ಕರಾವಳಿ

ಉಡುಪಿ ಪೊಲೀಸರಿಂದ 14 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ಡ್ರಗ್ಸ್ ವಶ; ವಿದ್ಯಾರ್ಥಿ ಬಂಧನ..!

Pinterest LinkedIn Tumblr

ಉಡುಪಿ: ಉಡುಪಿ ಐಎಸ್ ಡಿ ಘಟಕದ ಪೊಲೀಸರು ಮತ್ತು ಮಣಿಪಾಲ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಣಿಪಾಲದ ಶೀಂದ್ರಾ ಬ್ರಿಡ್ಜ್ ಬಳಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭ ಸುಮಾರು 14 ಲಕ್ಷ 90 ಸಾವಿರ ಮೌಲ್ಯದ 400ಕ್ಕೂ ಅಧಿಕ ಎಂ.ಡಿ.ಎಂ.ಎ ಮಾತ್ರೆಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

ಬಂಧಿತ ಯುವಕನನ್ನು ಉತ್ತರ ಭಾರತ ಮೂಲದ ಮಣಿಪಾಲ ವಿದ್ಯಾರ್ಥಿ ಹಿಮಾಂಶು ಜೋಶಿ(20) ಎಂದು ಗುರುತಿಸಲಾಗಿದೆ.

ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಐ.ಎಸ್.ಡಿ ಘಟಕ ಪೊಲೀಸ್ ನಿರೀಕ್ಷಕ ಪಿ.ಎಸ್ ಮಧು, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧಿಕ್ಷಕ ಟಿ ಆರ್ ಜೈಶಂಕರ್ , ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ ಗೌಡ, ಪೊಲೀಸ್ ಉಪನಿರೀಕ್ಷಕ ರಾಜ್ ಶೇಖರ್ ವಂದಲಿ, ಉಡುಪಿ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ನಾಗರಾಜ್ ಹಾಗೂ ಸಿಬ್ಬಂದಿಗಳಾದ ಶೈಲೇಶ್, ದಿನೇಶ್ ಶೆಟ್ಟಿ ಥೋಮನ್ಸ್, ಮಂಜುನಾಥ ಶೆಟ್ಟಿ, ಆದರ್ಶ ನಾಯ್ಕ ಈ ಕಾರ್ಯಾಚರಣೆಯಲ್ಲಿದ್ದರು.

 

 

Comments are closed.