ಬೆಂಗಳೂರು: ನಮ್ಮ ಚಿತ್ರದಿಂದ ಬರುವ ಹೆಚ್ಚುವರಿ ಹಣವನ್ನು ಕ್ಯಾನ್ಸರ್ ಪೀಡಿತರ ನೆರವಿಗೆ ನೀಡುವುದಾಗಿ ಇಲ್ಲೊಬ್ಬ ಹೊಸ ನಿರ್ದೇಶಕರು ಹೇಳಿದ್ದಾರೆ. ಈ ಮಾತನ್ನು ಹೇಳಿರುವುದು ಕ್ಯಾನ್ಸರ್ ರೋಗದ ಬಗ್ಗೆ ಉತ್ತಮ ಸಂದೇಶ ನೀಡುವ ಹೊಸ ಕನ್ನಡ ಚಿತ್ರ “ಬೆಂಕಿಯ ಬಲೆ”ಯ ನಿರ್ದೇಶಕ ಹಾಗೂ ನಿರ್ಮಾಪಕ ಶಿವಾಜಿ ಮೈಸೂರು.
ಗ್ರಾಮೀಣ ಪರಿಸರದಲ್ಲಿ ನಡೆಯುವ ಹಳ್ಳಿ ರಾಜಕೀಯದ ಕಥಾಹಂದರವನ್ನು ಹೊಂದಿದ ಈ ಚಿತ್ರದಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಉತ್ತಮ ಸಂದೇಶವಿದೆ. ಕ್ಯಾನ್ಸರ್ ತಗುಲಿಕೊಂಡ ತನ್ನ ತಾಯಿಯನ್ನು ಉಳಿಸಿಕೊಳ್ಳಲು ಹೋರಾಡುವ ವಿದ್ಯಾವಂತ ಯುವತಿಯಾಗಿ ನಟಿ ಪ್ರೀತಿ ಯಶು ಅಭಿನಯಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹದಿನೆಂಟು ವರ್ಷಗಳ ಹಿಂದೆ ನನ್ನ ತಾಯಿ ಕ್ಯಾನ್ಸರ್ ರೋಗದಿಂದಲೇ ನಿನರಾದರು. ಅವರನ್ನು ಉಳಿಸಿಕೊಳ್ಳಲು ನಮ್ಮಿಂದ ಆಗಲಿಲ್ಲ. ತಮ್ಮವರನ್ನು ಕಳೆದುಕೊಂಡಾಗ ಆಗುವ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು.
ಸಿನಿಮಾ ಮಾಡಿದರೆ ಹಾಳಾಗಿ ಹೋಗ್ತಾರೆ ಎಂದು ಬಹಳಷ್ಟು ಜನ ಹೇಳ್ತಾರೆ, ಆದರೆ ಒಳ್ಳೇ ಉದ್ದೇಶಕ್ಕಾಗಿ ಚಿತ್ರ ಮಾಡಿದರೆ ಖಂಡಿತ ಒಳಿತಾಗುತ್ತದೆ, ಆದರೆ ಕೆಟ್ಟ ಯೋಚನೆ ಇಟ್ಟುಕೊಂಡು ಇಲ್ಲಿಗೆ ಬರುವವರು ಖಂಡಿತ ಉದ್ದಾರ ಆಗಲ್ಲ ಎಂದು ಶಿವಾಜಿ ಮೈಸೂರು ಅಭಿಪ್ರಾಯ ಪಟ್ಟಿದ್ದಾರೆ.
ಅಂದಹಾಗೆ ಬೆಂಕಿಯ ಬಲೆ ಅನ್ನುವ ಟೈಟಲ್ ಗೆ ಪ್ರೀತಿಯ ಕೊಲೆ ಅನ್ನು ಸಬ್ ಟೈಟಲ್ ಕೂಡ ಇದೆ. ವಿಶೇಷ ಅಂದ್ರೆ ಪ್ರೀತಿ, ಪ್ರೇಮದ ಕಥೆಯ ಜೊತೆಗೆ ಹೆಣ್ಣಿನ ಶೋಷಣೆ, ಕ್ಯಾನ್ಸರ್ ರೋಗಿಯೊಬ್ಬನ ವ್ಯಥೆ ಹೀಗೆ ಹಲವಾರು ಎಳೆಗಳನ್ನಿಟ್ಕೊಂಡು ಸಿನಿಮಾ ಮಾಡಿದ್ದಾರಂತೆ ನಿರ್ದೇಶಕರು.
ಇದೊಂದು ಗ್ರಾಮೀಣ ಭಾಗದಲ್ಲಿ ನಡೆಯುವಂತಹ ಕಥೆಯಾಗಿದ್ದು, ಶಿವಾಜಿ ಮೈಸೂರು ಅವರು ತಮ್ಮ ಕನಸುಗಳನ್ನ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ.
