ಮಂಗಳೂರು, ಆಕ್ಟೋಬರ್.16: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವ ‘ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದಡಿ ನಡೆಯಲಿದ್ದು, ಅ.17ರಿಂದ ಅ.27ರವರೆಗೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ.17ರ ಶನಿವಾರ ಬೆಳಗ್ಗೆ 9.30ಕ್ಕೆ ಗುರುಪ್ರಾರ್ಥನೆ, 11.30ಕ್ಕೆ ಕಲಶ ಪ್ರತಿಷ್ಠೆ, 12.30ಕ್ಕೆ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ ನಡೆಯಲಿದೆ. 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ, ಸಂಜೆ 7.00ರಿಂದ ಭಜನಾ ಕಾರ್ಯಕ್ರಮ 9.00ರಿಂದ ದೇವಿ ಪುಷ್ಪಾಲಂಕಾರ ಪೂಜೆ ನಡೆಯಲಿದೆ.
ಅ.18ರಂದು ದುರ್ಗಾ ಹೋಮ, ಅ.19ರಂದು ಆರ್ಯ ದುರ್ಗಾ ಹೋಮ, ಅ.20ರಂದು ಭಗವತೀ ದುರ್ಗಾ ಹೋಮ, ಅ.21ರಂದು ಕುಮಾರಿ ದುರ್ಗಾ ಹೋಮ, ಅ.22ರಂದು ಅಂಬಿಕಾ ದುರ್ಗಾ ಹೋಮ, ಅ.23ರಂದು ಮಹಿಷ ಮರ್ದಿನಿ ದುರ್ಗಾ ಹೋಮ, ಅ.24ರಂದು ಚಂಡಿಕಾ ಹೋಮ, ಹಗಲೋತ್ಸವ, ಅ.25ರಂದು ಸರಸ್ವತೀ ದುರ್ಗಾ ಹೋಮ, 11.30ಕ್ಕೆ ಗೋಕರ್ಣನಾಥ ದೇವರಿಗೆ ಶತ ಸೀಯಾಳಾಭಿಷೇಕ, ಅ.26ರಂದು ವಾಗೀಶ್ವರಿ ದುರ್ಗಾ ಹೋಮ, ಅ.27ರಂದು ರಾತ್ರಿ 8.00ಕ್ಕೆ ಗುರುಪೂಜೆ ನಡೆಯಲಿದೆ.
ನಮ್ಮ ದಸರಾ-ನಮ್ಮ ಸುರಕ್ಷಣೆ: ನಮ್ಮ ದಸರಾ-ನಮ್ಮ ಸುರಕ್ಷೆ ಘೋಷವಾಕ್ಯದೊಂದಿಗೆ ನಡೆಯುವ ಮಂಗಳೂರು ದಸರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಈ ಕೆಳಗಿನ ಸೂಚನೆಗಳನ್ನು ನೀಡಲಾಗಿದೆ.
ಸೂಚನೆಗಳು:
6 ವರ್ಷದೊಳಗಿನ ಮಕ್ಕಳನ್ನು ಉತ್ಸವದ 10 ದಿನ ದೇವಳಕ್ಕೆ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ, ಕ್ಷೇತ್ರಕ್ಕೆ ಆಗಮಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು, ಮಾಸ್ಕ್ ಇಲ್ಲದವರಿಗೆ ಪ್ರವೇಶ ಕಡ್ಡಾಯ ನಿಷೇಧ, ದೇವಸ್ಥಾನ ಪ್ರಾಂಗಣ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನ್ಗೊಳಪಡಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ದೇವಸ್ಥಾನದ ವಠಾರ, ದೇವಾಲಯದೊಳಗೆ, ದರ್ಬಾರು ಮಂಟಪದಲ್ಲಿ ಮೊಬೈಲ್ ಬಳಕೆ, ಫೋಟೋ, ಸೆಲ್ಫಿ ಕಡ್ಡಾಯ ನಿಷೇಧ. ಹಿರಿಯ ನಾಗರಿಕರು ಮನೆಯಲ್ಲೇ ದೇವರ ದರ್ಶನಕ್ಕೆ ಅನುಕೂಲವಾಗುವಂತೆ ನೇರ ಪ್ರಸಾರ, ಇವರ ಪರವಾಗಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಗುವುದು ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ (ಆಡ್ವಕೇಟ್) ಅವರು ತಿಳಿಸಿದ್ದಾರೆ.
ಪ್ರತಿನಿತ್ಯ ಮಧ್ಯಾಹ್ನ ಅನ್ನಸಂತರ್ಪಣೆ:
ಪ್ರತಿನಿತ್ಯ ಮಧ್ಯಾಹ್ನ 12.30ರಿಂದ 2.30ರತನಕ ದೇವಸ್ಥಾನದ ನಿರ್ಗಮನ ದ್ವಾರದಲ್ಲಿ ಅನ್ನಪ್ರಸಾದ ಪ್ಯಾಕೇಟ್ ನೀಡಲಾಗುವುದು.
ಅ. 26ರಂದು ನವದುರ್ಗೆ, ಶಾರದಾ ವಿಸರ್ಜನೆ:
ಅ.26ರ ಸೋಮವಾರದಂದು ಬೆಳಗ್ಗೆ 10.00ಕ್ಕೆ ವಾಗೀಶ್ವರಿ ದುರ್ಗಾ ಹೋಮ, 1.00ಕ್ಕೆ ಶಿವಪೂಜೆ, 1.15ಕ್ಕೆ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ, ರಾತ್ರಿ 7.30ರಿಂದ ಪುಷ್ಕರಣಿಯಲ್ಲಿ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ, ಶ್ರೀಶಾರದಾ ವಿಸರ್ಜನೆ, ಅವಭೃತ ಸ್ನಾನ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ: ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ( 94482 83999) ಅಥವಾ ದೇವಳ ಕಚೇರಿ (0824-2983040)ಯನ್ನು ಸಂಪರ್ಕಿಸಬಹುದು.
Comments are closed.