪೊಲೀಸರೇ ಬಿಗ್ ಶಾಕ್‌ಗೆ ಒಳಗಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.
ಮಾತಿನ ಮಲ್ಲಿ ನಿರೂಪಕಿ ಅನುಶ್ರೀ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಬೆನ್ನಲ್ಲೇ ಅನುಶ್ರೀ ಮೂವರು ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿ ಮಾತನಾಡಿರುವ ಬಗ್ಗೆ ಅವರ ಮೊಬೈಲ್ ಪರಿಶೀಲನೆವೇಳೆ ತಿಳಿದು ಬಂದಿದೆ. ಇದೇ ಕಾರಣಕ್ಕೆ ಅನುಶ್ರೀ ಅವರನ್ನು ಎರಡನೇ ಬಾರಿ ವಿಚಾರಣೆಗೆ ಕರೆದಿಲ್ಲ. ಅಲ್ಲದೇ ಡೋಪಿಂಗ್ ಟೆಸ್ಟ್ ಗೂ ಅವರನ್ನು ಒಳಪಡಿಸಿಲ್ಲ ಎಂದು ಹೇಳಲಾಗುತ್ತಿದೆ.
ಅನುಶ್ರೀ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿಗಳು ಆಕೆಯ ಹಲವು ಮೊಬೈಲ್ ಸಿಮ್ಗಳನ್ನ ವಶಪಡಿಸಿಕೊಂಡಿದ್ದಾರೆ. ಬಳಿಕ ಸಿಸಿಬಿ ಅಧಿಕಾರಿಗಳು ಅದರ ಪರಿಶೀಲನೆ ನಡೆಸಿದ ವೇಳೆ ಅನುಶ್ರೀ ತನಗೆ ಸಿಸಿಬಿ ಪೊಲೀಸರಿಂದ ನೋಟಿಸ್ ಬಂದ ದಿನ ಮತ್ತು ಮಾರನೇ ದಿನ ಮೂವರು ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿರುವ ವಿಷಯ ಬಹಿರಂಗವಾಗಿದೆ. ವಿಚಾರಣೆ ವೇಳೆ ಅನುಶ್ರೀ ಮೊಬೈಲ್ ತಪಾಸಣೆ ನಡೆಸಿದಾಗ ಅನುಶ್ರೀ ಕಾಲ್ ಲಿಸ್ಟ್ ನಲ್ಲಿದ್ದ ಹೆಸರು ಕಂಡು ಸ್ವತಃ ಸಿಸಿಬಿ ಅಧಿಕರಿಗಳೇ ದಂಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅನುಶ್ರೀ ಕರೆ ಮಾಡಿರುವ ಮೊದಲ ಪ್ರಭಾವಿ ರಾಜಕಾರಣಿ ರಾಜ್ಯದ ಮಾಜಿ ಸಿಎಂ ಆಗಿರುವವರು. ಇವರೊಬ್ಬರಿಗೆ ಅನುಶ್ರೀ ಹಲವು ಬಾರಿ ಕರೆ ಮಾಡಿ ಮಾತನಾಡಿದ್ದಾರೆ ಎಂದು ಮೊಬೈಲ್ ಕಾಲ್ ಲಿಸ್ಟ್ ನಿಂದ ತಿಳಿದು ಬಂದಿದೆ. ಅದಾದ ಬಳಿಕ ಮಾಜಿ ಸಿಎಂ ಪುತ್ರನಿಗೆ ಕರೆ ಮಾಡಿದ್ದಾರೆ.
ಬಳಿಕ ಅನುಶ್ರೀ ಕರೆಮಾಡಿರುವ ಮೂರನೇ ಪ್ರಭಾವಿ ರಾಜಕಾರಣಿ ಕರಾವಳಿ ಮೂಲದ ರಾಜ್ಯ ನಾಯಕರು ಎಂದು ಹೇಳಲಾಗಿದೆ. ಹಾಗಾಗಿ ಅನುಶ್ರೀ ರಕ್ಷಣೆಗೆ ದೊಡ್ಡ ದೊಡ್ಡ ರಾಜಕಾರಣಿಗಳೆ ನಿಂತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
Comments are closed.