ಇನ್ನೂ ಈ ಚಿತ್ರದಲ್ಲಿ ಇಬ್ಬರು ನಾಯಕರಿದ್ದಾರೆ.. ನಟರಾದ ನಿರಂಜನ್ ಹಾಗೂ ಸಲ್ಮಾನ್ ಇಬ್ಬರು ಚಿತ್ರದ ನಾಯಕರ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.. ಈ ನಟರಿಗೂ ಕೂಡ ಇದು ಮೊದಲ ಸಿನಿಮಾ.. ಚಿತ್ರದಲ್ಲಿ ಇಬ್ಬರೂ ನಾಯಕಿಯರೂ ಸಹ ಇದ್ದಾರೆ. ನಟಿಯರಾದ ಪ್ರೀತಿ ಎಶು ಹಾಗೂ ಪವಿತ್ರ ನಾಯಕಿಯರ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಹಿಂದೆ ದೊರೆ-ಭಗವಾನ್ ನಿರ್ದೇಶನಲ್ಲಿ ಮೂಡಿಬಂದಿದ್ದ ಚಿತ್ರ ‘ಬೆಂಕಿಯ ಬಲೆ’ ಇಂದಿಗೂ ಚಿತ್ರರಸಿಕರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದೆ. ಬೆಂಕಿಯ ಬಲೆ, ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನಿಮಾ. ಅನಂತ್ ನಾಗ್ ಹಾಗೂ ಲಕ್ಷ್ಮೀ ಜೋಡಿಯಾಗಿ ನಟಿಸಿದ ಆ ಚಿತ್ರವನ್ನ ಯಾರ್ ತಾನೇ ಮರೆಯೋಕೆ ಸಾಧ್ಯ.
ಇದೀಗ ಅದೇ ಹೆಸರಿನಲ್ಲಿ ಮೈಸೂರಿನ ಶಿವಾಜಿ ಹೊಸ ಕನ್ನಡ ಸಿನಿಮಾವೊಂದನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಬೆಂಕಿಯ ಬಲೆ, ಪ್ರೀತಿಯ ಕೊಲೆ ಎಂಬ ಟ್ಯಾಗ್ಲೈನ್ ಇರುವ ಈ ಚಿತ್ರ 5 ಹಾಡುಗಳು ಹಾಗೂ 3 ಸಾಹಸ ದೃಷ್ಯಗಳನ್ನು ಒಳಗೊಂಡ ಸಾಂಸಾರಿಕ ಕಥೆಯನ್ನೊಳಗೊಂಡಿದೆಯಂತೆ. ಆಘಾತ, ಪರ್ಚಂಡಿ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದ ಶಿವಾಜಿ ಈ ಚಿತ್ರದ ಮೂಲಕ ನಿರ್ದೇಶಕ ಆಗಿದ್ದಾರೆ. ಜೊತೆಗೆ ಪ್ರಮುಖ ಖಳನಟನ ಪಾತ್ರದಲ್ಲಿ ನಟಿಸಿದ್ದಾರೆ.
ಶಿವಾಜಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬರ್ತಿದೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳು ಹಾಗೂ ಮೂರು ಫೈಟ್ಸ್ ಇದೆ. ಅತಿಶಯ ಜೈನ್ ಅವರು ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.. ಚಿತ್ರದ ಓ ವಿಯೇ ಎಂಬ ಮನುಡಿಯವ ಹಾಡು ಯೂ ಟ್ಯೂಬ್ನಲ್ಲಿ ವೈರಲ್ ಆಗಿದೆ.
ಸುಮಾರು ಮೂರು ವರ್ಷಗಳು ಈ ಚಿತ್ರವನ್ನ ಚಿತ್ರೀಕರಣ ಮಾಡಲಾಗಿದ್ಯಂತೆ. ಸದ್ಯ ಚಿತ್ರೀಕರಣವನ್ನ ಕಂಪ್ಲೀಟ್ ಮಾಡಿಕೊಂಡಿರುವ ಚಿತ್ರತಂಡ, ಚಿತ್ರಮಂದಿರಗಳು ರೀಓಪನ್ ಆದ ಕೂಡ್ಲೇ ಚಿತ್ರವನ್ನ ರಿಲೀಸ್ ಮಾಡಲು ತಯಾರಿ ನಡೆಸಿದೆ. ಇನ್ನೂ ಈ ಚಿತ್ರಕ್ಕೆ ಮಹಿಳೆಯರಿಗೆ ಉಚಿತ ಪ್ರವೇಶವಿದೆಯಂತೆ. ಚಿತ್ರಮಂದಿರಗಳು ಪುನಾರರಂಭವಾದ ತಕ್ಷಣ ಬೆಂಕಿಯ ಬಲೆ ಚಿತ್ರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮೈಸೂರು ಶಿವಾಜಿ ತಿಳಿಸಿದ್ದಾರೆ.
Comments are closed.