ಕರಾವಳಿ

ಕೊಲ್ಲೂರು ದೇವಸ್ಥಾನ- ನ.24 ರಂದು ಸಂಜೆಯಿಂದ ದರ್ಶನಕ್ಕೆ ನಿರ್ಬಂಧ, 25ಕ್ಕೆ ವಿದ್ಯಾರಂಭ

Pinterest LinkedIn Tumblr

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅಕ್ಟೋಬರ್ 25 ರ ವರೆಗೆ ನವರಾತ್ರಿ ಉತ್ಸವ ಜರುಗಲಿದ್ದು, ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ದೇವಾಲಯದಲ್ಲಿ ಅನುಷ್ಟಾನಗೊಳಿಸುವ ಸಲುವಾಗಿ ಅಕ್ಟೋಬರ್ 24 ರ ಮಹಾನವಮಿಯಂದು ಸಂಜೆ 5 ಗಂಟೆಯಿಂದ ಸಾರ್ವಜನಿಕರಿಗೆ ದೇವರ ದರ್ಶನವನ್ನು ನಿರ್ಭಂಧಿಸಲಾಗಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರಂಭಕ್ಕೆ ಅವಕಾಶ
ಸಾರ್ವಜನಿಕರ ಮತ್ತು ಕರ್ತವ್ಯ ನಿರತ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ದೇವಾಲಯದಲ್ಲಿ ಅನುಷ್ಟಾನಗೊಳಿಸುವ ಸಲುವಾಗಿ ಅಕ್ಟೋಬರ್ 24 ರ ಮಹಾನವಮಿಯಂದು ನಡೆಯಲಿರುವ ರಥೋತ್ಸವವನ್ನು ದೇವಸ್ಥಾನದ ಆವರಣದ ಒಳಗೆ ದೇವಸ್ಥಾನದ ಅರ್ಚಕರು, ಪುರೋಹಿತರು, ಸಿಬ್ಬಂದಿಗಳು ಮಾತ್ರ ನೆರವೇರಿಸಲಿದ್ದಾರೆ.
ಅಕ್ಟೋಬರ್ 25 ರ ವಿಜಯದಶಮಿ ದಿನದಂದು ಬೆಳಗ್ಗೆ 4 ಗಂಟೆಯಿಂದ ವಿದ್ಯಾರಂಭ ಪ್ರಾರಂಭವಾಗಲಿದ್ದು, ವಿದ್ಯಾರಂಭಕ್ಕೆ ದಂಪತಿ ಸಮೇತ ಮಗುವಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.