ಬೆಂಗಳೂರು: ವಾಟ್ಸಾಪ್ ಬಳಕೆದಾರರಿಗೆ ಸಿಹಿ ಸುದ್ಧಿಯೊಂದು ಹೊರಬಿದ್ದಿದೆ. ಚಾಟ್ಗಷ್ಟೇ ಸೀಮಿತವಾಗಿದ್ದ ವಾಟ್ಸಾಪ್ ಇದೀಗ ಇ – ಕಾಮರ್ಸ್ ವಿಭಾಗಕ್ಕೂ ಕಾಲಿಡ್ತಾ ಇದ್ದು ನೀವು ವಾಟ್ಸಾಪ್ ಬಳಸಿ ಆನ್ಲೈನ್ ಶಾಪಿಂಗ್ ಮಾಡಬಹುದಾಗಿದೆ.
ವಾಟ್ಸ್‌ಆಯಪ್‌ನಲ್ಲಿಯೂ ಶಾಪಿಂಗ್ ಮಾಡುವ ಫೀಚರ್ ಶೀಘ್ರದಲ್ಲೇ ಲಭ್ಯವಾಗಲಿದೆ. ವಾಟ್ಸ್‌ಆಯಪ್ ಬ್ಯುಸಿನೆಸ್ ಅಕೌಂಟ್ ಹೊಂದಿದ್ದರೆ ಚಾಟ್ ಸ್ಕ್ರೀನ್‌ನಿಂದ ಕೆಟಲಾಗ್‌ಗಳನ್ನು ಗ್ರಾಹಕರಿಗೆ ನೀಡುವ ಮೂಲಕ ನೇರವಾಗಿ ಉತ್ಪನ್ನಗಳನ್ನು ಮಾರಬಹುದು.
ಈ ಮೂಲಕ ಲಭ್ಯವಿರುವ ಉತ್ಪನ್ನಗಳನ್ನು ಗ್ರಾಹಕರಿಗೆ ಸುಲಭವಾಗಿ ನೋಡಲು ಮತ್ತು ಚಾಟ್ ಮೂಲಕ ನೇರವಾಗಿ ಖರೀದಿ ಮಾಡಲು ಸಾಧ್ಯವಾಗುವಂತೆ ಮಾಡಲಾಗುವುದು ಎಂದು ವಾಟ್ಸ್‌ಆಯಪ್ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.
ಗ್ರಾಹಕರು ಅವಶ್ಯವಿರುವ ವಸ್ತುಗಳನ್ನ ಪರಿಶೀಲನೆ ಮಾಡಲು ಹಾಗೂ ಖರೀದಿಸಲು ಶೀಘ್ರದಲ್ಲೇ ನಾವು ವ್ಯವಸ್ಥೆ ಮಾಡುತ್ತೇವೆ ಅಂತಾ ಫೇಸ್ಬುಕ್ ಆಧಾರಿತ ವಾಟ್ಸಾಪ್ ಸಂಸ್ಥೆ ಹೇಳಿದೆ. ವಾಟ್ಸಾಪ್ನಲ್ಲಿ ಇ ಶಾಪಿಂಗ್ ಮಾಡೋದ್ರಿಂದ ಸಣ್ಣ ಉದ್ಯಮಗಳಿಗೆ ನೆರವಾಗಲಿದೆ . ಮುಂದಿನ ತಿಂಗಳಿನಿಂದ ಈ ಸೌಲಭ್ಯ ಆರಂಭಿಸಲಿದ್ದೇವೆ ಅಂತಾ ಕಂಪನಿ ಮಾಹಿತಿ ನೀಡಿದೆ.
ಗ್ರಾಹಕರು ತಾವು ಖರೀದಿಸಲು ಬಯಸುವ ಉತ್ಪನ್ನಗಳನ್ನು ಶಾಪಿಂಗ್ ಕಾರ್ಟ್‌ಗೆ ಸೇರಿಸಿ ಉತ್ಪನ್ನಗಳನ್ನು ಖರೀದಿಸಬಹುದು. ಈ ಫೀಚರ್‌ಗಳನ್ನು ಈಗಾಗಲೇ ಇರುವ ವಾಣಿಜ್ಯ ಮತ್ತು ಗ್ರಾಹಕ ಪರಿಹಾರಗಳೊಂದಿಗೆ ಸಂಯೋಜಿಸುವ ಮೂಲಕ ವ್ಯವಹಾರಗಳನ್ನು ಮತ್ತಷ್ಟು ಸುಲಭಗೊಳಿಸಲು ನಾವು ಬಯಸುತ್ತೇವೆ. ಪ್ರಸ್ತುತ ಕಾಲಘಟ್ಟದಲ್ಲಿ ನಷ್ಟ ಅನುಭವಿಸುತ್ತಿರುವ ಹಲವಾರು ಸಣ್ಣ ಉದ್ಯಮಗಳಿಗೆ ಇದು ಸಹಾಯವಾಗಲಿದೆ ಎಂದು ಕಂಪನಿ ಹೇಳಿದೆ.
Comments are closed.