ಉಡುಪಿ: ಉಡುಪಿ ಜಿಲ್ಲೆಯ ಹಿರಿಯಡ್ಕ ಪೇಟೆಯಲ್ಲಿ ಹಾಡು ಹಗಲಲ್ಲೇ ಇನ್ನಾ ನಿವಾಸಿ ಕಿಶನ್ ಹೆಗ್ಡೆ ನಡೆದ ಕೊಲೆ ಪ್ರಕರಣ ನಡೆದಿತ್ತು.ಅದರಲ್ಲಿ ತಲೆ ಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಮೂಲದವರಾದ ಸಚಿನ್ ಡಿ ಅಮೀನ್ ಯಾ ಸಚ್ಚಿ (37), ಅಕ್ಷಯ್ ಶೆಟ್ಟಿಗಾರ್ (26), ಚೇತನ್ ಯಾನೆ ಚೇತು (23) ಮತ್ತು ಸಂಜೀತ್ ಪ್ರಧಾನ್ ಯಾನೆ ಶೈಲೇಶ (19) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಸ.24 ರಂದು ಹಿರಿಯಡ್ಕ ಪೇಟೆಯಲ್ಲಿ ಹಾಡು ಹಗಲಲ್ಲೇ ಕಿಶನ್ ಹೆಗ್ಡೆ ಕೊಲೆ ನಡೆದಿದ್ದು ಈ ಕೊಲೆ ಪ್ರಕರಣವನ್ನು ಭೇದಿಸಲು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಮತ್ತು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಂತೆ ಡಿವೈಎಸ್ಪಿ ಜೈಶಂಕರ್, ನಿರ್ದೇಶನದಂತೆ 4 ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ಕಿಶನ್ ಹೆಗ್ಡೆ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮನೋಜ್ ಕೊಡಿಕೆರೆ ಮತ್ತು ಇತರ ನಾಲ್ಕು ಜನರ ಬಂಧನವಾಗಿತ್ತು.ಅವರು ಈಗಾಗಲೇ ಪ್ರಮುಖ ಐದು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.ಅವರ ಹೇಳಿಕೆಯಂತೆ ಅದರಲ್ಲಿ ಕೊಲೆ ಪ್ರಕರಣದಲ್ಲಿ ಕೃತ್ಯ ನಡೆಸಿದ ತಲೆ ಮರೆಸಿಕೊಂಡಿರುವ ನಾಲ್ವರು ಆರೋಪಿಗಳನ್ನು ಶುಕ್ರವಾರ ಸುರತ್ಕಲ್ ಬಳಿ ಪತ್ತೆ ಹಚ್ಚಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಬ್ರಹ್ಮಾವರ ಪಿ.ಎಸ್.ಐ ರಾಘವೇಂದ್ರ ಸಿ. ಅವರ ವಿಶೇಷ ತಂಡದವರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಸಚಿನ್ ಡಿ. ಅಮೀನ್ ಯಾ ಸಚ್ಚಿ ಈತನು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳ ಹೊಂದಿದ್ದು ಹಾಗೂ ಆತನ ವಿರುದ್ಧ ಕೊಲೆ,ಕೊಲೆಗೆ ಪ್ರಯತ್ನ,ಅಪಹರಣ,ಹಲ್ಲೆ ಹಾಗೂ ಆ.ಸಿ ಕಾಯ್ದೆ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದೆ.
ಬಂಧಿತ ಆರೋಪಿತಗಳಿಂದ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಫ್ಟ್ ಕಾರು, ಮಾರುತಿ ರಿಟ್ಜ್, ಇನೋವಾ ಕಾರು, ಪಲ್ಸರ್ ಮೋಟಾರ್ ಬೈಕ್, (ಒಟ್ಟು ಮೌಲ್ಯ 19.50 ಲಕ್ಷ) ಹಾಗೂ ಮಂಡೆ ಕತ್ತಿ, ಸುತ್ತಿಗೆ ತಲವಾರುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ, ವೃತ್ತ ಕಛೇರಿಯ ಎಎಸ್‌ಐ ಕೃಷ್ಣಪ್ಪ, ಸಿಬ್ಬಂದಿಯವರಾದ ಪ್ರದೀಪ್ ನಾಯಕ್, ವಾಸುದೇವ ಪಿ, ಗಣೇಶ, ರವೀಂದ್ರ ಹೆಚ್, ಚಾಲಕ ಶೇಖರ್, ಬ್ರಹ್ಮಾವರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಾಘವೇಂದ್ರ ಸಿ, ಸಿಬ್ಬಂದಿಗಳಾದ ದಿಲೀಪ್, ಚಾಲಕ ಅಣ್ಣಪ್ಪ, ಡಿ.ಸಿ.ಐ.ಬಿ ತಂಡದ ಎ.ಎಸ್.ಐ ರವಿಚಂದ್ರನ್, ಸಿಬ್ಬಂದಿಗಳಾದ ರಾಮು ಹೆಗ್ಡೆ ಮತ್ತು ರಾಘವೇಂದ್ರ ಮತ್ತು ಹಿರಿಯಡ್ಕ ಠಾಣೆ ಸಿಬ್ಬಂದಿಗಳಾದ ಹರೀಶ್ ಮತ್ತು ಶಿವರಾಜ್ ಮೊದಲಾದವರು ಭಾಗವಹಿಸಿದ್ದರು.
Comments are closed.